December 21, 2024

Bhavana Tv

Its Your Channel

ಹಿರೇ ಹಾಳ ಗ್ರಾಮದಲ್ಲಿ ಕೋವಿಡ್ ಕೇರ್ ಸೆಂಟರ್ ಉದ್ಘಾಟನೆ.

ಬಾಗಲಕೋಟೆ ; ಬೆಳಗಾಂವ ವಿಭಾಗ ಸಹಪ್ರಭಾರಿ ಬಸವರಾಜ ಯಂಕAಚಿ ,ಬಾಗಲಕೋಟ ಭಾರತೀಯ ಜನತಾ ಪಕ್ಷದ ಜಿಲ್ಲಾ ಅಧ್ಯಕ್ಷ ಶ್ರೀ ಶಾಂತಗೌಡ ಪಾಟೀಲ ಅವರಿಂದ ಹಿರೇ ಹಾಳ ಗ್ರಾಮದಲ್ಲಿ ಕೋವಿಡ್ ಕೇರ್ ಸೆಂಟರ್ ಉದ್ಘಾಟನೆ.

ಬೆಳಗಾಂವ ವಿಭಾಗ ಸಹಪ್ರಭಾರಿ ಬಸವರಾಜ ಯಂಕAಚಿ ,ಹಾಗೂ ಬಾಗಲಕೋಟ ಭಾರತೀಯ ಜನತಾ ಪಕ್ಷದ ಜಿಲ್ಲಾ ಅಧ್ಯಕ್ಷರಾದ ಶಾಂತಗೌಡ ಪಾಟೀಲ ಅವರ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ರೋಣ ತಾಲೂಕು ಹಿರೇಹಾಳ ಗ್ರಾಮದಲ್ಲಿ ಕೋವಿಡ್ ಕೇರ್ ಕೇಂದ್ರದ ಉದ್ಘಾಟನೆ, ಹಾಗೂ ಹಿರೇಹಾಳ ,ಕೊತಬಾಳ , ಮುಗಳಿ
ಗ್ರಾಮಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅನಿವಾಸಿ ಭಾರತೀಯ ಹಾಗು ದೇಶಭಕ್ತ ಸಾಮಾಜಿಕ ಕಾರ್ಯಕರ್ತ ಜಗದೀಶ ಅಮಾತ್ಯಗೌಡರ ಅವರ ಪ್ರಯತ್ನದ ಫಲವಾಗಿ ವಿಸ್ಟಿಯಾನ ಹಾಗೂ ವಿದ್ಯಾಪೋಷಕ ಸಂಸ್ಥೆಯವರು ನೀಡಿದ ಕಾಟ್,ಬೆಡ್ ,ಆಕ್ಸಿಜನ್ ಕಾನ್ಸನ್ಟ್ರೇಟೋರ್,ಸ್ಯಾನಿಟೈಸರ್ , ಮಾಸ್ಕ,ಥರ್ಮಾಮೀಟರ್ ,ಗ್ಲೋವ್ಸ್ ಇತ್ಯಾದಿ ಕೋವಿಡ್ ಕೇರ್ ಗೆ ಸಲಕರಣೆ ಹಾಗು ಔಷಧಿಗಳನ್ನು ಮುಕ್ತವಾಗಿ ವಿತರಿಸಲಾಯಿತು.
ಆಶಾ ಕಾರ್ಯಕರ್ತೆಯರಿಗೆ ಹಾಗು ಆರೋಗ್ಯ ಕಾರ್ಯಕರ್ತರಿಗೆ ಹ್ಯಾಂಡಗ್ಲೋವ್ಸ್ ಹಾಗು ಇನ್ನಿತರ ಅವಶ್ಯಕ ಪರಿಕರಗಳನ್ನು ಪಂಚಾಯಿತಿಯ ಹಿರಿಯರ ಹಾಗು ಬಿಜೆಪಿ ಮುಖಂಡರಾದ ಅಶೋಕ ನವಲಗುಂದ ,ಬಾಗಲಕೋಟ ಜಿಲ್ಲಾ ವಕ್ತಾರ ಸತ್ಯನಾರಾಯಣ ಹೇಮಾದ್ರಿ ಮುಂತಾದವರ ಉಪಸ್ಥಿತಿಯಲ್ಲಿ ವಿತರಿಸಲಾಯಿತು .

ವರದಿ:- ರಾಜೇಶ್.ಎಸ್.ದೇಸಾಯಿ ಬಾಗಲಕೋಟೆ

error: