July 14, 2024

Bhavana Tv

Its Your Channel

ಸುಸಂಪನ್ನಗೊoಡ ಝೇಂಕಾರ ಕಲಾ ಉತ್ಸವ2023

ಭಟ್ಕಳದ ನಾಗಯಕ್ಷೆ ಸಭಾಭವನದಲ್ಲಿ ಝೇಂಕಾರ ಆರ್ಟ ಅಸೋಸಿಯೇಶನ ಹಾಗೂ ಕನ್ನಡ & ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಝೇಂಕಾರ ಕಲಾ ಉತ್ಸವ 2023 ಜರುಗಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಾಗಯಕ್ಷೆ ಧರ್ಮದೇವಿ ಸಂಸ್ಥಾನದ ಧರ್ಮದರ್ಶಿ ರಾಮದಾಸ ಪ್ರಭು ಕಲೆಯನ್ನು ಉಳಿಸಿ ಬೆಳೆಸುವುದು ನಮ್ಮ ಕರ್ತವ್ಯ ಎನ್ನುತ್ತಾ ಮಕ್ಕಳು ಮೊಬೈಲ, ಸಾಮಾಜಿಕ ಜಾಲತಾಣಗಳಿಂದ ದೂರವಿರಬೇಕು ಎಂದು ಕೆರೆ ನೀಡಿದರು.
ಸಂಜಯ ಗುಡಿಗಾರ ನಿರ್ದೇಶನದಲ್ಲಿ ಏರ್ಪಡಿಸಲಾದ ಚಿತ್ರಕಲಾ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಪದ್ಮನಾಭ ಪೈ ಇಂತಹ ಕಲಾ ಉತ್ಸವಗಳನ್ನು ಮೊದಲು ಪ್ರಾರಂಭಿಸದ್ದೇ ಝೇಂಕಾರ ಸಂಸ್ಥೆಯವರು. ಕಲಾ ಸೇವೆಯಲ್ಲಿ ಅವರ ಕಾರ್ಯ ಶ್ಲಾಘನಾರ್ಹ ಎಂದರು.
ಸಭಾಧ್ಯಕ್ಷತೆ ವಹಿಸಿದಿ ಸಂಸ್ಥೆಯ ಅಧ್ಯಕ್ಷ ಪ್ರಸನ್ನ ಪ್ರಭು ಲಲಿತಕಲೆಗಳು ಮಾನಸಿಕ ನೆಮ್ಮದಿಯನ್ನು ನೀಡಿ ವ್ಯಕ್ತಿತ್ವ ವಿಕಸನಗೊಳಿಸುವ ಜೊತೆಗೆ ಶಿಕ್ಷಣಕ್ಕೂ ಸಹಕಾರಿಯಾಗಿವೆ, ಎನ್ನುತ್ತಾ ಸಂಸ್ಥೆಯ ಸಾಧನೆಯನ್ನು ವಿವರಿಸಿದರು.
ಕಲಾ ಕ್ಷೇತ್ರದಲ್ಲಿ ಮಾಡಿದ ಅಪಾರ ಸಾಧನೆಯನ್ನು ಗಮನಿಸಿ ಖ್ಯಾತ ತಬಲಾ ವಾದಕ ಶೇಷಾದ್ರಿ ಅಯ್ಯಂಗಾರ ಅವರನ್ನು “ಝೇಂಕಾರ ಕಲಾಶ್ರೀ 2023” ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು.
ಸಂಜಯ ಗುಡಿಗಾರ ಪ್ರಾಸ್ತಾವಿಕ ನುಡಿಗಳನ್ನು ಆಡಿದರೆ ಅತಿಥಿಗಳಾಗಿ ಆಗಮಿಸಿದ ಆಶಾ ಭಟ ಸಾಂದರ್ಭಿಕ ನುಡಿಗಳನ್ನಾಡಿದರು. ಸಭಾ ಕಾರ್ಯಕ್ರಮದ ನಂತರ ಸಂಜಯ ಗುಡಿಗಾರ ಅವರ ನಿರ್ದೇಶನದಲ್ಲಿ ಚಿತ್ರಕಲಾ ಪ್ರದರ್ಶನ, ನೃತ್ಯ ವಿದುಷಿ ನಯನಾ ಪ್ರಸನ್ನ ಇವರ ನಿರ್ದೇಶನದಲ್ಲಿ ನೃತ್ಯವೈವಿಧ್ಯ, ಸಂಗೀತ ಶಿಕ್ಷಕ ವೆಂಕಟೇಶ ಭಟ್ ಇವರ ನಿರ್ದೇಶನದಲ್ಲಿ ಸಂಗೀತ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

error: