ಭಟ್ಕಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ನ್ಯಾಕ್ ಕಮಿಟಿಯವರು ಬಿ++ (ಬಿ ಪ್ಲಸ್ ಪ್ಲಸ್) ಗ್ರೇಡ್ ನೀಡಿದ್ದು ಗ್ರೇಡ್ ಪಡೆಯುವುದರ ಹಿಂದೆ ಶಾಸಕ ಹಾಗೂ ಕಾಲೇಜು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸುನಿಲ್ ನಾಯ್ಕ, ಕಾಲೇಜು ಅಭಿವೃದ್ಧಿ ಮಂಡಳಿ ಸದಸ್ಯರು, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳ ಶ್ರಮ ಅಪಾರವಾಗಿದೆ ಎಂದು ಡಾ. ಭಾಗೀರಥಿ ನಾಯ್ಕ ಹೇಳಿದರು.
ಅವರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನ್ಯಾಕ್ ಸಮಿತಿಯಲ್ಲಿ ಬಂದಿದ್ದ ಅಧಿಕಾರಿಗಳು ಕಾಲೇಜಿನ ಪ್ರತಿಯೊಂದು ಚಟುವಟಿಕೆಯನ್ನು ದಾಖಲು ಮಾಡಿಕೊಂಡು ಹೋಗಿದ್ದು ನಮಗೆ ಬಿ. ಪ್ಲಸ್ ಪ್ಲಸ್ ನೀಡುತ್ತಾರೆನ್ನುವ ಭರವಸೆ ಇರಲಿಲ್ಲ. ಆದರೆ ಉತ್ತಮವಾಗಿ ಎಲ್ಲ ಚಟುವಟಿಕೆಗಳನ್ನು ನೋಡಿದ ಅವರು ಬಿ ಪ್ಲಸ್ ಪ್ಲಸ್ ಗ್ರೇಡ್ ನೀಡಿರುವುದು ಸಂತಸ ತಂದಿದೆ ಎಂದರು.
ನೂತನ ಪ್ರಾಂಶುಪಾಲೆ ಡಾ. ಉಷಾದೇವಿ ಜೆ. ಎಸ್. ಮಾತನಾಡಿ ಕಾಲೇಜಿನ ಉಪನ್ಯಾಸಕ ವೃಂದ, ಅಭಿವೃದ್ಧಿ ಸಮಿತಿ ಹಾಗೂ ವಿದ್ಯಾರ್ಥಿಗಳ ಸಹಕಾರ ತುಂಬಾ ಚೆನ್ನಾಗಿದ್ದು ಮುಂದಿನ ದಿನಗಳಲ್ಲಿ ಕಾಲೇಜಿನ ಪ್ರವೇಶ ಸಂಖ್ಯೆ ಯನ್ನು ಹೆಚ್ಚುಮಾಡುವುದರೊಂದಿಗೆ ಇತರೇ ಕೆಲವು ಕೋರ್ಸುಗಳನ್ನು ಕೂಡಾ ನಡೆಸಲು ಇಚ್ಚಿಸಿದ್ದೇನೆ. ಕಾಲೇಜನ್ನು ಮಾದರಿ ಕಾಲೇಜನ್ನಾಗಿ ಮಾಡುವ ಗುರಿಯೊಂದಿಗೆ ಬಂದಿದ್ದು ಎಲ್ಲರ ಸಹಕಾರ ಬೇಕು ಎಂದು ಕೋರಿದರು.
ಕಾಲೇಜು ಅಭಿವೃದ್ಧಿ ಸಮಿತಿಯ ಹಿರಿಯ ಸದಸ್ಯ ಎ0.ಆರ್. ನಾಯ್ಕ, ಕಾಲೇಜು ಅಭಿವೃದ್ಧಿ ಸಮಿತಿಯ ಹಿರಿಯ ಸದಸ್ಯ ಎಂ.ಆರ್. ನಾಯ್ಕ ಮಾತನಾಡಿ, ಸರಕಾರಿ ಪಥಮ ದರ್ಜೆ ಕಾಲೇಜನ್ನು ಅತ್ಯಂತ ವಿಶಾಲವಾದ ಜಾಗದಲ್ಲಿ ಸರಕಾರದ ಅನುದಾನದಡಿಯಲ್ಲಿ ಅತ್ಯಂತ ಸುಂದರವಾಗಿ ನಿರ್ಮಾಣ ಮಾಡಿಕೊಟ್ಟ ಶಾಸಕ ಸುನಿಲ್ ನಾಯ್ಕ ಹಾಗೂ ಉಸ್ತುವಾರಿ ನೋಡಿಕೊಂಡ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ರವಿ ನಾಯ್ಕ ಜಾಲಿ ಅವರನ್ನು ಅಭಿನಂದಿಸಿದರು.
ಉಪನ್ಯಾಸಕ ಸುರೇಶ ಮೆಟಗಾರ್, ಗ್ರಂಥಪಾಲಕ ಡಾ. ನರಸಪ್ಪ ಕೆ.ಸಿ. ಸೇರಿದಂತ ಹಲವರು ಪಾಲ್ಗೊಂಡಿದ್ದರು.
More Stories
ಭಟ್ಕಳ ತಾಲೂಕು ಕಸಾಪದಿಂದ ರಸಪ್ರಶ್ನೆ ಸ್ಪರ್ಧೆ – ಬಹುಮಾನ ವಿತರಣೆ.
ಭಟ್ಕಳದ ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲಿ ದೀಪದಾನ ಕಾರ್ಯಕ್ರಮ
ನಾಗೇಶ ನಾಯ್ಕ ಹೊನ್ನೇಗದ್ದೆಯವರಿಗೆ ವಿಚಾರ ಕ್ರಾಂತಿ ರತ್ನ ಪ್ರಶಸ್ತಿ