May 18, 2024

Bhavana Tv

Its Your Channel

ಗ್ಯಾಸ್ ಬಂಕ್ ಆರಂಭಿಸುವoತೆ ಆಟೋ ಚಾಲಕ ಮತ್ತು ಮಾಲಕರ ರಿಂದ ಮನವಿ

ಹೊನ್ನಾವರ; ಆಟೋ ರಿಕ್ಷಾ ಚಾಲಕರ ಬಹುವರ್ಷದ ಬೇಡಿಕೆಯಾದ ಗ್ಯಾಸ್ ಬಂಕ್ ಪಟ್ಟಣದಲ್ಲಿ ನಿರ್ಮಾಣ ಹಂತದಲ್ಲಿದ್ದು, ಕೂಡಲೇ ಆರಂಭಿಸಲು ಅಧಿಕಾರಿಗಳ ಹಂತದಲ್ಲಿರುವ ತೊಡಕು ಬಗೆಹರಿಸುವಂತೆ ಒತ್ತಾಯಿಸಿ ಪಟ್ಟಣದಲ್ಲಿ ತಹಶೀಲ್ದಾರ ಮೂಲಕ ಸಹಾಯಕ ಆಯುಕ್ತರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಆಟೋ ಚಾಲಕ ಮತ್ತು ಮಾಲಕರು ಸಲ್ಲಿಸಿದರು.
ತಾಲೂಕು ಹಾಗೂ ಗ್ರಾಮೀಣ ಭಾಗದಲ್ಲಿ ಸುಮಾರು 3000ಕ್ಕೂ ಅಧಿಕ ಎಲ್.ಪಿ.ಜಿ, ರಿಕ್ಷಾ ಹಾಗೂ ಕಾರುಗಳು ಇರುವುದ ರಿಂದ ಹೊನ್ನಾವರಕ್ಕೆ ಅತೀ ಶೀಘ್ರವಾಗಿ ಎಲ್.ಪಿ.ಜಿ ಗ್ಯಾಸ್ ಬಂಕ್ ಅವಶ್ಯವಿದೆ. ದಿನನಿತ್ಯ ಗ್ಯಾಸ ಅಳವಡಿಕೆಗಾಗಿ ನೆರೆಯ ಕುಮಟಾ ತಾಲೂಕನ್ನು ಅವಲಂಭಿಸುವ ಸ್ಥಿತಿ ಇದೆ. ಇದರಿಂದ ದುಡಿಮೆಯ ಆದಾಯ ಅನಾವಶ್ಯಕ ವೆಚ್ಚವಾಗುದಲ್ಲದೇ ಅಪಘಾತ ಮತ್ತಿತರ ಘಟನೆ ಸಂಭವಿಸಿದರೆ ಇನ್ನಷ್ಟು ವೆಚ್ಚವಾಗಲಿದೆ. ಈಗಾಗಲೇ ಪಟ್ಟಣದಲ್ಲಿ ಕಾರ್ಯರಂಭ ಮಾಡಬೇಕಿದ್ದ ಎಲ್.ಪಿ.ಜಿ. ಡಿಸೈನರಿಯ ಶೇಕಡಾ 90 ರಷ್ಟು ಕೆಲಸ ಮುಗಿದಿದ್ದು, ಇನ್ನು ಕೆಲವೇ ದಿನಗಳಲ್ಲಿ ಆರಂಭ ಆಗುತ್ತದೆ ಎನ್ನುವ ಸಮಯದಲ್ಲಿ ಲೀಸ್ ನೀಡಿದ ಕುಟುಂಬದವರ ಆಸ್ತಿ ವ್ಯಾಜ್ಯ ನಡೆದು ಎನ್.ಓ.ಸಿ. ಸಮಸ್ಯೆಯಾಗಿ ನಿಂತಿರುವ ಗಮನಕ್ಕೆ ಬಂದಿದೆ. ಜಿಲ್ಲಾಧಿಕಾರಿಗಳು ಪಟ್ಟಣದ ಬೆಂಗಳೂರು ರಸ್ತೆಯಲ್ಲಿರುವ ಎಲ್.ಪಿ.ಜಿ. ಗ್ಯಾಸ್ ಡಿಸ್ಪೆನ್ಸರಿ ಆರಂಭ ಆಗುವ ಬಗ್ಗೆ ಹಾಗೂ ಹೊನ್ನಾವರ ಕರ್ಕಿಯ ಪೈ & ಕಂಪನಿಯವರಿಗೆ ಇಂಡಿಯನ್ ಆಯಿಲ್ ಕಾರ್ಪೋರೇಶನ್ ರವರು ಎಲ್.ಪಿ.ಜಿ. ಗ್ಯಾಸ್ ಡಿಸ್ಪೆನ್ಸರಿಗೆ ಅನುಮತಿ ನೀಡಲು ಸೂಕ್ತ ಕ್ರಮಕೈಗೊಳ್ಳುವಂತೆ ಮನವಿಯಲ್ಲಿ ಉಲ್ಲೆಖಿಸಿದ್ದಾರೆ.
ಗ್ರೇಡ್ 2 ತಹಶೀಲ್ದಾರ ಉಷಾ ಪಾವಸ್ಕರ ಮನವಿ ಸ್ವೀಕರಿಸಿದರು.
ಆಟೋ ಯೂನಿಯನ್ ಅಧ್ಯಕ್ಷ ಶಿವರಾಜ ಮೇಸ್ತ ಮಾತನಾಡಿ 10 ವರ್ಷದಿಂದಲೂ ಬೇಡಿಕೆ ಇಡುತ್ತಿದ್ದು,ಕರ್ಕಿಯಲ್ಲಿ 95% ಕೆಲಸ ಮುಗಿದ ಬಳಿಕ ಸಿ.ಎನ್.ಜಿ. ಪಂಪ್ ನೀಡಿದರು. ಪಟ್ಟಣದಲ್ಲಿ ನಿರ್ಮಾಣ ಹಂತದ ಬಂಕ್ ಎಗ್ರಿಮೆಂಟ್ ಮಾಡಿಕೊಂಡವರು ಕೋರ್ಟ್ ಮೊರೆ ಹೋಗಿ ತಡೆ ಬಂದಿದೆ. ಯಾವುದೇ ಕ್ಷಣದಲ್ಲಿ ಕೋರ್ಟ್ ತಡೆ ತೆಗೆಯಲಿದ್ದು, ಜಿಲ್ಲಾಧಿಕಾರಿಗಳು ಎನ್.ಒ.ಸಿ. ನೀಡುವ ಮೂಲಕ ಆಟೋದವರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.
ಜೆ.ಡಿ.ಎಸ್.ಮುಖಂಡ ಸೂರಜ್ ಸೋನಿ ಮಾತನಾಡಿ 1000ಕ್ಕೂ ಅಧಿಕ ಆಟೋ ಓಡಾಡಲಿದೆ. ಜನರ ಸಮಸ್ಯೆ ಬಗೆಹರಿಸುದು ಜನಪ್ರತಿನಿಧಿ ಹಾಗೂ ಸರ್ಕಾರದ ಆದ್ಯ ಕರ್ತವ್ಯ. ಸ್ವ ಉದ್ಯೋಗಕ್ಕೆ ಹೆಚ್ಚಿನ ಆದ್ಯತೆ ಕೊಡುತ್ತೇವೆ ಎನ್ನುವವರು ಆಟೋದವರ ನೆರವಾಗುತ್ತಿಲ್ಲ. ಹೊನ್ನಾವರದ ಎಲ್ಲಾ ಸಮಸ್ಯೆಗೂ ಹೋರಾಟದ ಮೂಲಕವೇ ನ್ಯಾಯ ಪಡೆಯಬೇಕಾಗಿರುವುದು ದುರದುಷ್ಟವಾಗಿದೆ. ಶಾಸಕನಾಗಿ ಆಯ್ಕೆಯಾದರೆ ಮೂರು ತಿಂಗಳಲ್ಲಿ ಬಂಕ್ ಆರಂಭಿಸಲು ಇರುವ ತೊಡಕು ನಿವಾರಿಸಿ ಆಟೋದವರಿಗೆ ನೆರವಾಗುವ ಭರವಸೆ ನೀಡಿದರು.
ಬಂಕ್ ಮಾಲಕ ಸೀತಾರಾಮ ಭಟ್ ಈ ಸಮಸ್ಯೆ ದೊಡ್ಡದಾಗಿಸಿ ರಿಕ್ಷಾದವರಿಗೆ ವಂಚನೆ ಮಾಡುತ್ತಾರೆ. ಕುಮಟಾದಲ್ಲಿ ಇರುವ ಐದು ಪಂಪಗಳಲ್ಲಿ 2 ಪಂಪ್ ಲೈಸನ್ಸ ಇಲ್ಲದೇ ನಡೆಯುತ್ತಿದೆ. ಹೊನ್ನಾವರದಲ್ಲಿ 2 ಬಂಕ್ ಲೈಸನ್ಸ್ ನೀಡಿದರು ಅವರು ಮಾಡದೇ ಇದ್ದರೆ ಇದುವರೆಗೂ ಯಾಕೆ ಕ್ರಮ ಕೈಗೊಂಡಿಲ್ಲ. ಸರ್ಕಾರದ ನಿಯಮಾನುಸಾರವಾಗಿ ಲೈಸನ್ಸ ಪಡೆಯಲು ದಾಖಲಾತಿ ನೀಡಿದರೂ ಹಣ ಮುಟ್ಟಿಲ್ಲ ಎಂದು ಲೈಸನ್ಸ ನೀಡಿಲ್ಲವಾ ಎಂದು ಖಾರವಾಗಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈ ವೇಳೆ ಕರವೇ ತಾಲೂಕ ಅಧ್ಯಕ್ಷ ಮಂಜುನಾಥ ಗೌಡ, ಹೋರಾಟದ ನೇತ್ರತ್ವ ವಹಿಸಿದ್ದ ಪ್ರಭಾಕರ ಮೇಸ್ತ, ಸೇರಿದಂತೆ ಪಟ್ಟಣ ಮತ್ತು ಗ್ರಾಮೀಣ ಭಾಗದ ನೂರಾರು ಸಂಖ್ಯೆಯ ಆಟೋ ಚಾಲಕ ಮಾಲಕರು ಉಪಸ್ಥಿತರಿದ್ದರು. ಮನವಿ ನೀಡುವ ಪೂರ್ವದಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾವಣೆಗೊಂಡ ಆಟೋ ಪಟ್ಟಣದ ವಿವಿಧಡೆ ಮೆರವಣೆಗೆಯಮೂಲಕ ತಹಶೀಲ್ದಾರ ಕಛೇರಿಗೆ ಆಗಮಿಸಿ ಮನವಿ ಸಲ್ಲಿಸಿದರು

error: