May 4, 2024

Bhavana Tv

Its Your Channel

ಮಾಸ್ಕ್ ಹಾಗೂ ಸ್ಯಾನಿಟೈಸರ್ ನ್ನು ಉಚಿತವಾಗಿ ನೀಡಿದ ಟಿಎಪಿಸಿಎಂಎಸ್ ನಿರ್ದೇಶಕ ಬಿ.ಕೆ.ರಾಜೇಶ್

ಮಳವಳ್ಳಿ ; ಮಳವಳ್ಳಿ ತಾಲ್ಲೂಕಿನಲ್ಲಿ ಕೋರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ
ಟಿಎಪಿಸಿಎಂಎಸ್ ನಿರ್ದೇಶಕ ಹಾಗೂ ರಾಜ್ಯ ಕುರುಬರ ಸಂಘದ ನಿರ್ದೇಶಕ ಬಿ.ಕೆ ರಾಜೇಶ್ ರವರು ಗ್ರಾಮ ಗ್ರಾಮಗಳಿಗೂ ತೆರಳಿ ಮಾಸ್ಕ್ ಹಾಗೂ ಸ್ಯಾನಿಟೈಸರ್ ನ್ನು ಉಚಿತವಾಗಿ ನೀಡುವ ಮೂಲಕ ಕೋವಿಡ್ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.


ತಮ್ಮ ಹುಟ್ಟೂರಾದ ಮಳವಳ್ಳಿ ತಾಲ್ಲೂಕಿನ ಅಣ್ಣೇಕೊಪ್ಪಲು ಗ್ರಾಮದಿಂದ ಪ್ರಾರಂಭಿಸಿದ ಅವರು ತಾಲೂಕಿನಾದ್ಯಂತ ಕೊರೋನ ೨ನೇ ಅಲೆ ವ್ಯಾಪಕ ವಾಗಿ ಹರಡುತ್ತಿದ್ದು ಪ್ರತಿನಿತ್ಯ ಸಾವು ನೋವುಗಳು ಸಂಭವಿಸುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದ್ದು ಈ ಹಿನ್ನೆಲೆಯಲ್ಲಿ ತಾಲ್ಲೂಕಿನ ಪ್ರತೀ ಗ್ರಾಮಗಳಿಗೂ ತೆರಳಿ ಹಳ್ಳಿಯ ಜನರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ನ್ನು ವಿತರಿಸಿ ಜಾಗೃತಿ ಮೂಡಿಸುತ್ತೇನೆ ಎಂದರು. ತಾಲ್ಲೂಕಿನಲ್ಲಿ ರೈತರು ಹೆಚ್ಚಾಗಿದ್ದ ಅವರಿಗೆ ಅರಿವಿನ ಕೊರೆತೆ ಇದ್ದು ಪ್ರತಿಯೊಬ್ಬರು ಸಾಮಾಜಿಕ ಅಂತರ ಕಾಪಾಡಿಕೊಂಡು ಮಾಸ್ಕ್ ಧರಿಸುವುದು ಕಡ್ಡಾಯವಾಗ ಬೇಕು ಎಂದರು.
ಇದೇ ವೇಳೆ ಮೆಡಿಕಲ್ ಕುಮಾರ್ ಸೇರಿದಂತೆ ಮತ್ತಿತ್ತರರು ಇದ್ದರು.

ವರದಿ: ಮಲ್ಲಿಕಾರ್ಜುನ ಸ್ವಾಮಿ

error: