December 22, 2024

Bhavana Tv

Its Your Channel

ಮಹಾಶಿವರಾತ್ರಿ ಹಾಗೂ ಶ್ರೀ ಕಲ್ಮೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಸಾಮಾಜಿಕ ನಾಟಕ

ಬಾಗಲಕೋಟೆ ಜಿಲ್ಲೆಯ ಇಲಕಲ್ ತಾಲೂಕಿನ ಗೊರಬಾಳ ಗ್ರಾಮದಲ್ಲಿ ಮಹಾಶಿವರಾತ್ರಿ ಹಾಗೂ ಶ್ರೀ ಕಲ್ಮೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಶ್ರೀ ಮಾರುತ್ತೇಶ್ವರ ನಾಟ್ಯ ಸಂಘ, ಗೊರಬಾಳ ಇವರ ಸಹಯೋಗದಲ್ಲಿ ರೈತನ ರಾಜ್ಯದಲ್ಲಿ ರೌಡಿಗಳ ದರ್ಬಾರ ಎಂಬ ಸುಂದರ ಸಾಮಾಜಿಕ ನಾಟಕವನ್ನು ಹುನಗುಂದ ಮತಕ್ಷೇತ್ರದ ಜನನಾಯಕರಾದ ಎಸ್ ಆರ್ ನವಲಿಹಿರೇಮಠರು ಜ್ಯೋತಿ ಬೆಳಗಿಸುವ ಮುಖಾಂತರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಬಸವರಾಜ ತಾಳಿಕೋಟೆ, ಬಸವರಾಜ ಬಂಡರಗಲ್, ಮುತ್ತಣ್ಣ ಮೂಲಿಮನಿ, ಸೋಮಶೇಖರ್ ಸರನಾಡಗೌಡರ ಹಾಗೂ ಗ್ರಾಮದ ಗುರು-ಹಿರಿಯರು ಯುವಕ ಮಿತ್ರರು ತಾಯಂದಿರು ಮುಂತಾದವರು ಉಪಸ್ಥಿತರಿದ್ದರು.

ವರದಿ ಮಹಾಂತೇಶ. ಕುರಿ

error: