May 5, 2024

Bhavana Tv

Its Your Channel

ಶರಾವತಿ ಉತ್ಸವ ರಾಜ್ಯ ಮಟ್ಟದ ಉತ್ಸವವಾಗಬೇಕಿದೆ -ಗೋವಿಂದ ನಾಯ್ಕ

ಹೊನ್ನಾವರ: ಶರಾವತಿ ನದಿಯು ಇಡೀ ರಾಜ್ಯಕ್ಕೆ ಪರಿಚಯವಾಗಲು ಶರಾವತಿ ಉತ್ಸವ ರಾಜ್ಯ ಮಟ್ಟದ ಉತ್ಸವವಾಗಬೇಕಿದೆ ಎಂದು ರಾಜ್ಯ ಪಶ್ಚಿಮ ಘಟ್ಟ ಕಾರ್ಯಪಡೆಯ ಅಧ್ಯಕ್ಷರಾದ ಗೋವಿಂದ ನಾಯ್ಕ ಅಭಿಪ್ರಾಯಪಟ್ಟರು.

ಅವರು ಪಟ್ಟಣದ ಸೆಂಟ್ ಅಂತೋನಿ ಪ್ರೌಡಶಾಲಾ ಮೈದಾನದಲ್ಲಿ ಶರಾವತಿ ಸಾಂಸ್ಕೃತಿಕ ವೇದಿಕೆಯ ಆಯೋಜಿಸಿದ 16 ವರ್ಷದ ಶರಾವತಿ ಉತ್ಸವ ಕಾರ್ಯಕ್ರಮದಲ್ಲಿ ಶರಾವತಿ ಜಲಕುಂಭಕ್ಕೆ ಆರಿತಿ ಬೆಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು, ಶಿವಮೊಗ್ಗದ ಅಂಬುತೀರ್ಥದಲ್ಲಿ ಹುಟ್ಟಿ ತಾಲೂಕಿನ ಜನತೆಗೆ ಜೀವನಾಡಿಯಾಗಿದೆ. ಇಡೀ ರಾಜ್ಯಕ್ಕೆ ಬೆಳಕು ನೀಡುವ ಶರಾವತಿಯ ನದಿಯ ಹೆಸರಿನಲ್ಲಿ ನಡೆಯುವ ಈ ಉತ್ಸವ ಮುಂದಿನ ದಿನದಲ್ಲಿ ಇನ್ನಷ್ಟು ವಿಜೃಂಭಣೆಯಿAದ ನಡೆಯಲಿ ಎಂದರು.
ಕೆರೆಮನೆ ಯಕ್ಷಗಾನ ಅಕಾಡೆಮಿಯ ನಿರ್ದೇಶಕರು ಯಕ್ಷಗಾನ ಕಲಾವಿದರಾದ ಕೆರೆಮನೆ ಶಿವಾನಂದ ಹೆಗಡೆ ಮಾತನಾಡಿ ನದಿ ಮೂಲ ಹಾಗೂ ನೆಲ ಮೂಲವನ್ನು ಮುಂದಿನ ತಲೆಮಾರಿಗೆ ಜೀವಂತವಾಗಿರಿಸಲು ಸಾಂಸ್ಕೃತಿಕ ಉತ್ಸವವಾಗಿ ಶರಾವತಿ ಉತ್ಸವ ಇಂದು ನಮ್ಮ ಮುಂದೆ ಪ್ರದರ್ಶನಗೊಳ್ಳುತ್ತಿದೆ. ಸರ್ಕಾರಗಳು ರಾಜಕಾರಿಗಳು ರ‍್ಯಾಲಿ ಬದಲಿಗೆ ಸಾಂಸ್ಕೃತಿಕ ರ‍್ಯಾಲಿ ನಡೆಸುವತ್ತ ಚಿಂತಿಸಬೇಕಿದೆ. ಇಂತಹ ಕಾರ್ಯಕ್ರಮ ಹೊನ್ನಾವರದ ಅಸ್ಮಿತೆಯಾಗಲಿ ಎಂದು ಶುಭಹಾರೈಸಿದರು.
ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ ಲಕ್ಷಾಂತರ ಜೀವನ ನೀಡಿದ ಶರಾವತಿಯ ಹೆಸರಿನಲ್ಲಿ ಉತ್ಸವ ನಡೆಯುತ್ತಿರುವುದು ಹೆಮ್ಮೆಯ ವಿಷಯ. ಸಂಸ್ಕ್ರತಿಯನ್ನು ಉಳಿಸಿ ಮುಂದಿನ ತಲೆಮಾರಿಗೆ ವರ್ಗಾಯಿಸಲು ಇಂತಹ ಕಾರ್ಯಕ್ರಮದಿಂದ ಆಗುತ್ತಿದೆ. ವಿವಿಧ ಕಲಾಪ್ರಕಾರಗಳಿಗೆ, ಕಲಾವಿದರಿಗೆ ಪೊತ್ಸಾಹದ ಜೊತೆಗೆ ಪ್ರತಿ ಬಾರಿಯೂ ವಿವಿಧ ಸಾಧಕರನ್ನು ಸನ್ಮಾನಿಸುವ ಮೂಲಕ ಸಮಾಜಕ್ಕೆ ಪರಿಚಯಿಸುವ ಕಾರ್ಯ ಮಾದರಿಯಾಗಿದೆ ಎಂದು ಸಂಘಟನೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕ ಆಸ್ಪತ್ರೆಯ ವೈದ್ಯರಾದ ಡಾ ರಾಜೇಶ ಕಿಣಿ, ಯಕ್ಷಗಾನ ಕಲಾವಿದರಾದ ಸರ್ವೆಶ್ವರ ಹೆಗಡೆ, ನಿವೃತ್ತ ಸೈನಿಕ ಅಶೋಕ ನಾಯ್ಕ ಇವರನ್ನು ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಶರಾವತಿ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷರಾದ ವೆಂಕ್ರಟಮಣ ಹೆಗಡೆ ಸ್ವಾಗತಿಸಿದರು. ನಿವೃತ್ತ ಪ್ರಾರ್ಚಾಯರಾದ ಎಸ್.ಜಿ.ಭಟ್ ಕಾರ್ಯಕ್ರಮದ ಕುರಿತು ಪ್ರಾಸ್ತವಿಕವಾಗಿ ಮಾತನಾಡಿದರು. ಸಂಘಟನೆಯ ಕಾರ್ಯದರ್ಶಿ ಶಂಭು ಹೆಗಡೆ ಸಂತನ್ ವಂದಿಸಿ, ನಾಗರಾಜ ಹೆಗಡೆ ಕಾರ್ಯಕ್ರಮ ನಿರ್ವಹಿಸಿದರು.

