December 21, 2024

Bhavana Tv

Its Your Channel

ಸರಳವಾಗಿ ನಡೆದ ಸಾವಳಗಿ ಬಸವೇಶ್ವರ ಜಾತ್ರೆ.

ಸಾವಳಗಿ: ಜಮಖಂಡಿ ತಾಲ್ಲೂಕಿನ ಸುಕ್ಷೇತ್ರ ಸಾವಳಗಿ ಗ್ರಾಮದಲ್ಲಿನ ಆರಾಧ್ಯ ದೈವ ಶ್ರೀ ಬಸವೇಶ್ವರ ಜಾತ್ರೆಯ ಪಲ್ಲಕ್ಕಿ ಮಹೋತ್ಸವ ಮಹಾಮಾರಿ ಕರೋನದಿಂದ ಸಂಪ್ರದಾಯ ಪ್ರಕಾರ ಸರಳ ರೀತಿಯಲ್ಲಿ ನಡೆಯಿತು, ಸತತ ಒಂದು
ತಿಂಗಳವರೆಗೆ ಗ್ರಾಮದಲ್ಲಿನ ಭಕ್ತರು ಉಪವಾಸ ಮಾಡಿ ಜಾತ್ರೆಯನ್ನು ಆಚರಿಸುತ್ತಾರೆ.

ಈದೇವಸ್ಥಾನದ ವಿಶೇಷವೆಂದರೆ ಈ ದೇವಸ್ಥಾನವು ಶತಮಾನವನ್ನು ಪೂರೈಸಿದೆ. ಬಸವೇಶ್ವರನ ದೇವಸ್ಥಾನಕ್ಕೆ ಅದರದೆಯಾದ ಇತಿಹಾಸ ಇದೆ, ಈ ದೇವಸ್ಥಾನ ಆಗಲು ಸಾವಳಗಿಯ ಸಂಗಮೇಶ್ವರ ಮಹಾರಾಜರು ಕಾರಣಿಭೂತರು ಅಂತಾ ಹಿರಿಯರು ಹೇಳುತ್ತಾರೆ ದೇವಸ್ಥಾನವು ಸಾವಳಗಿ ಸಂಗಮೇಶ್ವರ ಮಹಾರಾಜರ ಸಂಪ್ರದಾಯದAತೆ ಜಾತ್ರೆ ನಡೆಯುತ್ತದೆ, ದೇವಸ್ಥಾನ ನಿರ್ಮಿಸಲು ಒಂದು ಕಾರಣ ಇದೆ ಸಂಗಮೇಶ್ವರ ಮಹಾರಾಜರು ಸಾವಳಗಿಗೆ ಬಂದಾಗ ಇಲ್ಲಿನ ದಲಿತ ಕಾಲೂನಿಗೆ ಬಂದು ಭೇಟಿ ನೀಡಿ ಹೂಗುತ್ತಿದ್ದರು ಹೀಗೆ ಅವರು ಭೇಟಿ
ನೀಡಿದ ಸಂಧರ್ಭದಲ್ಲಿ ಆಕಳು ಒಂದು ಮೃತ್ತಪಟ್ಟಿತ್ತು ಆ ಆಕಳನ್ನು ಅಲ್ಲಿಯೇ ಸಮಾಧಿ ಮಾಡಿ ದೇವಸ್ಥಾನ ನಿರ್ಮಿಸಿದ್ದಾರೆ.

ಪಲ್ಲಕ್ಕಿ ಉತ್ಸವ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಂಗಮೇಶ್ವರ ಮಠಕ್ಕೆ ಹೋಗಿ ಮರಳಿ ಪಲ್ಲಕ್ಕಿ ಉತ್ಸವದೊಂದಿಗೆ ದೇವಸ್ಥಾನಕ್ಕೆ ಬಂದು ಪುಷ್ಪಾರ್ಚನೆ ಮಾಡಿ ಪ್ರಸಾದ ಸವಿದು ತಮ್ಮ ಭಕ್ತಿಯ ಸೇವೆ ಸಲ್ಲಿಸುತ್ತಾರೆ.

ಆದರೆ ಮಹಾಮಾರಿ ಕರೋನದಿಂದ ಜಾತ್ರೆಯು ಸರಳ ರೀತಿಯಲ್ಲಿ ನಡೆದಿದ್ದು ಭಕ್ತರಿಗೆ ನಿರಾಸೆ ಮೂಡಿದೆ.

ವರದಿ ಕಿರಣ ಸೂರಗೂಂಡ ಸಾವಳಗಿ

error: