March 5, 2024

Bhavana Tv

Its Your Channel

ಈಜಿಪ್ಟ್ ನಲ್ಲಿ ನಡೆಯಲಿರುವ ಹವಾಮಾನ ವೈಫರೀತ್ಯದ ವಿಶ್ವ ನಾಯಕರ ಸಮಾವೇಶಕ್ಕೆ ಕನ್ನಡಿಗ ಐಎಫ್‌ಎಸ್ ಅಧಿಕಾರಿ ಎ.ಟಿ. ದಾಮೋದರ ನಾಯ್ಕ

ನವದೆಹಲಿ:–ಈಜಿಪ್ಟ್ ನಲ್ಲಿ ನಡೆಯಲಿರುವ ಹವಾಮಾನ ವೈಫರೀತ್ಯದ ವಿಶ್ವ ನಾಯಕರ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತೀಯ ತಂಡದ ಬೆನ್ನೆಲುಬಾಗಿ ಪ್ರತಿನಿಧಿಸುತ್ತಿರುವ ಕನ್ನಡಿಗ ಐಎಫ್‌ಎಸ್ ಅಧಿಕಾರಿ ಎ.ಟಿ. ದಾಮೋದರ ನಾಯ್ಕ


ವಿಶ್ವ ಸಂಸ್ಥೆಯು ಆಯೋಜಿಸುತ್ತಿರುವ(UNFCC/COP-27, WORLD CLIMATE SUMMIT) 27ನೇ ಸಮಾವೇಶದಲ್ಲಿ, ಪ್ರಪಂಚದ ಸುಮಾರು 183 ದೇಶಗಳ ರಾಷ್ಟ್ರಧ್ಯಕ್ಷರು ಹಾಗೂ ಪ್ರಧಾನಿಗಳ ನೇತೃತ್ವದ ತಂಡಗಳು ಭಾಗವಹಿಸುತ್ತಿದ್ದಾರೆ. ಈ ಸಮಾವೇಶವು ನವೆಂಬರ್ 6 ರಿಂದ 18 ರ ವರೆಗೆ ಈಜಿಪ್ಟ್ ನ ಶರ್ಮ್ ಅಲ್ ಶೇಖ್ ನಗರದಲ್ಲಿ ನಡೆಯಲಿದೆ.

ವಿಶ್ವ ಪರಿಸರದ ಮೇಲೆ ಇಂಗಾಲದ ಡೈ ಆಕ್ಸೆöÊಡ್ ನಿಂದ ಆಗುತ್ತಿರುವ ದುಷ್ಪರಿಣಾಮ ಹಾಗೂ ಅದರ ಬಿಡುಗಡೆಯನ್ನು ಕಡಿತಗೊಳಿಸುವ ಸಲುವಾಗಿ ಕೈಗೊಂಡ ಭಾರತದ ಈವರೆಗಿನ ಪ್ರಯತ್ನಗಳು ಮತ್ತು ಮುಂದಿನ ನಿಲುವುಗಳ ಕುರಿತಾಗಿ ವಿಶ್ವ ಸಮುದಾಯದ ನಾಯಕರುಗಳ ಮತ್ತು ಅಭಿವೃದ್ಧಿ ಹೊಂದಿರುವ ಅಮೇರಿಕಾ, ಚೀನಾ, ರಷ್ಯಾ, ಜಪಾನ್ ಮುಂತಾದ ರಾಷ್ಟ್ರಗಳ ಜೊತೆಗಿನ ಮಾತುಕತೆಗಳಲ್ಲಿ, ಪ್ರಧಾನಿ ನೇತೃತ್ವದ ತಂಡದಲ್ಲಿರುವ ಕೇಂದ್ರ ಅರಣ್ಯ & ಪರಿಸರ ಸಚಿವರು, ಹಲವು ರಾಜ್ಯದ ಮುಖ್ಯಮಂತ್ರಿಗಳು ಮತ್ತು ಇತರ ಅಧಿಕಾರಿಗಳ ತಂಡದೊAದಿಗೆ ದಾಮೋದರ ನಾಯ್ಕ್ ರವರು ಪ್ರಮುಖ ಪಾತ್ರ ವಹಿಸಲಿದ್ದಾರೆ.

ಲಕ್ಷದ್ವೀಪ ದಲ್ಲಿ ಪ್ರಧಾನ ಕಾರ್ಯದರ್ಶಿ ಯಾಗಿ ಸುಮಾರು ಐದು ವರ್ಷಗಳ ಕಾಲ ಅಪ್ರತಿಮ ಸೇವೆ ಸಲ್ಲಿಸಿರುವ ದಾಮೋದರ ನಾಯ್ಕ್ ರವರನ್ನು ಭಾರತ ಸರಕಾರ ಇತ್ತೆಚೆಗಷ್ಟೇ ವರ್ಗಾವಣೆ ಮಾಡಿತ್ತು. ಪ್ರಸ್ತುತ ಅವರು ಅರುಣಾಚಾಲ ಪ್ರದೇಶದ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಪರಿಸರ & ತಾಪಮಾನ ವೈಫರಿತ್ಯ ಹುದ್ದೆ ಮತ್ತು ಮುಖ್ಯಮಂತ್ರಿಗಳ ವಿಶೇಷ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

error: