November 15, 2024

Bhavana Tv

Its Your Channel

ಸ್ವಚ್ಛತೆ ಅರಿವು ಹಾಗೂ ಜಾಗೃತಿ ಅಭಿಯಾನ ನಾಳೆ

ಹೊನ್ನಾವರ:ಜಿಲ್ಲಾ ಪಂಚಾಯತ್ ಉತ್ತರ ಕನ್ನಡ,ತಾಲೂಕಾ ಪಂಚಾಯತ ಹೊನ್ನಾವರ,ಗ್ರಾಮ ಪಂಚಾಯತ ಚಿಕ್ಕನಕೋಡ,ಸ.ಹಿ.ಪ್ರಾ.ಶಾಲೆ ಗುಂಡಿಬೈಲ್ ನಂ.2,ಅರಣ್ಯ ಇಲಾಖೆ ಹೊನ್ನಾವರ,ಸ್ಪಂದನ ವೇದಿಕೆ ಗುಂಡಿಬೈಲ್ ಹಾಗೂ ಕಾಮಕೋಡ ಪರಿಸರ ಕೂಟ ಇವುಗಳ ಸಂಯುಕ್ತ ಆಶ್ರಯದಲ್ಲಿ ‘ಸ್ವಚ್ಛತೆ ಅರಿವು ಹಾಗೂ ಜಾಗೃತಿ ಅಭಿಯಾನ’ ಕಾರ್ಯಕ್ರಮ ಗುಂಡಿಬೈಲ್‌ನಲ್ಲಿ ಮಾ.9ರಂದು ಬೆಳಿಗ್ಗೆ 10ಗಂಟೆಗೆ ನಡೆಯಲಿದೆ.

ಚಿಕ್ಕನಕೋಡ ಗ್ರಾಮ ಪಂಚಾಯತ್ ಅಧ್ಯಕ್ಷ ವಿಘ್ನೇಶ್ವರ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ,ತಾಲೂಕಾ ಪಂಚಾಯತ ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ನಾಯ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಸಭಾ ಕಾರ್ಯಕ್ರಮದ ನಂತರ ಜಾಗೃತಿ ಜಾಥಾ ಹಾಗೂ ಸ್ವಚ್ಛತಾ ಕಾರ್ಯ ನಡೆಯಲಿದೆ’ ಎಂದು ಪ್ರಕಟಣೆ ತಿಳಿಸಿದೆ.

error: