December 21, 2024

Bhavana Tv

Its Your Channel

ಶ್ರೀ ಮಹಾಕೂಟೇಶ್ವರ ಹಿರಿಯ ಪ್ರಾಥಮಿಕ ಶಾಲೆ ನಂದೀಕೆಶ್ವರದಲ್ಲಿ ಸರ್ಕಾರದ ಆದೇಶದಂತೆ ಇಂದಿನಿOದ ಶಾಲೆ ಪ್ರಾರಂಭ

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ನಂದಿಕೇಶ್ವರದ ಶ್ರೀ ಮಹಾಕೂಟೇಶ್ವರ ಹಿರಿಯ ಪ್ರಾಥಮಿಕ ಶಾಲೆ ನಂದೀಕೆಶ್ವರದಲ್ಲಿ ಸರ್ಕಾರದ ಆದೇಶದಂತೆ ಇಂದು ಶಾಲೆ ಪ್ರಾರಂಭವಾಗಿವೆ.
ಈ ಸಂದರ್ಭದಲ್ಲಿ ಮುಖ್ಯರುಗಳಾದ ಜಿ.ಎಸ್ ಹಾದಿಮನಿ ಅವರು ಮಾತನಾಡಿ, ಕರೋನ್ ದಿಂದ ಎರಡು ವರ್ಷ ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಆಟವಾಡಿದ ಕರೋನ ಎಂಬ ಸಾಂಕ್ರಾಮಿಕ ರೋಗ, ಸಾಕಷ್ಟು ವಲಯಗಳನ್ನು ಕಂಗಾಲು ಗೊಳಿಸಿದೆ, ಅತಿಹೆಚ್ಚು ನಷ್ಟವಾದ ಕ್ಷೇತ್ರವೆಂದರೆ ಅದು ಶಿಕ್ಷಣ ಕ್ಷೇತ್ರ ಅದರಲ್ಲೂ ಮಕ್ಕಳ ಜೀವನ, ಈ ಒಂದು ರೋಗ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ, ಜೊತೆಗೆ ಮಕ್ಕಳ ಉತ್ಸಹವನ್ನು ಕುಗ್ಗಿಸಿಬಿಟ್ಟಿದೆ, ಎಂದು ಹೇಳಿದರು.
ಸಹ ಶಿಕ್ಷಕರಾದ ಎಸ್ ಬಿ ಪವಾಡಶೆಟ್ಟಿ ಅವರು ಮಾತನಾಡಿ,ಈಗ ದೇಶದಲ್ಲಿ ಕರೋನ್ ಸಂಖ್ಯೆ ಇಳಿಮುಖವಾಗಿರುವದರಿಂದ, ಸರ್ಕಾರದ ಕೆಲವು ನಿಬಂಧನೆಗಳನ್ನು ಅಳವಡಿಸಿಕೊಂಡು, ಸರ್ಕಾರದ ಮಾರ್ಗದರ್ಶನ ದ ಮೇರೆಗೆ ರಾಜ್ಯದಲ್ಲಿ ೬,೭ ಮತ್ತು ೮ನೇ ತರಗತಿಗಳು ಪ್ರಾರಂಭವಾಗಿದ್ದು, ಅದೇ ರೀತಿ ನಮ್ಮ ಶಾಲೆಯಲ್ಲೂ ಕೂಡ ಇವತ್ತು ೬ & ೭ ನೇ ತರಗತಿಗಳು ಪ್ರಾರಂಭವಾಗಿವೆ, ಈ ಸಮಯದಲ್ಲಿ ಉತ್ಸಹದಿಂದ ಆಗಮಿಸಿದ ಮಕ್ಕಳಿಗೆ ಧೈರ್ಯ ತುಂಬಿ ಗುಲಾಬಿ ಹೂವು ನೀಡಿ, ಅವರನ್ನು ಶಾಲೆಗೆ ಬರಮಾಡಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಸಹ ಶಿಕ್ಷಕರಾದ ಡಿ.ಬಿ ಚಾರೋಡಿ, ಎಸ್ ಎಮ್ ಗೌಡರ್, ವೈ.ಜಿ ನಾಯಕ, ಎಸ್ ಬಿ ಜನಾಲಿ, ಭಾರತಿ ಮೋತಿಮಠ ಪಾಲ್ಗೊಂಡಿದ್ದರು.

ವರದಿ:- ರಾಜೇಶ್. ಎಸ್. ದೇಸಾಯಿ ಬಾದಾಮಿ

error: