December 21, 2024

Bhavana Tv

Its Your Channel

ಕರ್ನಾಟಕ ವಿಶ್ವ ನಿರ್ಮಾಣ ಸೇನೆ ಬಾದಾಮಿ ಘಟಕದಿಂದ ಕರೋನ ಹೆಮ್ಮಾರಿಯಿಂದ ತತ್ತರಿಸಿ ಹೋದ ಕರುನಾಡಿನ ಜನರ ರಕ್ಷಣೆಗಾಗಿ ತಾಲೂಕಿನ ದೇವಸ್ಥಾನಗಳಿಗೆ ಪೂಜೆ ಸಲ್ಲಿಸಲಾಯಿತು.

ಬಾದಾಮಿ ; ದಿನೇ ದಿನೇ ಉಲ್ಬಣ ಗೊಂಡು ಕರುನಾಡಿನ ಜನರ ಪ್ರಾಣ ತೆಗೆದುಕೊಳ್ಳುತ್ತಿರುವ ಕರೋಣ ಹೆಮ್ಮಾರಿಯಿಂದ ನಾಡಿನ ಜನರನ್ನು ರಕ್ಷಿಸುವಂತೆ, ಬಾಗಲಕೋಟೆ ಜಿಲ್ಲೆ ಬಾದಾಮಿ ಯ ಕರ್ನಾಟಕ ವಿಶ್ವ ನಿರ್ಮಾಣ ಸೇನೆ ಘಟಕದಿಂದ ತಾಲೂಕಿನ ಸುಕ್ಷೇತ್ರ ಶಕ್ತಿದೇವತೆ ಶ್ರೀ ಬನಶಂಕರಿ ದೇವಿ ದೇವಸ್ಥಾನಕ್ಕೆ ತೆರಳಿದ ಸಂಘಟನೆಯ ತಂಡ,, ಕಾಯಿ ಕರ್ಪೂರದಿಂದ ಬೆಳಗಿ, ಬಂದಿರುವ ಈ ಮಹಾಮಾರಿ ರೋಗದಿಂದ ನಾಡಿನ ಸಮಸ್ತ ಜನರನ್ನು ರಕ್ಷಿಸು ತಾಯೆ ಕ ರೋನ ವನ್ನು ಹೋಗಲಾಡಿಸಿ ಕಾಪಾಡು ತಾಯಿ ಎಂದು ಬೇಡಿಕೊಂಡ ತಂಡ ಹಾಗೆಯೇ ಸುಕ್ಷೇತ್ರಗಳಾದ ಮಹಾಕೂಟ, ಶಿವಯೋಗ ಮಂದಿರ,,ಕೊನಮ್ಮದೇವಿ ದೇವಸ್ಥಾನ,, ಕಂಠಿ ವಿರಭಾಧ್ರೇಶ್ವರ ದೇವಸ್ಥಾನ ಹೀಗೆ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಪ್ರಾರ್ಥನೆ ಮಾಡಿ ನಾಡಿನ ಜನರ ಉಳಿವಿಗಾಗಿ ದೇವರಲ್ಲಿ ಪ್ರಾರ್ಥಿಸಿದರು. ಕರುನಾಡಿನ ಸಮಸ್ತ ಜನರ ರಕ್ಷಣೆಗಾಗಿ ಪ್ರಾರ್ಥಿಸಿ ಮಾನವೀಯತೆ ಮೆರೆದಿದೆ ಬಾದಾಮಿಯ ಕರ್ನಾಟಕ ವಿಶ್ವ ನಿರ್ಮಾಣ ಸೇನೆ. ಇದೇ ಸಂದರ್ಭದಲ್ಲಿ. ಸಂಘಟನೆಯ ಅಧ್ಯಕ್ಷ ಮಂಜುನಾಥ ಕಲಾಲ್, ಸಂಚಾಲಕರು ಭೀಮ್ಸಿ ಗೋರಕೊಪ್ಪ, ,ಸಂದಿಪ ಕಲಾಲ,ರವಿ ವಡ್ಡರ, ಮಂಜುನಾಥ ಪಾಟೀಲ ,ಹನುಮಂತ ಮೇಟಿ ,ಬಸು ಕೊಪ್ಪನ್ನವರ,ಪ್ರವಿಣ ಬುದಿಹಾಳ,ಈಶ್ವರ ಮಡ್ಡಿ,,ವಿಠ್ಠಲ ಯಲನಾಯ್ಕರ್ ಚಂದು ಹಳ್ಳಿ,ಮುಂತಾದ ಸದಸ್ಯರು ಭಾಗವಹಿಸಿದ್ದರು.

ವರದಿ:- ರಾಜೇಶ್.ಎಸ್.ದೇಸಾಯಿ ಬಾದಾಮಿ

ಹೆಚ್ಚಿನ ಮಾಹಿತಿ ಹಾಗೂ ಸುದ್ದಿ ವಿವರಕ್ಕೆ ಹಾಗೂ ವಿಡಿಯೊ ನ್ಯೂಸ್ ವೀಕ್ಷಿಸಲು ಭಾವನ ಟಿವಿ ವೀಕ್ಷಿಸಿ. ಭಾವನ ಟಿವಿ ಇದು ನಿಮ್ಮ ವಾಹಿನಿ.
ಭಾವನಾ ಟಿವಿಯಲ್ಲಿ ಮತ್ತು ವೆಬ್ ಸೈಟ್‌ನಲ್ಲಿ ಜಾಹಿರಾತು ನೀಡಲು ಕರೆ ಮಾಡಿ, 9740723670, 9590906499

error: