March 13, 2025

Bhavana Tv

Its Your Channel

ಭಟ್ಕಳದಲ್ಲಿ ಸಂಭ್ರಮ,ಸಡಗರದಿoದ ಹೋಳಿ ಹಬ್ಬ ಆಚರಣೆ

ಭಟ್ಕಳ ತಾಲೂಕಿನಾದ್ಯಂತ ಬಣ್ಣಗಳ ಹಬ್ಬವಾದ ಹೋಳಿ ಹಬ್ಬವನ್ನು ಮಂಗಳವಾರ ದಂದು ಸಂಭ್ರಮ ಸಡಗರದಿಂದ ಆಚರಿಸಲಾಯಿತು. 
ತಾಲೂಕಿನ ಮುಠ್ಠಳ್ಳಿ, ಮಣ್ಕುಳಿ, ಮೂಢಭಟ್ಕಳ, ಮುಂಡಳ್ಳಿ, ಆಸರಕೇರಿ,ತಲಾಂದ, ಶಿರಾಲಿ, ಅಳ್ವೇಕೋಡಿ, ಮುರ್ಡೇಶ್ವರದ ಭಾಗಗಳಲ್ಲಿಯೂ ಯುವಕರು ಹಬ್ಬವನ್ನು ಸಂಭ್ರಮದಿAದ ಆಚರಿಸಿದರು.
ಈಗಿನ ಯುವ ಸಮಾಜಕ್ಕೆ ಹೋಳಿಯೊಂದು ಮೋಜು ಮಸ್ತಿಯ ಹಬ್ಬವಾಗಿದ್ದು, ಒಬ್ಬರಿಗೊಬ್ಬರು ಬಣ್ಣ ಹಚ್ಚಿಕೊಂಡು ಸಂತೋಷದಿAದ ಕುಣಿದು ಕುಪ್ಪಳಿಸಿದರು.  ಹಿರಿಯರು ನಡೆಸಿಕೊಂಡ ಬಂದAತೆ ಕೆಲವು ಆಚರಣೆಗಳು ನಡೆದುಕೊಂಡು ಬಂದಿದ್ದು, ಸಂಪ್ರದಾಯಕ್ಕೆ ಈಗಿನ ಯುವ ಜನತೆಗೆ ಪ್ರಾಮುಖ್ಯತೆಯನ್ನ ನೀಡಿರುವುದು ಗಮನಾರ್ಹ
ಒಟ್ಟಾರೆ ಪ್ರತಿವರ್ಷದ ಹೋಳಿ ಹಬ್ಬದ ಸಂಭ್ರಮ ಈ ವರ್ಷವೂ ಜೋರಾಗಿದ್ದು, ಯಾವುದೇ ಅಹಿತಕರ ಘಟನೆ ನಡೆದೇ ಸುಖಾಂತ್ಯದ ರೀತಿಯಲ್ಲಿ ಹಬ್ಬಕ್ಕೆ ತೆರೆಬಿದ್ದಿದೆ

error: