December 21, 2024

Bhavana Tv

Its Your Channel

ಬಿ.ಎನ್.ಜಾಲಿಹಾಳ ಗ್ರಾಮದ ಸಾರಾಯಿ ನಿಷೇಧದ ವಿರುದ್ಧದ ಪ್ರತಿಭಟನೆಗೆ ಸ್ಪಂದಿಸಿದ ಬಾಗಲಕೋಟೆ ಜಿಲ್ಲಾಧಿಕಾರಿ.

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಭದ್ರಣಾಯಕನಾ ಜಾಲಿಹಾಳ ಗ್ರಾಮದಲ್ಲಿ ಅನಧಿಕೃತ ಸಾರಾಯಿ ಅಂಗಡಿಯ ಹಾವಳಿಯಿಂದ ಇಡೀ ಗ್ರಾಮದ ಸ್ವಾಸ್ಥ್ಯ ವೇ ಹಾಳಾಗಿ ಹೋಗಿ ಚಿಕ್ಕ ವಯಸ್ಸಿನ ವಿದ್ಯಾರ್ಥಿಗಳು ಸಾರಾಯಿ ಕುಡಿದು ಗ್ರಾಮದ ಮಕ್ಕಳ ಭವಿಷ್ಯದ ಚಿಂತೆ ಈಗ ಕಣ್ಣ ಮುಂದೆ ನಿಂತಿದೆ ಎಂದು ಗ್ರಾಮಸ್ಥರು ಮಾಧ್ಯಮದ ಎದುರು ತಮ್ಮ ಅಳಲು ತೋಡಿಕೊಂಡರು.

13 ದಿನಗಳ ಉಗ್ರ ಪ್ರತಿಭಟನೆ ಇಂದು ಜಿಲ್ಲಾಧಿಕಾರಿಗಳ ಕಛೇರಿಯ ಎದುರು ಉಗ್ರ ಪ್ರತಿಭಟನೆ ಮಾಡಿ ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸುವ ವರೆಗೆ ಘೋಷಣೆ ಕೂಗುತ್ತ ಜಿಲ್ಲಾಧಿಕಾರಿಗಳು ಆಗಮಿಸಿ ಗ್ರಾಮಸ್ಥರ ಅಳಲನ್ನು ಕೇಳಿ ಸುದೀರ್ಘ ಚರ್ಚೆ ಮಾಡಿ ಸಾರಾಯಿ ಅಂಗಡಿ ಯನ್ನು ಸ್ಥಳಾಂತರ ಮಾಡುವ ಬಗ್ಗೆ ಭರವಸೆ ನೀಡಿ ಬಿ.ಎನ್.ಜಾಲಿಹಾಳ ಪಟ್ಟದಕಲ್ಲು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೆ ಸ್ಥಳದಲ್ಲಿಯೇ ದೂರವಾಣಿ ಮೂಲಕ ಆದೇಶ ಮಾಡಿ ಪರಿಶೀಲನೆ ಮಾಡಲು ಆದೇಶಿಸಿದ್ದಾರೆ.

ವರದಿ:-ಮಹಾಂತೇಶ್ ಕುರಿ

error: