December 22, 2024

Bhavana Tv

Its Your Channel

ಚಂದ್ರದರ್ಶನವಾಗಿಲ್ಲ, ನಾಳೆ ರಂಜಾನ್ ಆಚರಣೆ ಇಲ್ಲ: ಜಾಮಾ ಮಸೀದಿಯ ಶಾಹಿ ಇಮಾಮ್

ನವದೆಹಲಿ: ಇಂದು ಚಂದ್ರ ದರ್ಶನವಾಗಿಲ್ಲ. ಹೀಗಾಗಿ ನಾಳೆ ರಂಜಾನ್ ಆಚರಣೆ ಇಲ್ಲ. ಮೇ 25ರಂದು ರಂಜಾನ್ ಆಚರಣೆ ಮಾಡಲಾಗುತ್ತದೆ ಎಂದು ದೆಹಲಿಯ ಜಾಮಾ ಮಸೀದಿ ಶಾಹಿ ಇಮಾಮ್ ಸೈಯದ್ ಅಹ್ಮದ್ ಬುಖಾರಿ ಹೇಳಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ದೆಹಲಿಯ ಜಾಮಾ ಮಸೀದಿಯ ಶಾಹಿ ಇಮಾಮ್ ಸೈಯದ್ ಅಹ್ಮದ್ ಬುಖಾರಿ ಅವರು, ಇಂದು ಚಂದ್ರ ದರ್ಶನವಾಗಿಲ್ಲ. ಹೀಗಾಗಿ ನಾಳೆ ರಂಜಾನ್ ಆಚರಣೆ ಮಾಡುತ್ತಿಲ್ಲ. ಮೇ 25ರಂದು ರಂಜಾನ್ ಆಚರಣೆ ಮಾಡಲಾಗುತ್ತದೆ ಎಂದು ಹೇಳಿದರು.

ಇದೇ ವೇಳೆ ಎಲ್ಲ ಮುಸ್ಲಿಂ ಬಾಂಧವರಿಗೂ ಕೊರೋನಾ ವೈರಸ್ ಮಾರ್ಗಸೂಚಿ ಪಾಲಿಸುವಂತೆ ಮನವಿ ಮಾಡಿದ ಬುಖಾರಿ ಅವರು, ವೈರಸ್ ಸೋಂಕು ಪ್ರಸರಣ ತಪ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನು ನಾವು ಪಾಲಿಸಲೇಬೇಕಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯ. ಹಸ್ತ ಲಾಘವ, ಪರಸ್ಪರ ತಬ್ಬಿಕೊಳ್ಳುವಿಕೆಯಿಂದ ದೂರ ಇರಬೇಕು ಎಂದು ಕಿವಿಮಾತು ಹೇಳಿದ್ದಾರೆ.

source : kannada prabha

error: