December 21, 2024

Bhavana Tv

Its Your Channel

ಕಣ್ಮನ ಸೆಳೆದ ಆರ್.ಎಸ್.ಎಸ್ ಮಹಿಳಾ ಕಾರ್ಯಕರ್ತೆಯರ ಆಕರ್ಷಕ ಪಥಸಂಚಲನ

ಬಾಗಲಕೋಟೆ: ಸಂಕ್ರಾoತಿ ಹಬ್ಬದ ಹಿನ್ನೆಲೆ ಬಾಗಲಕೋಟೆ ನಗರದಲ್ಲಿ ರಾಷ್ಟ್ರ ಸೇವಿಕಾ ಸಮಿತಿ ವತಿಯಿಂದ ನಡೆದ ಆರ್.ಎಸ್.ಎಸ್ ಮಹಿಳಾ ಕಾರ್ಯಕರ್ತೆಯರ ಆಕರ್ಷಕ ಪಥಸಂಚಲನ ಕಣ್ಮನ ಸೆಳೆಯಿತು.

ಬಾಗಲಕೋಟೆ ಬಸವೇಶ್ವರ ಶಿಕ್ಷಣ ಸಂಸ್ಥೆಯ ಮೈದಾನದಿಂದ ಆರಂಭವಾದ ಪಂಥಸAಚಲನವು
ನಗರದ ಬಸವೇಶ್ವರ ಸರ್ಕಲ್, ವಲ್ಲಭ್ ಬಾಯಿ ಸರ್ಕಲ್, ಎಂ ಜಿ ರೋಡ್ ಸೇರಿದಂತೆ ಹೀಗೆ ನಗರದ ಪ್ರಮುಖ ಬೀದಿಗಳಲ್ಲಿ ರಾಷ್ಟ್ರ ಸೇವಿಕಾ ಸಮಿತಿ ತಂಡದ ಪಥಸಂಚಲನ ಸಂಚರಿಸಿತು.
ವಿಶೇಷವೆAದರೆ ಬಾಗಲಕೋಟೆ ಜಿಲ್ಲೆಯಲ್ಲಿ ಎರಡನೇ ಬಾರಿಗೆ ಆರ್.ಎಸ್.ಎಸ್ ಮಹಿಳಾ ಕಾರ್ಯಕರ್ತೆಯರ ಪಥಸಂಚಲನ ನಡೆಯುತ್ತಿದೆ. ಮಹಿಳಾ ಗಣವೇಷಧಾರಿಗಳಿಗೆ ಸಾರ್ವಜನಿಕರು ಪುಷ್ಪವೃಷ್ಟಿ ಅರ್ಪಿಸಿದರು. ಸಂಕ್ರಾAತಿ ನಿಮಿತ್ಯ ಹಮ್ಮಿಕೊಂಡಿದ್ದ ಈ ಪಥಸಂಚಲನ ಹಿನ್ನೆಲೆ ಯಲ್ಲಿ ಬಾಗಲಕೋಟೆ ನಗರದಾದ್ಯಂತ ಮದ್ಯ ಮಾರಾಟ ಬಂದ್ ಮಾಡಲಾಗಿತ್ತು. ಒಟ್ಟಾರೆ ರಾಷ್ಟ್ರ ಸೇವಿಕಾ ಸಮಿತಿ ಪಥಸಂಚಲನದ ವೇಳೆ ದೇಶಾಭಿಮಾನ ಘೋಷಣೆಗಳು ಮೊಳಗಿದವು.

ವರದಿ:ನಿಂಗಪ್ಪ ಕೆ ಬಾಗಲಕೋಟೆ

error: