December 22, 2024

Bhavana Tv

Its Your Channel

ರಾಜ್ಯದಲ್ಲಿ ಗ್ರೀನ್ ಝೊನ್ ಜಿಲ್ಲೆಗೂ ಎಂಟ್ರಿ ಕೊಟ್ಟ ಕರೋನಾ; ಇಂದು ಕೂಡಾ ಹೊಸದಾಗಿ ೯೩ ಪ್ರಕರಣ ಪತ್ತೆ.

ಬೆಂಗಳೂರು: ರಾಜ್ಯದಲ್ಲಿ ಇಂದು ೯೩ ಜನರಿಗೆ ಕೋವಿಡ್-೧೯ ಸೋಂಕು ದೃಢವಾಗಿದ್ದು, ಇದರಿಂದ ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ ೨,೧೮೨ಕ್ಕೆ ಏರಿಕೆಯಾಗಿದೆ
ಉಡುಪಿ ೩೨, ಕಲಬುರಗಿ ೧೬, ಯಾದಗಿರಿ ೧೫, ಬೆಂಗಳೂರು ೮, ದಕ್ಷಿಣ ಕನ್ನಡ ೪, ಧಾರವಾಡ ೪, ಬಳ್ಳಾರಿ ೩, ಮಂಡ್ಯ ೨, ಕೋಲಾರ ೨, ಹಾಸನ, ತುಮಕೂರು, ಬೆಳಗಾವಿ, ವಿಜಯಪುರ, ಉತ್ತರಕನ್ನಡ, ರಾಮನಗರದಲ್ಲಿ ತಲಾ ೧ ಪ್ರಕರಣ ಪತ್ತೆಯಾಗಿವೆ.

ಇನ್ನು ರಾಜ್ಯದಲ್ಲಿ ಕಳೆದ ೨೪ ಗಂಟೆಯಲ್ಲಿ ೨ ಮೃತಪಟ್ಟಿದ್ದು ಸಾವಿನ ಸಂಖ್ಯೆ ೪೪ಕ್ಕೆ ಏರಿಕೆಯಾಗಿದೆ.
ಗ್ರೀನ್ ಝೊನನಲ್ಲಿದ್ದ ಯಾದಗಿರಿಗೆ ಇಂದು ಕರೋನಾ ಸೊಂಕು ಪತ್ತೆಯಾದರೆ, ಉಡುಪಿ ಜಿಲ್ಲೆಯಲ್ಲಿ ೩೨ ಹೊಸ ಪ್ರಕರಣ ಪತ್ತೆಯಾಗುವ ಮೂಲಕ ಆತಂಕ ಸೃಷ್ಟಿಸಿದೆ

೨,೧೮೨ ಪ್ರಕರಣಗಳ ಪೈಕಿ ೧,೪೩೧ ಪ್ರಕರಣಗಳು ಸಕ್ರಿಯವಾಗಿದ್ದು ಇಂದು ಆಸ್ಪತ್ರೆಯಿಂದ ೫೧ ಮಂದಿ ಬಿಡುಗಡೆಯಾಗಿದ್ದಾರೆ. ಒಟ್ಟು ೭೦೫ ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ೧೪೩೧ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದು, ೪೪ ಮಂದಿ ಕೊರೋನಾ ಸೋಂಕಿನಿ0ದ ಮೃತಪಟ್ಟಿದ್ದಾರೆ

error: