ಹೊನ್ನಾವರ: ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ನಡೆದ ಪೂಜ್ಯ ಶ್ರೀ ಡಾ.ವೀರೇಂದ್ರ ಹೆಗ್ಗಡೆಯವರ ಜನ್ಮದಿನೋತ್ಸವ ಮತ್ತು ಶಾಲಾ ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಣೆ ಕಾರ್ಯಕ್ರಮ ಹೊನ್ನಾವರ ತಾಲೂಕಿನ ಹೊಸಪಟ್ಟಣದ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು
ಈ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿಗಳಾದ ವಸಂತಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ನಮ್ಮ ಸಂಘವು ಪೂಜ್ಯರ ಆದೇಶದಂತೆ ಹಲವಾರು ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದೆ ಅದರಂತೆ ಈ ಭಾಗದಲ್ಲಿ ಇವತ್ತು ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸುವ ಮುಖಾಂತರ ಪೂಜ್ಯರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿದ್ದೇವೆ ಎಲ್ಲರಿಗೂ ಪೂಜ್ಯರ ಆಶೀರ್ವಾದ ಮತ್ತು ಶ್ರೀ ಮಂಜುನಾಥೇಶ್ವರನ ಆಶೀರ್ವಾದ ಸಿಗಲಿ ಎಂದರು.
ಮತ್ತು ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷರಾದ ಮಂಜುನಾಥ ಗೌಡ ಮಾತನಾಡಿ ಜನರು ಎಲ್ಲರನ್ನೂ ಗೌರವಿಸುತ್ತಾರೆ ಆದರೆ ಬದುಕಿದ್ದಾಗಲೇ ದೇವರಂತೆ ಪೂಜಿಸಲ್ಪಡುವ ವ್ಯಕ್ತಿ ಅಂದ್ರೆ ಅದು ಪೂಜ್ಯ ಡಾಕ್ಟರ್ ವೀರೇಂದ್ರ ಹೆಗಡೆಯವರು. ಸರ್ಕಾರಗಳು ಮಾಡಬೇಕಾಗಿರುವ ಕೆಲಸವನ್ನು ಪೂಜ್ಯರ ಮಾರ್ಗದರ್ಶನದಲ್ಲಿ ಇಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮಾಡುತ್ತಾ ಇದೆ ಇವರನ್ನು ನೋಡಿ ಈಗಿನ ಸರ್ಕಾರಗಳು ಬಹಳಷ್ಟು ಕಲಿಯಬೇಕಿದೆ. ಗ್ರಾಮಗಳ ಅಭಿವೃದ್ಧಿ ಹೊಂದಿದ್ದರೆ ಮಾತ್ರ ದೇಶ ಅಭಿವೃದ್ಧಿಯಾಗುತ್ತದೆ ಎನ್ನುವ ಉದ್ದೇಶದಿಂದ ಗ್ರಾಮ ಅಭಿವೃದ್ಧಿ ಯೋಜನೆಯನ್ನು ತಂದಿದ್ದಾರೆ ಪೂಜ್ಯರು ಇನ್ನೂ ನೂರಾರು ವರ್ಷ ಬದುಕಿ ಅವರ ಈ ಸೇವೆ ಇಡೀ ದೇಶದಾದ್ಯಂತ ಎಲ್ಲ ವರ್ಗದ ಜನಕ್ಕೆ ಸಿಗುವಂತಾಗಲಿ ಎಂದರು.
ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಾದ ಕೇಶವ ಗೌಡ ಅವರು ಎಲ್ಲರನ್ನು ಸ್ವಾಗತಿಸಿದರು
ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಶಿಕ್ಷಕರಾದ ಅನಂತ ಹಳ್ಳೆರ್ ಗುಣವಂತೆ ವಲಯದ ಮೇಲ್ವಿಚಾರಕರಾದ ಶ್ರೀ ಉದಯ ನಾಯ್ಕ ವಿಪತ್ತು ನಿರ್ವಹಣಾ ಘಟಕದ ಸಂಯೋಜಕೀ ಸಂಗೀತ ನಾಯ್ಕ್, ಗ್ರಾಮ ಪಂಚಾಯತ ಸದಸ್ಯರಾದ ರಾಘು ಗೌಡ, ಮಹೇಶ್ ಮೆಸ್ತ ಹೊನ್ನಾವರ, ಸೇವಾ ಪ್ರತಿನಿಧಿ ಸವಿತಾ ಗೌಡ, ಮಮತಾ ಮತ್ತು ಇತರ ಸಂಘದ ಸ್ವಯಂಸೇವಕರು ಶಿಕ್ಷಕ ವೃಂದದವರು ಮತ್ತು ಶಾಲೆ ವಿದ್ಯಾರ್ಥಿಗಳು ಹಾಜರಿದ್ದರು
More Stories
“ದಿ ಓಶೀಯನ್ ಕನೆಕ್ಷನ್” ಎಂಬ ಸಾಕ್ಷ್ಯಚಿತ್ರದ ಪ್ರದರ್ಶನ
ವಾಹನ ಚಾಲಕನ ಅಜಾಗರೂಕ ಚಾಲನೆಯಿಂದ ಕಡವೆಯೊಂದು ಗಂಭೀರ ಗಾಯ
ಜಲ್ಲಿ ತುಂಬಿ ಸಾಗಾಟ ಮಾಡುತ್ತಿದ್ದ ಎರಡು ವಾಹನ ವಶಕ್ಕೆ