ಹೊನ್ನಾವರ: ಕುಮುಟಾ ಮತ್ತು ಭಟ್ಕಳ ವಿಧಾನಸಬಾ ಕ್ಷೇತ್ರದ ಕಾಂಗ್ರೇಸ್ ಯುವ ಘಟಕದ ವತಿಯಿಂದ ಮಾಜಿ ಪ್ರಧಾನಿ ರಾಜೀವ ಗಾಂಧಿಯವರ ೨೯ನೇ ಪುಣ್ಯತಿಥಿಯ ಅಂಗವಾಗಿ ತಾಲೂಕಿನ ೨೯ ಕಾರ್ಮಿಕರಿಗೆ ದಿನಸಿ ಕಿಟ್ ಹಾಗೂ ಧನಸಹಾಯ ನೀಡಲಾಯಿತು.
ಪಟ್ಟಣದ ಸೋಶಿಯಲ್ ಕ್ಲಬ್‌ನಲ್ಲಿ ಆವರಣದಲ್ಲಿ ಕಿಟ್ ವಿತರಣೆಯ ಬಳಿಕ ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಕೃಷ್ಣ ಗೌಡ ಮಾತನಾಡಿ ದೇಶಕ್ಕಾಗಿ ತನ್ನ ಪ್ರಾಣವನ್ನೆ ಪಣವಾಗಿಟ್ಟು ರಾಜೀವಗಾಂಧಿಯವರು ಎಂದೆದಿಗೂ ಅಜರಾಮರಾಗಿದ್ದಾರೆ. ಇಂದು ಅವರ ೨೯ನೇ ಪುಣ್ಯತಿಥಿಯ ಅಂಗವಾಗಿ ಎರಡು ವಿಧಾನಸಭಾ ಕ್ಷೇತ್ರದವರು ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸುವ ಮೂಲಕ ಮಾದರಿಯಾಗಿದ್ದಾರೆ. ತಾಲೂಕಿನ ೨೯ ಕಾರ್ಮಿಕರಿಗೆ ದಿನಸಿ ಕಿಟ್ ಜೊತೆ ೨೦೦ ನಗದು ನೀಡುವ ಮೂಲಕ ಸ್ಪಂದಿಸಿದ್ದಾರೆ. ದೇಶದ್ಯಂತ ಈ ಕಾರ್ಯಕ್ರಮ ಆಚರಿಸುತ್ತಿದ್ದು ೨೦೦ ನೀಡುವ ಉದ್ದೇಶವೆನೆಂದರೆ ಇಂದು ಇಡೀ ದೇಶದ ಜನತೆ ಕರೋನಾ ಮಹಾಮಾರಿಯಿಂದ ಸಂಕಷ್ಟದಲ್ಲಿದ್ದಾರೆ. ಹಲವರು ಉದ್ಯೋಗವಿಲ್ಲದೇ ಪರದಾಡುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಹಿಳೆಯರು, ಕೃಷಿಕಾರ್ಮಿಕರು, ಸೇರಿದಂತೆ ನಿರ್ಗತಿಕರಿಗೆ ತಲಾ ೨೦೦ರೂನಂತೆ ತಿಂಗಳಿಗೆ ೬ಸಾವಿರ ಹಣ ನೀಡುವ ಮೂಲಕ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಲು ಆಗ್ರಹ ರೂಪದಲ್ಲಿ ನೀಡುತ್ತಿದ್ದೆವೆ. ಯುವ ಕಾಂಗ್ರೇಸ್ ಹಲವು ಸಮಾಜಮುಖಿ ಕಾರ್ಯ ಮಾಡುತ್ತಿದ್ದು ಕರೋನಾ ಸಂಕಷ್ಟದಲ್ಲಿ ಹಲವರಿಗೆ ಕಿಟ್ ಹಾಗೂ ಧನಸಹಾಯ ಮಾಡುತ್ತಾ ಬಂದಿದೆ ಎಂದರು.
ಈ ಸಂದರ್ಭದಲ್ಲಿ ಯುವಘಟಕದ ಅಧ್ಯಕ್ಷರಾದ ಶ್ರೀಧರ ಹೆಗಡೆ ಮತ್ತು ಕೃಷ್ಣ ಗೌಡ, ಪದಾದಿಕಾರಿಗಳಾದ ಲಕ್ಷಣ ನಾಯ್ಕ, ದುರ್ಗಾದಾಸ ಮೋಗೇರ, ಸಂದೇಶ ಶೆಟ್ಟಿ ಉಪಸ್ಥಿತರಿದ್ದರು.
More Stories
ಶತಾಯುಸಿ ಕರಿಯಮ್ಮ ನಿದನ
ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಭಟ್ಕಳ ಪುರಸಭೆ ಮುಖ್ಯಾಧಿಕಾರಿ
ದೀಪಾವಳಿ ಟ್ರೋಪಿ 2024-25 ಅನ್ವಿ ಕ್ರಿಕೆಟರ್ಸ್ ಗೆಲುವು ಸಾಧಿಸುವುದರ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.