  ಪ್ರತಿಭಾನ್ವಿತ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ನಾಟ್ಯಂಜಲಿ  ಕಲಾ ಕೇಂದ್ರ ಶಿರಸಿ ಇವರಿಂದ ಭರತನಾಟ್ಯ, ಶ್ರೀ ಚೆನ್ನಕೇಶವ ಪ್ರೌಡಶಾಲೆ ಕರ್ಕಿ ವಿದ್ಯಾರ್ಥಿಗಳಿಂದ ಸುಗ್ಗಿ ಕುಣಿತ, ಹಾಗೂ ಯಕ್ಷಗಾನ ನೃತ್ಯವೈಭವ, ಗಂದರ್ವ ಕಲಾಕೇಂದ್ರ ಕುಮಟಾ ಇವರಿಂದ ಸಂಗೀತ ಕಾರ್ಯಕ್ರಮ, ದಿವಾಕರ ಇಂಗ್ಲೀಷ್ ಮಾಧ್ಯಮ ಶಾಲೆ ಧಾರೇಶ್ವರ ಇವರಿಂದ ನೃತ್ಯ ನೇರವೇರಿತು.  ವಿವಿಧ ಕಲಾವಿದರ ಕೂಡುವಿಕೆಯಲ್ಲಿ ದಕ್ಷಯಜ್ಞ ಯಕ್ಷಗಾನ ಪ್ರದರ್ಶನಗೊಂಡಿತು.
error: