December 21, 2024

Bhavana Tv

Its Your Channel

ಮೇ ೧೮ ರಿಂದ ನೂತನ ಲಾಕ್ ಡೌನ್ ಜಾರಿ ೨೦ ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ ಪ್ರಧಾನಿ ಮೋದಿ

ದೇಶದ ಜನರಿಗೆ ಎಲ್ಲರಿಗೂ ಅನುಕೂಲವಾಗುವಂತೆ ಆರ್ಥಿಕ ಪ್ಯಾಕೇಜ್ ನೀಡಲಾಗಿದ್ದು, ಸಂಘಟಿತ, ಅಸಂಘಟಿತ ವಲಯಕ್ಕೆ ಪ್ಯಾಕೇಜ್ ಸೌಲಭ್ಯ ಸಿಗಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಕೊರೋನಾ ಸಂಕಷ್ಟದ ಹೊತ್ತಲ್ಲಿ ಪ್ರಧಾನಿ ಮೋದಿ ದೇಶದ ಜನರನ್ನುದ್ದೇಶಿಸಿ 5 ನೇ ಬಾರಿಗೆ ಭಾಷಣ ಮಾಡಿದ ಅವರು, ಸ್ವದೇಶಿ ವಸ್ತುಗಳ ತಯಾರಿಕೆ ಮತ್ತು ಪೂರೈಕೆಗೆ ಪ್ಯಾಕೇಜಿನಲ್ಲಿ ಒತ್ತು ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ 4 ನೇ ಹಂತದ ಲಾಕ್ ಡೌನ್ ಘೋಷಣೆ ಮಾಡಿದ ಮೋದಿ, 4ನೇ ಹಂತದ ಲಾಕ್ ಡೌನ್ ಸಂಪೂರ್ಣವಾಗಿ ಹೊಸದಾಗಿರುತ್ತದೆ. ಲಾಕ್ ಡೌನ್ 4 ಹೊಸ ರೂಪ ಮತ್ತು ಹೊಸ ನಿಯಮದೊಂದಿಗೆ ಬರಲಿದೆ. ಮೇ 18 ಕ್ಕೆ ಮೊದಲು ಲಾಕ್ ಡೌನ್ ನಿಯಮ ತಿಳಿಸಲಾಗುವುದು. ಕೊರೋನಾ ವಿರುದ್ಧದ ಹೋರಾಟ ಸುದೀರ್ಘವಾಗಿರುತ್ತದೆ. ಇದಕ್ಕಾಗಿ ಲಾಕ್ಡೌನ್ ಮುಂದುವರಿಸುವುದು ಅನಿವಾರ್ಯವಾಗಿದ್ದು, ಹೊಸ ರೂಪ ಹೊಸ ನಿಯಮದೊಂದಿಗೆ ಲಾಕ್ಡೌನ್ 4 ಜಾರಿ ಮಾಡಲಾಗುವುದು ಎಂದು ಹೇಳಿದ್ದಾರೆ.

error: