
ಬೆಂಗಳೂರು : ಮಹಾಮಾರಿರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಕಳೆದೊಂದು ವಾರದಿಂದ ಪ್ರತಿದಿನ ಸಾವಿರಕ್ಕೂ ಹೆಚ್ಚು ಕೇಸ್ ಗಳು ದಾಖಲಾಗುತ್ತಿವೆ.ರಾಜ್ಯದಲ್ಲಿ ಕೊರೋನಾ ಅಟ್ಟಹಾಸ ಮುಂದುವರೆದಿದ್ದು, ಒಂದೇ ದಿನ ೧೯೨೫ ಜನರಿಗೆ ಹೊಸದಾಗಿ ಕೋವಿಡ್ ಸೋಂಕು ತಗುಲಿದ್ದು, ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ ೨೩೪೭೪ಕ್ಕೆ ಏರಿಕೆಯಾಗಿದೆ.
ಕಳೆದ ೨೪ ಗಂಟೆ ಅವಧಿಯಲ್ಲಿ ೩೭ ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು ಸಾವಿನ ಸಂಖ್ಯೆ ೩೭೨ ಕ್ಕೆಏರಿಕೆಯಾಗಿದೆ. ಬೆಂಗಳೂರಿನಲ್ಲೇ ೧೨೩೫ ಜನರಿಗೆ ಮಹಾಮಾರಿ ಕಾಣಿಸಿಕೊಂಡಿದೆ. ಇಂದು ೩೦೨ ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚರ‍್ಜ್ ಆಗಿದ್ದಾರೆ.
ರಾಜ್ಯದಲ್ಲಿ ೧೩೨೫೧ ಸಕ್ರಿಯ ಪ್ರಕರಣಗಳಿದ್ದು, ಇದುವರೆಗೂ ೯೮೪೭ ಮಂದಿ ಆಸ್ಪತ್ರೆಯಿಂದ ಹೊರ ಬಂದಿದ್ದಾರೆ. ಕೊರೊನಾಗೆ ಬಲಿಯಾದವರ ಸಂಖ್ಯೆ ೩೭೨ಕ್ಕೆ ತಲುಪಿದ್ದು, ಐಸಿಯುನಲ್ಲಿ ೨೪೩ ರೋಗಿಗಳು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಬೆಂಗಳೂರಿನಲ್ಲಿ ಕೊರೊನಾವೈರಸ್ ಅಟ್ಟಹಾಸ ಮುಂದುವರಿದಿದೆ. ಒಂದೇ ದಿನ ಸಿಲಿಕಾನ್ ಸಿಟಿಯಲ್ಲಿ ಮಹಾಮಾರಿಗೆ ೧೬ ಮಂದಿ ಪ್ರಾಣ ಬಿಟ್ಟಿದ್ದು, ೧೨೩೫ ಮಂದಿಗೆ ಕೊವಿಡ್-೧೯ ಸೋಂಕು ಅಂಟಿಕೊಂಡಿದೆ. ದಕ್ಷಿಣ ಕನ್ನಡ ೧೪೭, ಬಳ್ಳಾರಿ ೯೦, ವಿಜಯಪುರ ೫೧, ಕಲಬುರಗಿ ೪೯, ಉಡುಪಿ ೪೫, ಧಾರವಾಡ ೪೫, ಬೀದರ್ ೨೯, ಮೈಸೂರು ೨೫, ಕೊಪ್ಪಳ ೨೨, ಉತ್ತರ ಕನ್ನಡ ೨೧, ಚಾಮರಾಜನಗರ ೧೯, ಹಾವೇರಿ ೧೫, ಹಾಸನ ೧೪, ಚಿಕ್ಕಬಳ್ಳಾಪು ೧೫, ತುಮಕೂರು ೧೫, ಕೋಲಾಪ ೧೩, ಬೆಳಗಾವಿ ೧೧, ದಾವಣಗೆರೆ ೧೧ ರಾಯಚೂರು ಹಾಗೂ ಮಂಡ್ಯದಲ್ಲಿ ೧೦ ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿದೆ.
More Stories
ಮ್ಯಾರಥಾನ ಓಟದ ಮೂಲಕ ಮತದಾನ ಜಾಗೃತಿ
ಮೃತ ನೇಹಾಳಿಗೆ ಶ್ರದ್ಧಾಂಜಲಿ ಸಲ್ಲಿಸಿದ ಡಾ.ಅಂಜಲಿ
ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರ ದಿವ್ಯ ಉಪಸ್ಥಿತಿಯಲ್ಲಿ ನಡೆದ ಸಾಧನಾ ಕುಟೀರದ 6ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