December 21, 2024

Bhavana Tv

Its Your Channel

ಗ್ರಾಮಸ್ಥರಿಗೆ ರೋಗನಿರೋಧಕ ಶಕ್ತಿ ಹೆಚ್ಚಿಸುವ ಬೂಸ್ಟರ್ ವಿತರಣೆ

ಬಾದಾಮಿ ತಾಲೂಕಿನ ಹೊಸೂರು ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಗೆಳೆಯರ ಬಳಗದಿಂದ

ಬಾದಾಮಿ ; ಕರೊನ್ ಮಹಾಮಾರಿ ಹಿನ್ನೆಲೆ ಲಾಕ್ ಡೌನ್ ದಿಂದಾಗಿ ಸಾಮಾನ್ಯ ಜನರ ಆರ್ಥಿಕ ಸ್ಥಿತಿ ಹದಗೆಟ್ಟು ಹೋಗಿದೇ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಹೊಸೂರು ಗ್ರಾಮದ ಗ್ರಾಮ ಪಂಚಾಯತ್ ಸದಸ್ಯರುಗಳ ಹಾಗೂ ಮಾಜಿ ಪ್ರತಿನಿಧಿಗಳು ಜನರಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಸೊಲ್ಲಾಪುರದ ಕನ್ನೇರಿ ಮಠದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಬೂಸ್ಟರ್‌ನ್ನು ನೀರಿನಲ್ಲಿ ಮಿಶ್ರಣ ಮಾಡಿ ಸೇವಿಸಲು ಔಷಧವನ್ನು ಗ್ರಾಮಸ್ಥರಿಗೆ ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಬೇಲೂರಪ್ಪ ಬೋವಿ, ಷರೀಫಾ ಸಾಬ ಹರ್ತಿ, ನೀಲಪ್ಪ ದೀವಮಾ ನಾಳಿನ,ಶಾಂತಮ್ಮ ಬದ್ರಿ, ವಾಯ್. ಬಿ, ದೇವಮಾಳಿ ಮಾಜಿ ಗ್ರಾ.ಪಂ.ಉಪಾಧ್ಯಕ್ಷರು, ಎಂ. ವಾಯ. ಇಸರ ನಾಳ, ಡಿ. ಎಸ್.ಬೂಸನೂರ ಮಠ ಗ್ರಾ.ಪಂ.ಅಧ್ಯಕ್ಷರು,ಶೇಖಾಯ್ಯ.ವಿ.ಬದ್ರಿ, ಶರಣಯ್ಯ ಬದ್ರಿ,ಪಡಿಯಪ್ಪ.ಕೊಳಮಾಲಿ, ಗ್ರಾ.ಪಂ.ಕಾರ್ಯದರ್ಶಿ, ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಪ್ರವೀಣ ಸಿಂಗ್ರಿ ,ಚಂದ್ರು ಮೇಟಿ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ,ಆಶಾ ಕಾರ್ಯಕರ್ತೆಯರು,ಗ್ರಾಮದ ಯುವಕ ಸಂಘಗಳ ಯುವಕರು ಗುರುಹಿರಿಯರು ಪಾಲ್ಗೊಂಡಿದ್ದರು.

ವರದಿ:- ರಾಜೇಶ್.ಎಸ್.ದೇಸಾಯಿ ಬಾದಾಮಿ

error: