December 21, 2024

Bhavana Tv

Its Your Channel

ಕೊರೊನ ಸೋಂಕಿತರಿಗೆ ಧೈರ್ಯ ತುಂಬಿದ ಶಾಸಕ ದೊಡ್ಡನಗೌಡ ಜಿ. ಪಾಟೀಲ್,

ಇಳಕಲ್ ; ಹುನಗುಂದ ಮತಕ್ಷೇತ್ರದ ಶಾಸಕರಾದ ದೊಡ್ಡನಗೌಡ ಜಿ ಪಾಟೀಲ ಅವರು ಮತ್ತು ನಗರದ ಸರಕಾರಿ ಆಸ್ಪತ್ರೆಯ ವೈಧ್ಯಾಧಿಕಾರಿಗಳಾದ ಶ್ರೀಮತಿ ಚೇತನಾ ಶ್ಯಾವಿ, ಡಾ|| ವಿಧ್ಯಾಶಂಕರ ಇವರ ನೇತೃತ್ವದಲ್ಲಿ ಇಳಕಲ್ ನಗರದ ಎಮ್ ಸಿ ಎಚ್ ಆಸ್ಪತ್ರೆಯ ಕೋವಿಡ್ ೧೯. ನಿ೦ದ ಚಿಕಿತ್ಸೆ ಪಡೆಯುತ್ತಿರುವ ಜನರಿಗೆ ಶಾಸಕರೇ ಖುದ್ದಾಗಿ ಭೇಟ್ಟಿಯಾಗಿ ಕೊರೋನಾ ಸೋಂಕಿತರ ಆರೋಗ್ಯದ ಬಗ್ಗೆ ವಿಚಾರಿಸಿ ರೋಗಿಗಳಿಗೆ ಧೈರ್ಯ ತುಂಬಿದರು,

ಶಾಸಕ ದೊಡ್ಡನಗೌಡ ಜಿ. ಪಾಟೀಲರು ಆಸ್ಪತ್ರೆಯಲ್ಲಿನ ಕೊರೋನಾ ಸೋಂಕಿತರ ಇಲ್ಲಿಯವರೆಗೆಗಿನ ವಿವರ ಪಡೆದರು, ೪೧ ರೋಗಿಗಳು ಆಸ್ಪತ್ರೆಯಲ್ಲಿ ಭರ್ತಿ ಯಾಗಿದ್ದು , ೨೫ ರೋಗಿಗಳ ಸಂಪೂರ್ಣ ಗುಣಮುಖರಾಗಿದ್ದಾರೆ, ೧೪ ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಕಳಿಸಲಾಗಿದೆ, ಎರಡು ರೋಗಿಗಳು ಸಾವನ್ನಪ್ಪಿದ್ದ ಬಗ್ಗೆ ಹಾಗು ಈಗಿರುವ ರೋಗಿಗಳ ಸಂಖ್ಯ ಕಡಿಮೇಯಾಗುತ್ತಿರುವದರ ಮಾಹಿತಿಯನ್ನು ವೈಧ್ಯರಿಂದ ಪಡೆದರು.
ರೋಗ ತಡೆಗಟ್ಟುವ ನೀಟ್ಟಿನಲ್ಲಿ ನಿರಂತರವಾಗಿ ಸರಕಾರದಿಂದ ಆಸ್ಪತ್ರೆಗೆ ಬೇಕಾಗುವ ಸೌಕರ್ಯಗಳ ಒದಗಿಸುವದಾಗಿ ಶಾಸಕ ದೊಡ್ಡನಗೌಡ ಜಿ. ಪಾಟೀಲ ಅವರು ವೈಧ್ಯರಿಗೆ ಬರವಸೆ ನೀಡಿದರು.
ಸಂದರ್ಬದಲ್ಲಿ ನಗರದ ಪಿ ಎಸ್ ಐ.ಎಸ್ ಬಿ ಪಾಟೀಲ, ಸರಕಾರಿ ಆಸ್ಪತ್ರೆಯ ಸಿಬ್ಬಂದಿ ಮತ್ತು ನರ್ಸಗಳು ಉಪಸ್ಥಿತರಿದ್ದರು.
ವರದಿ : ವಿನೋದ ಬಾರಿಗಿಡದ . ಇಳಕಲ್

error: