September 17, 2024

Bhavana Tv

Its Your Channel

ನಿರ್ನಳ್ಳಿ ಸಮೀಪ ಚಲಿಸುತ್ತಿದ್ದ ವಾಹನಕ್ಕೆ ಬೆಂಕಿ .

ಶಿರಸಿ: ಚಲಿಸುತ್ತಿದ್ದ ವಾಹನವೊಂದು ಆಕಸ್ಮಿಕ ಬೆಂಕಿ ತಗುಲಿ ರಸ್ತೆ ಮಧ್ಯೆಯಲ್ಲಿ ವಾಹನ ಸುಟ್ಟು ಕರಕಲಾದ ಘಟನೆ ಶಿರಸಿ ತಾಲೂಕಿನ ನಿರ್ನಳ್ಳಿ ಬಳಿ ಸಂಭವಿಸಿದೆ.
ಮಂಗಳವಾರ ಮುಂಜಾನೆ ಶಿಂಗನಮನೆ ವಿನಾಯಕ ಹೆಗಡೆ ಎನ್ನುವವರಿಗೆ ಸೇರಿದ ಓಮಿನಿ ಮಾರ್ಗಮಧ್ಯೆ ಅನಿಲ ಸೋರಿಕೆ ಕಾರಣದಿಂದ ಬೆಂಕಿ ಕಾಣಿಸಿಕೊಂಡ ಪರಿಣಾಮ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಅಧಿಕಾರಿಗಳು ಭೇಟಿ ನೀಡಿ ಬೆಂಕಿಯನ್ನು ನಂದಿಸಿದ್ದು ಬೆಂಕಿಯು ಸುತ್ತಮುತ್ತಲೂ ವ್ಯಾಪಿಸುದನ್ನು ತಡೆದಿದ್ದಾರೆ. ಶಿರಸಿ ಗ್ರಾಮೀಣ ಠಾಣಾ ಪೋಲಿಸರು ಸ್ಥಳಕ್ಕೆ ದೌಡಾಯಿಸಿದ್ದು ಪರಿಶೀಲನೆ ನಡೆಸಿದ್ದಾರೆ

error: