ಹೊನ್ನಾವರ: ರಾಜ್ಯದ ವಿವಿದೆಡೆ ಹೋಳಿಯನ್ನು ತುಂಬಾ ವಿಭಿನ್ನವಾಗಿ ಆಚರಿಸುತ್ತಾರೆ. ಅದರಲ್ಲೂ ಉತ್ತರಕನ್ನಡ ಜಿಲ್ಲೆಯಲ್ಲಿ ಹೋಳಿ ಸಂದರ್ಭದಲ್ಲAತೂ ಸಡಗರ ಸಂಭ್ರಮ ಇರುತ್ತದೆ. ಮುಖ್ಯವಾಗಿ ವಿವಿಧ ಸಮಾಜದವರು ಸುಗ್ಗಿಯನ್ನು ಆಚರಿಸುತ್ತಾರೆ. ಇದರ ಒಂದು ಝಲಕ್ ಇಲ್ಲಿದೆ ನೋಡಿ.
ಆದ್ರೇ ಹೋಳಿ ಹುಣ್ಣಿಮೆ ದಿನ ಜಿಲ್ಲೆಯ ಕಡತೋಕಾ ಗ್ರಾಮದಲ್ಲಿ ಆಚರಿಸುವ ಕಾಮನ ಕುಣಿತ ತುಂಬಾ ವಿಶಿಷ್ಟ ರೀತಿಯದ್ದಾಗಿರುತ್ತದೆ. ಕಾಮನಿಗೆ ಕಿರೀಟ್ ಕಟ್ಟಿ…ವೇಷ ಭೂಷಣಗಳಿಂದ ಶೃಂಗರಿಸಲಾಗುತ್ತದೆ. ಬಳಿಕ ಕಾಮನ ಸೊಂಟಕ್ಕೆ ಹಗ್ಗ ಕಟ್ಟಿ ಒಬ್ಬ ಹಿಡಿದಿರುತ್ತಾನೆ. ಕಾಮನ ಜೊತೆ ಕಳ್ಳ ಇರುತ್ತಾನೆ. ಅವನಿಗೂ ಸಕ್ಕತ್ ಬಣ್ಣ ಬಳಿಯುತ್ತಾರೆ. ಕಾಮನ ವೇಷದಾರಿಗಳು ಗ್ರಾಮದ ಪ್ರತಿ ಮನೆ ಮನೆಗಳಿಗೂ ತೆರಳಿ ಹಣ..ದವಸ ಧಾನ್ಯ..ತೆಂಗಿನ ಕಾಯಿಯನ್ನು ಪಡೆಯುತ್ತಾರೆ. ಪ್ರತಿ ಮನೆಗಳಿಗೆ ಹೋದಾಗ ಹಣ ನೀಡಿ ಗೌರವ ಕೊಡಬೇಕಾಗುತ್ತದೆ. ಇದನ್ನು ನಾಮಧಾರಿ, ಮುಕ್ರಿ ಮತ್ತು ಪಟಗಾರ ಸಮಾಜದವರು ಇಲ್ಲಿ ಬೇರೆ ಬೇರೆಯಾಗಿ ಗುಂಪು ಕಟ್ಟಿಕೊಂಡು ಇಡೀ ದಿನ ಕಡತೋಕಾ ಚೌಕ ಗ್ರಾಮದ ಸುತ್ತ ತಿರುಗುತ್ತಾರೆ. ಇದರ ಜೊತೆಗೆ ಗ್ರಾಮ ಪಂಚಾಯತಿಯವರು ಸರಕಾರಿ ಕಾಮನನ್ನು ನೇಮಿಸುತ್ತಾರೆ. ಬಳಿಕ ಸಂಜೆ ಆಗುತ್ತಿದ್ದಂತೆ ಕಾಮನ ಪಾತ್ರಧಾರಿಗಳು ಕಿರೀಟ ತೆಗೆದಿಟ್ಟು…ಉಳಿದ ವಸ್ತುಗಳನ್ನು ಸುಟ್ಟಿ ಪೂಜೆ ಸಲ್ಲಿಸುತ್ತಾರೆ.
More Stories
ಕನ್ನಡ ಕಾರ್ತಿಕ 2024ರ ಅನುದಿನ ಅನುಸ್ಪಂದನ
ಹಿಂದುಳಿದ ನಾಯಕ ಬಿಕೆ ಹರಿಪ್ರಸಾದ್ ಅವರ ಬಗ್ಗೆ ನಾಲಗೆ ಹರಿಬಿಟ್ಟ ಹರೀಶ್ ಪೂಂಜಾ ಸಾರ್ವಜನಿಕ ಜೀವನದಲ್ಲಿರಲು ಯೋಗ್ಯರಲ್ಲ :ಮಂಜುನಾಥ ನಾಯ್ಕ
“ದಿ ಓಶೀಯನ್ ಕನೆಕ್ಷನ್” ಎಂಬ ಸಾಕ್ಷ್ಯಚಿತ್ರದ ಪ್ರದರ್ಶನ