
ಭಟ್ಕಳದ ಖ್ಯಾತ ಮತ್ತು ನಿರ್ಭೀತ ವರದಿಗಾರ ರಾಘವೇಂದ್ರ ಭಟ್ ಜಾಲಿ (52) ಅವರು ಬುಧವಾರ ಬೆಳಿಗ್ಗೆ ತೀವ್ರತರದ ಹೃದಯಾಘಾತದಿಂದ ಶಿವಮೊಗ್ಗದಲ್ಲಿ ನಿಧನರಾಗಿದ್ದಾರೆ.
15 ವರ್ಷಕ್ಕೂ ಅಧಿಕ ಕಾಲ ಪ್ರಜಾವಾಣಿ ಪತ್ರಿಕೆಯ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದ ಅವರು ಕಳೆದ ಒಂದೂವರೆ ವರ್ಷದಿಂದ ಕನ್ನಡ ಜನಾಂತರAಗ ಪತ್ರಿಕೆಯ ವರದಿಗಾರರಾಗಿದ್ದರು. ಶಿವಮೊಗ್ಗದಲ್ಲಿ ತಂದೆ, ತಾಯಿ ವಾಸ್ತವ್ಯ ಇದ್ದುದರಿಂದ ಮಂಗಳವಾರ ಮಧ್ಯಾಹ್ನ ಅಲ್ಲಿಗೆ ಹೋಗಿ ಆರಾಮವಾಗಿಯೇ ಇದ್ದ ಅವರು ಬುಧವಾರ ಬೆಳಿಗ್ಗೆ 8.30ಕ್ಕೆ ತೀವ್ರತರದ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ರಾಘವೇಂದ್ರ ಭಟ್ಟ ಜಾಲಿ ಎಂದೇ ಹೆಸರು ಮಾಡಿದ್ದ ಅವರ ದಿಢೀರ ನಿಧನಕ್ಕೆ ಭಟ್ಕಳದ ಪತ್ರಕರ್ತರು ಸೇರಿದಂತೆ ಹಲವು ಗಣ್ಯರು ದಿಗ್ಬçಮೆ ವ್ಯಕ್ತಪಡಿಸಿ ಸಂತಾಪ ಸೂಚಿಸಿದ್ದಾರೆ. ರಾಘು ಭಟ್ಟ ಅವರು ಅಪರಾಧ ಸುದ್ದಿ ಮಾಡುವುದರಲ್ಲಿ ಎತ್ತಿದ ಕೈ ಆಗಿದ್ದು, ಪ್ರಜಾವಾಣಿಯಲ್ಲಿ ಅನೇಕ ಜನಪರ ಸುದ್ದಿಗಳನ್ನು ಮಾಡಿ ಗಮನ ಸೆಳೆದಿದ್ದರು

More Stories
ಅಂತರ್ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿ ಉದ್ಘಾಟಿಸಿದ ದರ್ಶನ್ ಹೆಬ್ಬಾರ್
ಭಟ್ಕಳದಲ್ಲಿ ಯಶಸ್ವಿಯಾಗಿ ನಡೆದ ಬಿಜೆಪಿ ಪಕ್ಷದ ವಿಜಯ ಸಂಕಲ್ಪ ಯಾತ್ರೆ
ಭಟ್ಕಳ ವಿಜಯ ಸಂಕಲ್ಪ ಯಾತ್ರೆಯ ಪೂರ್ವದಲ್ಲಿ ಪತ್ರಿಕಾಗೋಷ್ಠಿಯಲ್ಲಿ ನಳೀನ್ ಕುಮಾರ ಕಟೀಲ್