December 21, 2024

Bhavana Tv

Its Your Channel

ಕಮಿಷನ್ ಆಸೆಗೆ ಕಳಪೆ ಪೈಪ್ ಆರೋಪ ಮೇಲಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡಲು ಒತ್ತಾಯ

ಜಮಖಂಡಿ: ವ್ಯಕ್ತಿಯೊಬ್ಬರಿಗೆ ಪ್ರತಿದಿನ ೫೫ ಲೀಟರ್ ನೀರಿನ ಅಗತ್ಯವಿದ್ದು ಅದನ್ನು ಮನೆ ಮನೆಗೂ ಪೂರೈಸಲು ರಾಷ್ಟ್ರೀಯ ಮಹತ್ವರ ಯೋಜನೆ ಜಲ ಜೀವನ್ ಮಿಷನ್ ಎಂಬ ವಿನೂತನ ಯೋಜನೆ ಗ್ರಾಮೀಣ ಭಾಗದ ಜನರಿಗೆ ಉಂಟಾಗುತ್ತಿದ್ದ ಕುಡಿಯುವ ನೀರಿನ ಕೊರತೆಯನ್ನು ನೀಗಿಸುವುದು ಜೊತೆಗೆ ಗ್ರಾಮೀಣ ಜನರಿಗೆ ಶುದ್ದ ಕುಡಿಯುವ ನೀರು ಪೂರೈಕೆ ಮಾಡುವ ಅತ್ಯುತ್ತಮ ಯೋಜನೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ ಇದರ ಉಪಯೋಗಕ್ಕಿಂತ ದುರುಪಯೋಗ ಹೆಚ್ಚಾಗುತ್ತಿದೆ ಎಂದು ರೈತ ಮುಖಂಡರು ಆರೋಪಿಸಿದರು.
ಜಮಖಂಡಿ ತಾಲೂಕಿನ ಸಾವಳಗಿ ಪ್ರೆಸ್ ಕ್ಲಬ್ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬೇಸಿಗೆಯಲ್ಲಿ ಯಾರಿಗೂ ನೀರಿನ ಸಮಸ್ಯೆ ಕಾಡದಂತೆ ನಲ್ಲಿಗಳಲ್ಲಿ ನಿತ್ಯ ನೀರು ಹರಿಸುವ ಯೋಜನೆ ಇದಾಗಿದೆ. ಆದರೆ ಹೆಸರಿಗೆ ಎಂಬAತೆ ಸಂಪೂರ್ಣ ಕಳಪೆ ಮಟ್ಟದ ಪೈಪ್ ಅಳವಡಿಸಿ ಹೆಸರಿಗೆ ನೆಪ ಮಾತ್ರ ಕೆಲಸ ಮಾಡುತ್ತಿದ್ದಾರೆ. ಈ ಕುರಿತು ಮೇಲಾಧಿಕಾರಿಗಳ ಗಮನಕ್ಕೆ ತಂದರೂ ಅವರು ಸಹ ಗಪ್ ಚುಪ್ ಇದ್ದಿದ್ದರಿಂದ ಅಧಿಕಾರಿಗಳು ಇದರಲ್ಲಿ ಶಾಮೀಲ ಆಗಿರಬಹುದು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರು ಗಂಭೀರವಾಗಿ ಆರೋಪಿಸಿದರು.
೮೦ ರಿಂದ ೯೦ ಲಕ್ಷದ ಜಲ ಜೀವನ ಮಿಷನ್ ಕಾಮಗಾರಿ ಕಳಪೆ ಮಟ್ಟದ ಪೈಪ್ ಅಳವಡಿಸುತ್ತಿದ್ದಾರೆ ಎಂದು ಪತ್ರಿಕಾಗೋಷ್ಠಿ ನಡೆಸಿದ್ದರು ಇದಕ್ಕೆ ನಿಮ್ಮ ವಿವರಣೆ ಏನು ಸರ್ ಎಂದು ಪತ್ರಕರ್ತರೊಬ್ಬರ ಪ್ರಶ್ನೆಗೆ ಕೆಂಡಾಮoಡಲವಾದ, ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಜಿಲ್ಲಾ ಪಂಚಾಯತ ಸಾವಳಗಿ ವಿಭಾಗೀಯ ಸಹಾಯಕ ಅಭಿಯಂತರರಾದ ಸುರೇಶ ಪಂಚಾಳ ಕಳಪೆ ಮಟ್ಟದ ಕಾಮಗಾರಿ ಎಂದು ನೀವು ಯಾವ ಉದ್ದೇಶದಿಂದ ಹೇಳುತ್ತಿದ್ದಿರಿ. ಕಳಪೆ ಎಂದರೆ ನಿಮಗೆ ಗೋತ್ತೆ..? ವರದಿ ಕೊಟ್ಟವರ ಹೆಸರ ಹೇಳ್ರೀ ನೀವು.. ಎಂದು ಪತ್ರಕರ್ತನನ್ನು ಗದರಿಸಿದರು.

ಪೈಪ್ ಜೋಡಣೆ ಭೂಮಿಯಲ್ಲಿ ಕನಿಷ್ಠ ೩ ಫೀಟು ಆಳದಲ್ಲಿ ಇದ್ದರೆ ಉತ್ತಮ ಅಂದರೆ ಪೈಪ ಲೈನ್ ಭೂಮಿಯಿಂದ ಕೇವಲ ಹನ್ನೇರಡರಿಂದ ಹದಿನೆಂಟು ಇಂಚುಗಳ ಮಾತ್ರ ಆಳದಲ್ಲಿದೆ ಇದರಿಂದ ವಾಹನಗಳು ದನಕರಗಳು, ಎತ್ತಿನ ಗಾಡಿ ಚಕ್ಕಡಿಗಳ ಓಡಾಟದಿಂದ ಪೈಪ ಹಾಳಾಗುವ ಸಾಧ್ಯತೆ ಇದೆ.
ಸಂಬAಧಪಟ್ಟ ಇಲಾಖೆ ಮೇಲಾಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲಿಸಿ ಗುಣಮಟ್ಟದ ಕಾಮಗಾರಿಯನ್ನು ನಿರ್ಮಿಸಲು ಆದೇಶಿಸಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ ಕನ್ನೋಳ್ಳಿ ಮುಖಂಡರಾದ ಅಧ್ಯಕ್ಷ ಚನಗೊಂಡ ಬಿರಾದಾರ, ಉಪಾಧ್ಯಕ್ಷ ಸುಭಾಸ ಸಿಂಧೆ, ಕಾರ್ಯದರ್ಶಿ ಸಿದ್ದಯ್ಯಾ ನಂದಗಾAವಿ, ರಾಜು ಬಿರಾದಾರ, ರುದ್ರಪ್ಪ ಬಿರಾದಾರ ಸೇರಿದಂತೆ ಅನೇಕರು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.

error: