December 20, 2024

Bhavana Tv

Its Your Channel

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಹಾಗೂ ವೃತ್ತ ಉದ್ಘಾಟನೆ

ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಮುರಡಿ ಹಾಗೂ ಪಾಲಥಿ ಗ್ರಾಮಗಳಲ್ಲಿ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಟ್ರಸ್ಟ್ ಕಮಿಟಿ ಹಾಗೂ ಎಸ್ ಆರ್ ನವಲಿಹಿರೇಮಠ ಅವರ ಧನಸಹಾಯದಿಂದ ನಿರ್ಮಾಣವಾದ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಹಾಗೂ ವೃತ್ತದ ಉದ್ಘಾಟನೆ ಮಾಡಲಾಯಿತು..
ಇದೇ ಸಂದರ್ಭದಲ್ಲಿ ಉದ್ಘಾಟಕರಾಗಿ ಶ್ರೀ ಎಸ್ ಆರ್ ನವಲಿಹಿರೇಮಠ ರವರು ಹಾಗೂ ದಿವ್ಯ ಸಾನಿಧ್ಯ ಶ್ರೀ ಶ್ರೀ ಶ್ರೀ ಬಸವರಾಜ ದೇವರು ವಹಿಸಿದ್ದರು..
ಮುಖ್ಯ ಅತಿಥಿಗಳಾಗಿ ಜನಾಬ ಅಬ್ದುಲ್ ರಜಾಕ್ ತಟಗಾರ, ಎಲ್ ಎಂ ಪಾಟೀಲ್, ಚೇತನ್ ಮುಕ್ಕಣ್ಣವರ, ಸೋಮಶೇಖರ ಸರನಾಡಗೌಡರ, ಅಪ್ಪು ಆಲೂರ, ಮಂಜು ಆಲೂರ, ಎಂ ಎಲ್ ಶಾಂತಗಿರಿ, ಲಕ್ಷ್ಮೀಬಾಯಿ ಮುಕ್ಕಣ್ಣವರ, ಸಂಗಮೇಶ ಚೂರಿ, ಪಂಪನಗೌಡ ಪಾಟೀಲ್, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಸಮಾಜದ ಮುಖಂಡರು ಭಾಗವಹಿಸಿದ್ದರು. ಉಪನ್ಯಾಸಕರಾಗಿ ಖ್ಯಾತ ವಾಗ್ಮಿ ನಿಕೇತ್ ರಾಜ ಆಗಮಿಸಿದ್ದರು.

ವರದಿ ಮಾಂತೇಶ ಕುರಿ

error: