ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಹುನಗುಂದ ಎಸ್.ಆರ್.ಎನ್.ಇ. ಫೌಂಡೇಶನ್ ಹಾಗೂ ಸಂಕಲ್ಪ ಕೋಚಿಂಗ್ ಸೆಂಟರ್, ಧಾರವಾಡ ಇವರ ಸಹಯೋಗದೊಂದಿಗೆ ಕೆಎಎಸ್. ಪಿಎಸ್ಐ, ಪಿಸಿ ನಂತಹ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ಪ್ರವೇಶ ಪರೀಕ್ಷಾ ಉದ್ಘಾಟನಾ ಸಮಾರಂಭವು ಎಸ್.ಆರ್.ಎನ್.ಇ ಫೌಂಡೇಶನ ಸಂಸ್ಥಾಪಕರು ಅಧ್ಯಕ್ಷರಾದ ಎಸ್. -ಆರ್.ನವಲಿ ಹಿರೇಮಠ ಅವರ ಅಧ್ಯಕ್ಷತೆಯಲ್ಲಿ ಜರುಗಿತು.
ನಿವೃತ್ತ ರಾಜ್ಯ ಪೋಲಿಸ್ ಮಹಾ ನಿರ್ದೇಶಕರಾದ ಡಾ.ಶಂಕರ ಬಿದರಿ ಈ ತರಬೇತಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಇಲ್ಲಿ ಅರ್ಜಿಹಾಕಿ ಸೇರಿರುವ ೧೪೫೦ ವಿದ್ಯಾರ್ಥಿಗಳು ಕೇಂದ್ರ &ರಾಜ್ಯ ಸರ್ಕಾರದಲ್ಲಿರುವ ವಿವಿಧ ಹುದ್ದೆಗಳಲ್ಲಿ ಈ ಭಾಗದ ಗಂಡು&ಹೆಣ್ಣು ಎಂಬ ಭೇದಭಾವವಿಲ್ಲದೆ ಎಲ್ಲರು ಈ ಮಹತ್ವದ ಅವಕಾಶವನ್ನು ಪಡೆಯಲೆಂದು ಇಂದು
೧೦೦ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ಜೊತೆಗೆ ಹೆಚ್ಚಿನ ಅಂಕವನ್ನು ಪಡೆದ ೧೫ ವಿದ್ಯಾ ರ್ಥಿಗಳಿಗೆ ಎಲ್ಲ ಖರ್ಚು ವೆಚ್ಚ ಭರಸಿ ತರಬೇತಿ ಕೇಂದ್ರ ತೆರೆದ ನವಲಿ ಹಿರೆಮಠರಿಗೆ ಅಭಿನಂದನೆ ಸಲ್ಲಿಸತ್ತ ಈಸೇವೆಯನ್ನು ಇಲಕಲ್ಲ&ಹುನಗುಂದಕ್ಕೆ ಸೀಮತಗೊಳಿಸದೇ,ಉತ್ತರ ಕರ್ನಾಟಕದ ಎಲ್ಲರಿಗೂ ಉಪಯೋಗವಾಗುವ ಕೆಲಸವಾಗಲೆಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಎಸ್.ಆರ್.ನವಲಿ ಹಿರೇಮಠ ಧಾರವಾಡನಲ್ಲಿ ೨ಎಕರೆ ಜಮೀನನ್ನು ಖರೀದಿಸಿ ಅವಕಾಶ ವಂಚಿತ,ಪ್ರತಿಭಾವAತ ಈ ಉತ್ತರ ಕರ್ನಾಟಕದ ವಿದ್ಯಾರ್ಥಿಗಳಿಗೆ ಉಚಿತ ಸೌಲಭ್ಯ ವ್ಯವಸ್ಥೆ ಮಾಡಿಕೊಡುವುದಾಗಿಮತ್ತು ಬಿದರಿಯವರ ಕುಟುಂಬದ ಕೈಗಳಿಂದಲೇ ಉದ್ಘಾಟಿಸುವುದಾಗಿ ಘೋಷಿಸಿದರು. ಅತಿಥಿಗಳಾಗಿ ಅಬ್ದುಲ್ ರಜಾಕ ತಟಗಾರ& ಸಂಕಲ್ಪ ಕೋಚಿಂಗದ ಮಾರ್ಗದರ್ಶಕರು ತಮ್ಮ ಅನಿಸಿಕೆಗಳನ್ಮು ಹಂಚಿ ಕೊಂಡರು. ಸಮಾರಂಭದಲ್ಲಿ ಪಿಎಸ್ ಐ ಶರಣಬಸಪ್ಪ ಸಂಗಳದ, ಶಾಂತಯ್ಯಮಠ, ಅರ್ಷದನಾಯಿಕ, ಬಿ.ಹೆಸರೂರ,ಎಮ್.ಗಾಣಗೇರ,ಸಿ.ಬಿ ಸಜ್ಜನ,ಮಲ್ಲು ಕಮರಿ,ಇತರೆ ಫೌಂಡೇಶನ್ ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಇದ್ದರು.
ವರದಿ ಮಾಂತೇಶ ಕುರಿ
More Stories
ಹೆಜ್ಜೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ನಿವೃತ್ತ ಶಿಕ್ಷಕರಿಗೆ ಗುರುವಂದನಾ ಸಮಾರಂಭ
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಕೆಎಚ್ ಡಿ ಸಿ ಇಲಕಲ್ ಉಪಕೇಂದ್ರ ಕಮತಗಿ ಯಲ್ಲಿ ನೇಕಾರರಿಂದ ಪ್ರತಿಭಟನೆ
ಮೂರುದಿನಗಳ ಪೌರತ್ವ ತರಬೇತಿ ಶಿಬಿರಕ್ಕೆ ಚಾಲನೆ