December 21, 2024

Bhavana Tv

Its Your Channel

ಮೊಹರಂ ಹಬ್ಬದ ಅಂಗವಾಗಿ ಕರಡಿ ಗ್ರಾಮದಲ್ಲಿ ಅಲೈ ದೇವರಿಗೆ ಹಿಂದೂ ಮುಸ್ಲಿಮರು ಶ್ರದ್ಧಾಭಕ್ತಿಯಿಂದ ಪೂಜೆ

ಬಾಗಲಕೋಟ: ಹಿಂದೂ ಮುಸ್ಲಿಮರ ಭಾವೈಕ್ಯತೆಯ ಹಬ್ಬ , ಮೊಹರಂ ಹಬ್ಬದ ಅಂಗವಾಗಿ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲ್ಲೂಕಿನ ಕರಡಿ ಗ್ರಾಮದಲ್ಲಿ ಅಲೈ ದೇವರಿಗೆ ಹಿಂದೂ ಮುಸ್ಲಿಮರು ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದರು.

ಬೆಳಿಗ್ಗೆ ೬ಗಂಟೆಗೆ ಅಲೈ ದೇವರ ಸವಾರಿ ಆರಂಭಗೊAಡು ದೇವರು ಪರಸ್ಪರ ಭೇಟಿ ನೀಡುತ್ತಾ ಸುಮಾರು ೧ಗಂಟೆಗಳ ಕಾಲ ಸವಾರಿ ನಡೆಸಿದವು ನಂತರ ಸಾಯಂಕಾಲ ೬ ಗಂಟೆಗೆ ಸಂಜೆ ಸವಾರಿ ಮುಗಿಸಿ ಅಲೈ ದೇವರನ್ನು ಹೊಳೆಗೆ ಕಳುಹಿಸಲಾಯಿತು ಈ ಸಂದರ್ಭದಲ್ಲಿ ಗ್ರಾಮಸ್ಥರು ದೇವರಿಗೆ ಸಕ್ಕರೆ ನೈವೇದ್ಯ ಹಿಡಿಯುವ ಮೂಲಕ ಮೊಹರಂ ಹಬ್ಬವನ್ನು ಸಂಭ್ರಮದಿAದ ಆಚರಿಸಿದರು.

ಮೊಹರಂ ಹಬ್ಬದ ಪ್ರಯುಕ್ತ ವಾಗಿ ಬ್ರಿಲಿಯಂಟ್ ಕೋಚಿಂಗ್ ಸೆಂಟರ್ ಕರಡಿ ಇವರ ವತಿಯಿಂದ ಕಬಡ್ಡಿ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿತ್ತು ಊರಿನ ಗ್ರಾಮಸ್ಥರು ಹಾಗೂ ಪಾಲಕರ ಸಮ್ಮುಖದಲ್ಲಿ ವಿಜೃಂಭಣೆಯಿoದ ಕಬಡ್ಡಿ ಪಂದ್ಯಾವಳಿಯನ್ನು ಏರ್ಪಡಿಸಲಾಗಿದೆ ಎಂದು ಮುಖ್ಯಗುರುಗಳಾದ ಬಸವರಾಜ ಭಜಂತ್ರಿ ಹೇಳಿದರು

error: