December 21, 2024

Bhavana Tv

Its Your Channel

ಹಿರೇ ಓತಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವ್ಯಾಕ್ಸಿನ್ ಲಸಿಕಾ ಕಾರ್ಯಕ್ರಮ .

ಇಳಕಲ್; ಕೊವಿಡ ಎರಡನೇ ಅಲೆಯ ಹಿನ್ನೆಲೆಯ ತೀವ್ರತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸರ್ಕಾರ ವ್ಯಾಕ್ಸೀನ್ ಲಸಿಕೆಯನ್ನು ಎಲ್ಲ ಜನರಿಗೂ ಹಾಕಿಸಿಕೊಳ್ಳಬೇಕೆಂದು ಗ್ರಾಮಗಳಿಗೆ ತೆರಳಿ ವ್ಯಾಕ್ಸಿನ್ ಲಸಿಕಾ ಕಾರ್ಯಕ್ರಮ ಮಾಡುತ್ತಿದ್ದಾರೆ.

ಅದರಂತೆ ಬಾಗಲಕೋಟ ಜಿಲ್ಲೆಯ ಇಳಕಲ್ ತಾಲ್ಲೂಕಿನ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಹಳ್ಳಿಗೂ ಒಂದೊAದು ದಿನಾಂಕ ನಿಗದಿಪಡಿಸಿ ವೈದ್ಯರ ತಂಡವೇ ಗ್ರಾಮಗಳಿಗೆ ತೆರಳಿ ೪೫ ವರ್ಷ ಮೇಲ್ಪಟ್ಟ ಎಲ್ಲರಿಗೂ ೧ಮತ್ತು ೨ ನೇ ಡೋಜ್ ವ್ಯಾಕ್ಸಿನ್ ಮಾಡುತ್ತಿದ್ದಾರೆ.

ಹಿರೇ ಓತಗೇರಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಮರಟಗೇರಿ ಗ್ರಾಮದಲ್ಲಿ ವ್ಯಾಕ್ಸಿನ್ ಲಸಿಕಾ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ವೀರನಗೌಡ ಮರಟಗೇರಿ ನೇತೃತ್ವದಲ್ಲಿ ಹಾಗೂ ಎಲ್ಲ ಸಿಬ್ಬಂದಿಗಳು ವೈದ್ಯರ ಬಳಗ ಹಾಗೂ ಸದಸ್ಯರುಗಳ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು .

ವರದಿ : ವಿನೋದ ಬಾರಿಗಿಡದ, ಬಾಗಲಕೋಟೆ

error: