December 19, 2024

Bhavana Tv

Its Your Channel

ದಿನ ನಿತ್ಯ ಬಳಸುವ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಮಹಿಳಾ ಕಾಂಗ್ರೆಸ್ ಪಕ್ಷದಿಂದ ಪ್ರತಿಭಟನೆ

ಬಾಗಲಕೋಟ: ಪ್ರತಿದಿನ ಬಳಸುವ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕೆಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಮಹಿಳಾ ಕಾಂಗ್ರೆಸ್ ಪಕ್ಷದ ವತಿಯಿಂದ ಮಹಿಳೆಯರು ಕೈಯಲ್ಲಿ ಲಟ್ಟಣಿಗೆ ಮತ್ತು ಸೌಟ್ ಹಿಡಿದುಕೊಂಡು ಪ್ರತಿಭಟಿಸಿದರು .
ಬಾಗಲಕೋಟ ಜಿಲ್ಲಾಪಂಚಾಯತ ಮಾಜಿ ಅಧ್ಯಕ್ಷರಾದ ವೀಣಾ ವಿಜಯಾನಂದ ಕಾಶಪ್ಪನವರ ಅವರು ಮಹಿಳಾ ಕಾಂಗ್ರೆಸ್ ಪಕ್ಷ ವತಿಯಿಂದ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಿಂದ ಮುಖ್ಯರಸ್ತೆಮಾರ್ಗವಾಗಿ ಕೈಯಲ್ಲಿ ಲಟ್ಟಣಿಗೆಮತ್ತು ಸೌಟು ಹಿಡಿದು ಕೇಂದ್ರ ಮತ್ತು ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗುತ್ತಾ ಇಳಕಲ್ಲಿನ ಹೃದಯಭಾಗವಾದ ಎಸ್.ಆರ್.ಕಂಠಿಯವರ ವೃತ್ತಕ್ಕೆ ಬಂದು ಕಂಠಿಯವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟಿಸಿದರು.

ಕಾಂಗ್ರೆಸ್ ಪಕ್ಷದ ಮಹಿಳಾ ಘಟಕ ದಿಂದ ಪ್ರತಿಯೊಂದು ಜಿಲ್ಲೆ ತಾಲ್ಲೂಕ ಮಟ್ಟದಲ್ಲಿ ಕೆಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಬೆಲೆ ಏರಿಕೆ ಖಂಡಿಸಿ ಮಹಿಳೆಯರು ಸೌಟು ಹಾಗೂ ಲಟ್ಟಣಿಗೆ ಹಿಡಿದುಕೊಂಡು ಪ್ರತಿಭಟಿಸುತ್ತಾ.ಮಹಾಮಾರಿ ಕೊರೋನಾ ದಿಂದ ತತ್ತರಿಸಿ ಜೀವನ ನಡೆಸುವುದೇ ಕಷ್ಟಕರ ಇದ್ದಾಗ ದಿನ ನಿತ್ಯ ಬಳಕೆಯ ಆಹಾರ ಪದಾರ್ಥಗಳು ಹಾಗೂ ಗ್ಯಾಸ್ ಹಾಲು ತರಕಾರಿ, ಇವೆಲ್ಲವನ್ನು ಕೇಂದ್ರ ಸರಕಾರ ಎರಡು ಪಟ್ಟು ಬೆಲೆ ಏರಿಕೆ ಮಾಡಿದರಿಂದ ಮಹಿಳೆಯರಿಗೆ ಮನೆ ನಡೆಸಲು ಬಹಳ ತೊಂದರೆ ಆಗುತ್ತಿದ್ದು. ಅದೆ ರೀತಿಯಾಗಿ ಮಕ್ಕಳನ್ನ ನೋಡಿಕೊಂಡು ಅವರ ಶೈಕ್ಷಣಿಕ ,ಹಾಗೂ ಮನೆಯನ್ನ ತೂಗಿಸಿಕೊಂಡು ಹೋಗಲು ಕಷ್ಟಕರವಾಗಿದೆ .ಪುರುಷರು ತಮ್ಮ ಗಾಡಿಗೆ ಪೆಟ್ರೋಲ್ ಹಾಕಿಸಿಕೊಳ್ಳಲು ಯೋಚಿಸುವ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ .
ತೈಲ ಬೆಲೆ ಏರಿಕೆ ಯಿಂದ ,ಪ್ರಸ್ತುತ ಕಾಲದಲ್ಲಿ ಎತ್ತಿನ ಬಂಡಿ ,ಮತ್ತು ಸೈಕಲ್ ಹೋಡಿಸುವ ಪರಸ್ಥಿತಿ ಕೇಂದ್ರ ಹಾಗೂ ರಾಜ್ಯ ಸರಕಾರ ತಂದಿಟ್ಟಿದೆ.
ಇವತ್ತು ಎಲ್ಲಾದ್ರಲ್ಲೂ ಕೇಂದ್ರ ಸರ್ಕಾರ ವೈಫಲ್ಯತೆ ಕಂಡಿದೆ. ಹಿಂದಿನ ಕಾಲದ ಪರಿಸ್ಥಿತಿಯನ್ನ ಇಂದು ಕೇಂದ್ರ ಸರಕಾರ ತಂದುಬಿಟ್ಟಿದೆ.
ಈ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷದ ಮಹಿಳಾ ಅಧ್ಯಕ್ಷರಾದ ಸರಸ್ವತಿ ಈಟಿ ,ನಜಮಾ ಮೂಗನೂರ ,ಸಂಗೀತ , ಸೇರಿದಂತೆ ಮತ್ತಿತರ ಮಹಿಳಾ ಕಾರ್ಯಕರ್ತರು ಉಪಸ್ಥಿತರಿದ್ದರು .
ವರದಿ; ವಿನೋದ ಬಾರಿಗಿಡದ ಇಳಕಲ್

error: