December 21, 2024

Bhavana Tv

Its Your Channel

೬ ರಿಂದ ೮ನೇ ತರಗತಿಯ ಭೌತಿಕ ತರಗತಿಯ ಪ್ರಾರಂಭೋತ್ಸವ

ಬಾಗಲಕೋಟೆ ಜಿಲ್ಲೆಯ ಇಲಕಲ್ ನಗರದಲ್ಲಿ ಇಂದು ಸಜ್ಜನ ವಿದ್ಯಾವರ್ಧಕ ಸಂಘ ಇಲಕಲ್ ಹಾಗೂ ಸಜ್ಜನ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆ ಇಲಕಲ್ ೬ ರಿಂದ ೮ನೇ ತರಗತಿಯ ಭೌತಿಕ ತರಗತಿಯ ಪ್ರಾರಂಭೋತ್ಸವ ಜರುಗಿತು.
ಈ ಸಂದರ್ಭದಲ್ಲಿ ಪ್ರಾಥಮಿಕ ವಿಭಾಗದ ಮುಖ್ಯಗುರುಗಳಾದ ಆರ್ ಪಿ ಚನ್ನಗೌಡ್ರ ವಿದ್ಯಾರ್ಥಿಗಳಿಗೆ ಗುಲಾಬಿ ಹೂ ನೀಡುವದರ ಮೂಲಕ ಸ್ವಾಗತವನ್ನು ಕೋರಿದರು ಹಾಗೂ ವಿದ್ಯಾರ್ಥಿಗಳಿಗೆ ಎಸ್.ಒ.ಪಿ ಯ ಬಗ್ಗೆ ಮಾಹಿತಿಯನ್ನು ಪ್ರೌಢ ವಿಭಾಗದ ಮುಖ್ಯೋಪಾಧ್ಯಾಯರಾದ ಎಂ ಎಸ್ ಸಜ್ಜನ್ ಇವರು ತಿಳಿಸಿಕೊಟ್ಟರು ಮತ್ತು ಎಸ್ ಎಸ್ ಅಂಗಡಿ ದೈಹಿಕ ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾಸ್ಕನ್ನು ವಿತರಿಸಿದರು
ಈ ಸಂಕ್ಷಿಪ್ತ ಕಾರ್ಯಕ್ರಮದಲ್ಲಿ ಶಾಲೆಯ ಎಲ್ಲ ಸಿಬ್ಬಂದಿಯವರು ವಿದ್ಯಾರ್ಥಿಗಳನ್ನು ಬರಮಾಡಿಕೊಂಡರು

ವರದಿ ಮಾಂತೇಶ ಕುರಿ

error: