
ಹೊನ್ನಾವರ :- ಮಹಿಳೆಯರ ಸ್ವಾವಲಂಬನೆಗಾಗಿ ಮಾವಿನಕುರ್ವಾದಲ್ಲಿ ಸರ್ಕಾರದಿಂದ ಒಂದು ಉದ್ಯಮ ಆರಂಭಿಸಲು ಇಂದು ಶಕ್ತಿ ಪ್ರದರ್ಶನದ ರೀತಿ ಮಹಿಳಾ ದಿನಾಚರಣೆ ಜರುಗಿದೆ ಎಂದು ಗ್ರಾ.ಪಂ. ಅಧ್ಯಕ್ಷ ಜಿ.ಜಿ.ಶಂಕರ ಸಂತಸ ವ್ಯಕ್ತಪಡಿಸಿದರು.
ಹೊನ್ನಾವರ ತಾಲೂಕಿನ ಮಾವಿನಕುರ್ವಾದ ಗದ್ದೆಮನೆಯ ಮಾದರಿ ಹಿ.ಪ್ರಾ.ಶಾಲೆಯ ಆವರಣದಲ್ಲಿ ಶರಾವತಿ ಸಂಜೀವಿನಿ ಒಕ್ಕೂಟ ಹಾಗೂ ಗ್ರಾ.ಪಂ. ಮಾವಿನಕುರ್ವ ಇವರು ಆಯೋಜಿಸಿದ ಅಂತರಾಷ್ಟ್ರೀಯ ಮಹಿಳಾ ಸಮಾವೇಶದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಹಿಳೆಯು ಅಬಲೆಯಲ್ಲ ಸಬಲೆಯಾಗಿದ್ದಾಳೆ. ಗ್ರಾಮದಲ್ಲಿ ಮಹಿಳೆಯು ಆರ್ಥಿಕವಾಗಿ ಸ್ವಾವಲಂಬನೆ ಜೀವನ ನಡೆಸಲು ಒಂದು ಸ್ವ ಉದ್ಯೋಗ ಘಟಕ ಅಗತ್ಯವಿದೆ. ಇಂದಿನ ಕಾರ್ಯಕ್ರಮದ ಜನಸಾಗರದಿಂದ ಮಹಿಳಾ ಸಂಘದವರು ಶಕ್ತಿ ಪ್ರದರ್ಶನ ಮಾಡಿದ್ದಾರೆ. ಮಾವಿನಕುರ್ವಾ ಗ್ರಾ.ಪಂ. ಈ ಕಾರ್ಯಕ್ರಮಕ್ಕೆ ಒಂದು ರೂಪಾಯಿ ವ್ಯಯಿಸಿಲ್ಲ. ವೈಯಕ್ತಿಕವಾಗಿ ಅನುದಾನ ನೀಡುವ ಮೂಲಕ ಕಾರ್ಯಕ್ರಮ ಜರುಗಿದೆ ಎಂದರು
ವಿಶೇಷ ಆಹ್ವಾನಿತರಾಗಿ ಆಗಮಿಸಿದ ರೋಟರಿ ಕ್ಲಬ್ ಕಾರ್ಯದರ್ಶಿ ಡಾ.ಗಾಯತ್ರಿ ಗುನಗಾ ಮಾತನಾಡಿ ನಮ್ಮ ದೇಶದಲ್ಲಿ ಸಾಂಸ್ಕ್ರತಿಕ ಸಂಪದ್ಬರಿತ ದೇಶ ಹಾಗೆಯೇ ಮಹಿಳೆಯರನ್ನು ಗೌರವಿಸುವ ದೇಶವಾಗಿದೆ. ಪ್ರತಿ ಮಹಿಳೆಯಲ್ಲಿಯೂ ಸಾಧಕರಿದ್ದಾರೆ. ಅವರ ಪ್ರತಿಭೆಗೆ ಪೊತ್ಸಾಹ ನೀಡಿದರೆ ಇನ್ನಷ್ಟು ಸಾಧಕರು ಹೊರಹೊಮ್ಮಲಿದ್ದಾರೆ. ನಮ್ಮಲ್ಲಿಯೂ ಇಂದು ಮಹಿಳೆಯರ ಬಗ್ಗೆ ಕೀಳರಿಮೆ ಭಾವನೆ ಇದೆ. ದೇಶದ ಪ್ರಥಮ ಪ್ರಜೆಯಾಗಿಯೂ ಇಂದು ಸಾಧನೆ ಮಾಡುತ್ತಿದ್ದಾರೆ ಎಂದು ಮಹಿಳಾ ಸಾಧಕರ ಸಾಧನೆಯ ಬಗ್ಗೆ ಮಾಹಿತಿ ನೀಡಿದರು.
ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಾದ ಸಂಘದ ಸದಸ್ಯರಿಗೆ ಸ್ಮರಣಿಕೆ ನೀಡಲಾಯಿತು.
ಪಂಚಾಯತ್ ರಾಜ್ ಇಲಾಖೆಯ ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಗುಣಮಾಲ ಇಂದ್ರ ಮಾತನಾಡಿ ಸ್ತ್ರೀ ಪುರುಷರು ಎಲ್ಲ ರಂಗದಲ್ಲಿಯೂ ಸಮಾನರು. ಇರ್ವರು ಜೊತೆಯಾಗಿ ಇದ್ದರೆ ಮಾತ್ರ ಸಾಧನೆ ಮಾಡಲು ಸಾಧ್ಯ. ಪೌರಾಣಿಕ ಕಾಲದಿಂದ ಇಂದಿನವರೆಗೂ ಮಹಿಳೆಗೆ ವಿಶೇಷ ಗೌರವ ಇದೆ. ರಾಜಕೀಯವಾಗಿ ಮೀಸಲತಿ ಸೇರಿದಂತೆ ವಿವಿಧ ಸೌಲಭ್ಯ ಇದ್ದು, ಅದನ್ನು ಉಳಿಸಿಕೊಂಡು ಹೊಗಬೇಕಿದೆ ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿ ಎನ್.ಎರ್.ಎಂ.ಎಲ್ ವ್ಯವಸ್ಥಾಪಕರಾದ ಬಾಲಚಂದ್ರ ನಾಯ್ಕ, ಮೇಲ್ವಿಚಾರಕ ವಿಶಾಲ್, ಒಕ್ಕೂಟದ ಅಧ್ಯಕ್ಷೆ ರಾಧಾ ನಾಯ್ಕ, ಕಾರ್ಯದರ್ಶಿ ಮೋಹಿನಿ ಅಂಬಿಗ, ಬರಹಗಾರರಾದ ಜಯಾ ಗೌಡ, ಪಿ.ಡಿ.ಓ ರಾಘವ ಮೇಸ್ತ, ಗ್ರಾ.ಪಂ. ಸದಸ್ಯರು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ನಂತರ ಮಹಿಳೆಯರಿಂದ ನೃತ್ಯ, ಸಂಗೀತ, ಗಾಯನ ಸೇರಿದಂತೆ ವಿವಿಧ ಮನೊರಂಜನಾ ಕಾರ್ಯಕ್ರಮ ಜರುಗಿತು.

More Stories
ಜಿಲ್ಲಾ ಮಟ್ಟದ ರಾಮಕ್ಷತ್ರೀಯ ಸಮಾಜದ ಹೊನಲು ಬೆಳಕಿನ ಹಗ್ಗಜಗ್ಗಾಟ ಪಂದ್ಯಾವಳಿ
ಕನ್ನಡ ಕಾರ್ತಿಕ 2024ರ ಅನುದಿನ ಅನುಸ್ಪಂದನ
ಹಿಂದುಳಿದ ನಾಯಕ ಬಿಕೆ ಹರಿಪ್ರಸಾದ್ ಅವರ ಬಗ್ಗೆ ನಾಲಗೆ ಹರಿಬಿಟ್ಟ ಹರೀಶ್ ಪೂಂಜಾ ಸಾರ್ವಜನಿಕ ಜೀವನದಲ್ಲಿರಲು ಯೋಗ್ಯರಲ್ಲ :ಮಂಜುನಾಥ ನಾಯ್ಕ