ಸಿದ್ಧಾಪುರ: ಅರಣ್ಯವಾಸಿಗಳ ಸಮಸ್ಯೆಗಳಿಗೆ ಸ್ಪಂಧಿಸುವಲ್ಲಿ ಸರಕಾರದ ಮೇಲೆ ಒತ್ತಡ ಹೇರುವ ಹಿನ್ನೆಲೆಯಲ್ಲಿ ಶಿರಸಿಯಲ್ಲಿ ಡಿ. 17 ರಂದು ಸಂಘಟಿಸಲಾದ ಅರಣ್ಯವಾಸಿಗಳನ್ನ ಉಳಿಸಿ ರ‍್ಯಾಲಿಯಲ್ಲಿ ಅತಿಕ್ರಮಣದಾರರು ಶಕ್ತಿ ಪ್ರದರ್ಶಿಸಿ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.
ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಶ್ರಯದಲ್ಲಿ ಇಂದು ಸಿದ್ದಾಪುರ ತಾಲೂಕಿನ ಕೋಲಸಿರ್ಸಿಯಲ್ಲಿ ಅರಣ್ಯವಾಸಿಗಳನ್ನ ಉಳಿಸಿ ರ‍್ಯಾಲಿಯ ಪೂರ್ವಭಾವಿ ಸಭೆಯನ್ನ ಉದ್ದೇಶಿಸಿ ಮಾತನಾಡುತ್ತಿದ್ದರು. ಅರಣ್ಯ ಭೂಮಿ ಮೇಲೆ ಅವಲಂಭಿತವಾಗಿರುವ ಅರಣ್ಯವಾಸಿಗಳನ್ನ ರಕ್ಷಿಸುವ ಜವಬ್ದಾರಿ ಸರಕಾರದಾಗಿದ್ದು ಈ ದಿಶೆಯಲ್ಲಿ ಸರಕಾರ ಬದ್ಧತೆಯನ್ನು ಪ್ರಕಟಿಸಬೇಕೆಂದು ಅವರು ಹೇಳಿದರು.
ಕಾನೂನಾತ್ಮಕ ಹೋರಾಟ:
ಕಾನೂನಾತ್ಮಕ ಮತ್ತು ಸಂಘಟನಾತ್ಮಕ ಹೋರಾಟವನ್ನ ಅರಣ್ಯವಾಸಿಗಳಿಗೆ ಹಕ್ಕು ಒದಗಿಸುವವರೆಗೂ ಹೋರಾಟಗಾರರ ವೇದಿಕೆಯು ಹೋರಾಟವನ್ನ ಮುಂದುವರೆಸುತ್ತದೆ ಎಂದು ಅವರು ಹೇಳುತ್ತಾ ಸುಫ್ರೀಂ ಕೋರ್ಟನಲ್ಲೂ ಅರಣ್ಯವಾಸಿಗಳ ಪರವಾಗಿ ಪ್ರಬಲವಾದ ಕಾನೂನಾತ್ಮಕ ಹೋರಾಟವನ್ನ ವೇದಿಕೆ ಮಾಡುತ್ತದೆ ಎಂದು ಅವರು ಹೇಳಿದರು. ಸಭೆಯಲ್ಲಿ ಪಾಂಡುರoಗ ವಿ ನಾಯ್ಕ ಚನ್ನಮಾಂವ್ ಸ್ವಾಗತವನ್ನ ಮಾಡಿದರು
ವೇದಿಕೆಯ ಮೇಲೆ ಪಾಂಡುರoಗ ನಾಯ್ಕ ಕೋಲಸಿರ್ಸಿ, ರಾಜೆಶ್ ನಾಯ್ಕ ಕಟ್ಟಿ, ಅಣ್ಣಪ್ಪ ಕೃಷ್ಣ ನಾಯ್ಕ ಚನ್ನಮಾಂವ್, ತಿಲಕ್‌ಕುಮಾರ್ ನಾಯ್ಕ ಅವರಗುಪ್ಪ, ವಿರಭದ್ರನಾಯ್ಕ ಕಸ್ತೂರ, ಭಾಲಕೃಷ್ಣ ಗರ‍್ಯ ನಾಯ್ಕ, ಮಾಭ್ಲೇಶ್ವರ ಕೃಷ್ಣ ನಾಯ್ಕ, ಮಾಬ್ಲೇಶ್ವರ ಬೇಡ್ಕಣಿ ಮುಂತಾದವರು ಉಪಸ್ಥಿತರಿದ್ದರು.
More Stories
ಅಪರೂಪದ ದೇವಾಲಯ. ಬಲಮುರಿ, ತ್ರಿನೇತ್ರ, ಆರುಕೈಗಳುಳ್ಳ ಮಹಾ ಗಣಪತಿ
ಜನಮನ ಸೂರೆಗೊಂಡ ನಾಣಿಕಟ್ಟಾ ಯಕ್ಷಗಾನ ಹಿಮ್ಮೇಳ ವೈಭವ.
ನಿಲ್ಕುಂದ- ಸಂತೆಗುಳಿ ಸರ್ವಋತು ರಸ್ತೆಗೆ ನಿರ್ಲಕ್ಷö್ಯ ;
ಹೋರಾಟಕ್ಕೂ ಸ್ಪಂಧಿಸದ ಸರಕಾರ- ರವೀಂದ್ರನಾಯ್ಕ.