December 19, 2024

Bhavana Tv

Its Your Channel

ಶ್ರೀ ಭೀಮಾಂಬಿಕ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಕಿತ್ತೂರಿನ ಹುಲಿ ಎಂಬ ಐತಿಹಾಸಿಕ ನಾಟಕ

ಬಾಗಲಕೋಟೆ ಜಿಲ್ಲೆಯ ಇಲಕಲ್ ತಾಲೂಕಿನ ಮುರಡಿ ಗ್ರಾಮದಲ್ಲಿ ಶ್ರೀ ಭೀಮಾಂಬಿಕ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಹಾಗೂ ಎಸ್ ಆರ್ ಎನ್ ಅಭಿಮಾನಿ ಬಳಗದ ವತಿಯಿಂದ, ಶ್ರೀ ಭೀಮಾಂಬಿಕಾ ದೇವಿ ನಾಟ್ಯಸಂಘ ಮುರುಡಿ ಇವರ ಸಹಯೋಗದಲ್ಲಿ ಕಿತ್ತೂರಿನ ಹುಲಿ ಎಂಬ ಐತಿಹಾಸಿಕ ನಾಟಕವನ್ನು ಹುನುಗುಂದ ಮತಕ್ಷೇತ್ರದ ಜನನಾಯಕರದ ಎಸ್ ಆರ್ ನವಲಿಹಿರೇಮಠರು ಉದ್ಘಾಟಿಸಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಶ್ರೀ ಭೀಮಾಂಬಿಕ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ಆಶೀರ್ವಾದವನ್ನು ಪಡೆದುಕೊಂಡರು.

ಈ ಸಂದರ್ಭದಲ್ಲಿ ಮಹಾಂತೇಶ್ ಮೂಲಿಮನಿ, ಪ್ರವೀಣ್ ಸಾರಂಗಮಠ, ನಾಗರಾಜ್ ಶೆಡ್ಲಗೇರಿ, ಶಂಕ್ರಪ್ಪ ಅಮರಗಟ್ಟಿ, ಮಹಾಂತೇಶ್ ಯಲಬುರ್ಗಿ, ಗಣೇಶ್ ಕೋಮನೂರು, ಮಹಾಂತೇಶ್ ಬನ್ನಿ, ಶರಣು ಹಡಗಲಿ, ಮಲ್ಲು ಕಮರಿ, ಸಂತೋಷ ರಾಠೋಡ್, ಶಾಂತಕುಮಾರ್ ಮೂಕಿ ಹಾಗೂ ಗ್ರಾಮದ ಗುರುಹಿರಿಯರು ಯುವಕರು ತಾಯಂದಿರು ಮತ್ತು ಎಸ್ ಆರ್ ಎನ್ ಅಭಿಮಾನಿ ಬಳಗದ ಕಾರ್ಯಕರ್ತರು ಉಪಸ್ಥಿತರಿದ್ದರು

ವರದಿ: ಮಹಾಂತೇಶ.ಕುರಿ

error: