December 21, 2024

Bhavana Tv

Its Your Channel

ಹೊಸದಾಗಿ ಪರೀಕ್ಷಾ ಕೇಂದ್ರವಾದ ಸರ್ ಸಿ ವ್ಹಿ ರಾಮನ್ ಪ್ರೌಢಶಾಲೆ ಹನಗಂಡಿ

ಬಾಗಲಕೋಟ: ಸರ್ ಸಿ ವ್ಹಿ ರಾಮನ್ ಪ್ರೌಢಶಾಲೆ ಹನಗಂಡಿಯಲ್ಲಿ ೨೦೨೦-೨೧ ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯು ಹೊಸ ಪರೀಕ್ಷಾ ಕೇಂದ್ರವಾದ ಸರ್ ಸಿ ವ್ಹಿ ರಾಮನ್ ಪ್ರೌಢ ಶಾಲೆಯಲ್ಲಿ ದಿನಾಂಕ ೧೯/೦೭/೨೦೨೧ ರಂದು ಕೂರ್ ವಿಷಯಗಳಾದ ಗಣಿತ, ವಿಜ್ಞಾನ ಮತ್ತು ಸಮಾಜ-ವಿಜ್ಞಾನ ವಿಷಯಗಳು ಜರುಗಿದವು.

ಹೊಸ ಪರೀಕ್ಷಾ ಕೇಂದ್ರ ವಾಗಿದ್ದರಿಂದ ಮಕ್ಕಳನ್ನು ಸಾಂಕೇತಿಕವಾಗಿ ಹೂ ಗುಚ್ಛ ಮತ್ತು ಮಕ್ಕಳಿಗೆ ಪುಷ್ಪಾರ್ಪಣೆ ಮಾಡುವುದರ ಮೂಲಕ ಪರೀಕ್ಷಾ ಕೇಂದ್ರಕ್ಕೆ ಮಕ್ಕಳನ್ನು ವಿಜೃಂಭಣೆಯಿAದ ಬರಮಾಡಿ ಕೊಳ್ಳಲಾಯಿತು. ಸಂಸ್ಥೆಯ ಅಧ್ಯಕ್ಷರಾದ ದಸ್ತಗಿರಸಾಬ ದಿಗ್ಗೆವಾಡಿ ರವರು ಮತ್ತು ಊರಿನ ಗಣ್ಯರಾದ ಪ್ರಸನ್ನಕುಮಾರ ದೇಸಾಯಿಯವರು ಸಂಸ್ಥೆಯ ಕಾರ್ಯದರ್ಶಿಗಳಾದ ಮಹಮ್ಮದರಪಿಕ ದಿಗ್ಗೆವಾಡಿಯವರು, ಸಂಸ್ಥೆಯ ಸಂಚಾಲಕರಾದ ರಂಜಾನ ದಿಗ್ಗೆವಾಡಿಯವರು ಮತ್ತು ಕೇಂದ್ರದ ಮುಖ್ಯ ಅದಿಕ್ಷಕರಾದ ಮುಳ್ಳುರ ಮೇಡಂ ಹಾಗೂ ಉಪ ಅಧೀಕ್ಷರಾದ ಸವದಿ ಸರ್ ಹಾಗೂ ಆರೋಗ್ಯಇಲಾಖೆ ಕಾರ್ಯಕರ್ತರು, ಪೊಲೀಸ್ ಸಿಬ್ಬಂದಿಯವರು, ಮಠಪತಿಯವರು, ಪರೀಕ್ಷೆ ಕೇಂದ್ರದ ಸಮಸ್ತ ಸಿಬ್ಬಂದಿಗಳು ಮತ್ತು ಮುದ್ದು ವಿದ್ಯಾರ್ಥಿಗಳು ಹಾಜರಿದ್ದರು.

ಪರೀಕ್ಷಾ ಕೇಂದ್ರಕ್ಕೆ ಮಾನ್ಯ ತಹಸೀಲ್ದಾರ್ ಹಾಗೂ ಉಪ ತಹಸೀಲ್ದಾರ್ ¸ ಭೇಟಿನೀಡಿ ಪರೀಕ್ಷಾ ಕೇಂದ್ರದ ವ್ಯವಸ್ಥೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ರಮೇಶ ಇಟಗೋಣಿ
ರಬಕವಿ-ಬನಹಟ್ಟಿ

error: