July 14, 2024

Bhavana Tv

Its Your Channel

ಕಾಸರಕೋಡ ಟೊಂಕದ ಕಡಲತೀರದಲ್ಲಿ ವಿಶಿಷ್ಟ ರೀತಿಯಲ್ಲಿ ಹೋಳಿ ಹಬ್ಬ ಆಚರಣೆ

ಹೊನ್ನಾವರ: ಕಾಸರಕೋಡ ಟೊಂಕದ ಕಡಲತೀರದಲ್ಲಿ ಹೋಳಿ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು.
ಉದ್ದೇಶಿತ ವಾಣಿಜ್ಯ ಬಂದರು ಪ್ರದೇಶದ ಹತ್ತಿರದ ಕಡಲತೀರದಲ್ಲಿ ಅರಣ್ಯ ಇಲಾಖೆಯವರು ಸಂರಕ್ಷಣೆ ಮಾಡಿದ ಕಡಲಾಮೆ ಮೊಟ್ಟೆಗಳಿಂದ ಇಂದು ರಿಡ್ಲೆ ಜಾತಿಯ ನೂರಾರು ಮರಿಗಳು ಜನಿಸಿದ್ದು ಕಡಲಾಮೆ ಮರಿಗಳನ್ನು ಸ್ಥಳೀಯ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಂಜು ಗೌಡ ನೇತೃತ್ವದಲ್ಲಿ ಸ್ಥಳೀಯರು ಸಮುದ್ರಕ್ಕೆ ಸೇರಿಸಿ ಹೋಳಿ ಹಬ್ಬವನ್ನು ಸಂಭ್ರಮಿಸಿದರು.

ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಜಗದೀಶ್ ತಾಂಡೇಲ್ ಸ್ಥಳೀಯ ಧುರೀಣರುಗಳಾದ ರಾಜೇಶ್ ತಾಂಡೇಲ್,, ಗಣಪತಿ ತಾಂಡೇಲ ಮತ್ತು ಅರಣ್ಯ ಸಿಬ್ಬಂದಿ ಗಳು ಸೇರಿ ಹೋಳಿ ಹಬ್ಬದ ನಿಮಿತ್ತ ಪರಷ್ಪರ ಬಣ್ಣ ಹಚ್ಚಿಕೊಂಡು ಕಡಲಾಮೆಮರಿಗಳಿಗೆ ಪೂಜೆ ಸಲ್ಲಿಸಿ ಹೋಳಿ ಹಬ್ಬವನ್ನು ಸಂಭ್ರಮದಿoದ ಆಚರಿಸಿದರು.

error: