December 21, 2024

Bhavana Tv

Its Your Channel

ನಾಟಕ ಕಲಾವಿದರಿಗೆ ದಿನಸಿ ವಿತರಣೆ ಮಾಡಿದ ಸಮಾಜ ಸೇವಕರು, ಬಿಜೆಪಿಯ ಯುವ ಮುಖಂಡ ವಿಠಲ್ ಜಕ್ಕಾ.

ಇಳಕಲ್ ; ಹಾಮಾರಿ ಕೊರೋನಾ ದ ಹಾವಳಿಯಿಂದ ಲಾಕ್‌ ಡೌನ್ ಪರಿಣಾಮದಿಂದ ಅನೇಕ ಜನರು ತೊಂದರೆ ಗೊಳಗಾಗಿದ್ದಾರೆ.ಅದರಲ್ಲಿ ಜನರನ್ನು ನಗಿಸುತ್ತಾ ಸಮಾಜಕ್ಕೆ ಒಳ್ಳೆ ಸಂದೇಶವನ್ನು ಕೊಡುತ್ತಿರುವ ನಾಟಕ ಕಲಾವಿದರ ಜೀವವು ಕೂಡ ಸಂಕಷ್ಟಕ್ಕೊಳಗಾಗಿದ್ದಾರೆ.

ದಿನನಿತ್ಯ ನಾಟಕಗಳನ್ನು ಆಡುವ ಮೂಲಕ ಜೀವನ ನಡೆಸುತ್ತಿದ್ದ ಇಳಕಲ್ ಶ್ರೀ ವಿಶ್ವಜ್ಯೋತಿ ಪಂಚಾಕ್ಷರಿ ನಾಟ್ಯ ಸಂಘ ಜೇವರಗಿ ಇಳಕಲ್ ಇವರ ಕಂಪೆನಿಯಲ್ಲಿ ಇರುವ ಕಲಾವಿದರ ಸಂಕಷ್ಟ ಪರಿಸ್ಥಿತಿಯನ್ನು ಕಂಡ ಇಳಕಲ್ ನಗರದ ಬಿ ಜೆ ಪಿ ಯುವ ಮುಖಂಡರಾದ ವಿಠಲ ಜಕ್ಕಾ ಅವರು ಒoದು ತಿಂಗಳಿಗಾಗುವಷ್ಟು ದಿನಸಿ ವಿತರಣೆ ಮಾಡಿ ಮಾನವೀತೆ ಮೆರೆದಿದ್ದಾರೆ .
ಈ ಮಹಾಮಾರಿ ಕೊರೋನಾವನ್ನು ನಮ್ಮ ದೇಶವನ್ನು ಬಿಟ್ಟು ಓಡಿಸಲು ನಾವೆಲ್ಲರೂ ಬದ್ಧರಾಗೋಣ .ಮಾಸ್ ಕಡ್ಡಾಯವಾಗಿ ಧರಿಸಬೇಕು ಸ್ಯಾನಿಟೈಸರ್ ಉಪಯೋಗಿಸಬೇಕು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೆಂದು ಬಿಜೆಪಿ ಯುವ ಮುಖಂಡ ವಿಠಲ ಜಕ್ಕಾ ಅವರು ಸಾರ್ವಜನಿಕರಲ್ಲಿ ವಿನಂತಿ ಮಾಡಿಕೊಂಡರು .

ಜನಜಾಗೃತಿ ವೇದಿಕೆ, ಬಿಜೆಪಿಯ ಮುಖಂಡರಾದ ಯಲ್ಲಪ್ಪಪೂಜಾರಿ. ಮುತ್ತಪ್ಪ ಕದರಿ.ರಮೇಶ ಮಡಿವಾಳರ.ಮಾಹಾಂತೇಶ ವಜಲ.ಆನಂದ ವಗ್ಗಾ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು .

ವರದಿ: ವಿನೋದ ಬಾರಿಗಿಡದ ಭಾವನಾ ಟಿವಿ ಇಳಕಲ್

error: