May 5, 2024

Bhavana Tv

Its Your Channel

ಡಿ. 17 ಕ್ಕೆ ಶಿರಸಿಯಲ್ಲಿ ಅರಣ್ಯವಾಸಿಗಳ ಬೃಹತ್ ರ‍್ಯಾಲಿ; ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಲು ತೀರ್ಮಾನ

ಹೊನ್ನಾವರ: ರಾಜ್ಯಮಟ್ಟದ ಅರಣ್ಯವಾಸಿಗಳನ್ನ ಉಳಿಸಿ ರ‍್ಯಾಲಿ ಇದೆ. ಈ ಹಿಂದೆ ಡಿಸೆಂಬರ್ 10 ಕ್ಕೆ ನಿರ್ಧರಿಸಿರುವುದನ್ನು ಬದಲಾಯಿಸಿ ಡಿಸೆಂಬರ್ 17 ಕ್ಕೆ ಶಿರಸಿಯಲ್ಲಿ ಸಂಘಟಿಸಲು ನಿರ್ಧರಿಸಲಾಗಿದ್ದು, ರ‍್ಯಾಲಿಗೆ ಹೊನ್ನಾವರ ತಾಲೂಕಿನಿಂದ ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಲು ನಿರ್ಧರಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷರವೀಂದ್ರನಾಯ್ಕ ಹೇಳಿದರು.

ಅವರು ಇಂದು ಹೊನ್ನಾವರ ತಾಲೂಕಿನ ಮೂಡಗಣಪತಿ ದೇವಾಲಯದ ಸಭಾಂಗಣದಲ್ಲಿ ಜರುಗಿದ ಹೊನ್ನಾವರ ತಾಲೂಕ ಅರಣ್ಯ ಅತಿಕ್ರಮಣದಾರರಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಅರಣ್ಯವಾಸಿಗಳ ಸಮಸ್ಯೆಗೆ ಕಾನೂನಾತ್ಮಕ ಪರಿಹಾರ ದೋರಕದೇ ಇರುವುದರಿಂದ ಹಾಗೂ ಅರಣ್ಯ ಭೂಮಿ ಹಕ್ಕಿಗಾಗಿ ನಿರ್ಣಾಯಕ ಹೋರಾಟದ ಮೂಲಕ ಸರಕಾರದ ಮೇಲೆ ಒತ್ತಡ ಹೇರುವ ಹಿನ್ನೆಲೆಯಲ್ಲಿ ರ‍್ಯಾಲಿ ಸಂಘಟಿಸಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಅರಣ್ಯ ಅತಿಕ್ರಮಣದಾರರು ಭಾಗವಹಿಸಬೆಕೇಂದು ಅವರು ಹೇಳಿದರು.

ಸಂಘಟನೆ ಬಲಗೊಳಿಸಿ:
ಸಭೆಯ ಅಧ್ಯಕ್ಷತೆಯನ್ನು ವಹಿಸಿದ ತಾಲೂಕ ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಕಾAತ ಕೋಚರೆಕರ ಮಾತನಾಡುತ್ತಾ ಭೂಮಿ ಹಕ್ಕಿಗಾಗಿ ಹೋರಾಟ ಮುಂದುವರೆಸುವುದು ಅನಿವಾರ್ಯ. ನಮ್ಮ ಉಳಿವಿಗಾಗಿ ಭೂಮಿ ಹಕ್ಕಿಗಾಗಿ ಹೋರಾಟದ ಸಂಘಟನೆ ಬಲಗೊಳಿಸುವುದು ಅವಶ್ಯವಾಗಿದೆ ಎಂದರು.
ಹೋರಾಟಗಾರರಾದ ಗಿರೀಶ್ ನಾಯ್ಕ ತಾಲೂಕ ಸಂಚಾಲಕ, ದಾವುದ್ ನಗರ ಘಟಕ ಉಪಾಧ್ಯಕ್ಷ, ರಝಾಕ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸಭೆಯಲ್ಲಿ ನಗರ ಅಧ್ಯಕ್ಷಸುರೇಶ್ ಮೇಸ್ತಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ಸಭೆಯಲ್ಲಿ ಶಿವಾನಂದ ಪಟಗಾರ, ಕೃಷ್ಣಗೌಡ, ವೆಂಕಟೇಶ ನಾಯ್ಕ, ಶ್ರೀಮತಿ ಭಂಡಾರಿ, ದಿನೇಶ್ ನಾಯ್ಕ, ಸುಧಾಕರ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.

error: