ಸಾವಳಗಿ: ವಯಸ್ಸು ೨೬ ಮದುವೆಯಾಗಿ ಎರಡು ವರ್ಷ ಪೂರೈಸಿಲ್ಲ ಮನೆಗೆ ಒಬ್ಬನೆ ಮಗ ಮನೆಯ ಜವಾಬ್ದಾರಿ ಅವನ ಹೆಗಲ ಮೇಲೆ ಹೊಟ್ಟೆ ನೋವು ಎಂದು ಆಸ್ಪತ್ರೆಗೆ ಹೋದರೆ ಮನೆಯವರೆಲ್ಲರೂ ಬೆಚ್ಚಿ ಬೀಳುವಂತಾಗಿದೆ.
ಹೌದು ಇದು ಜಮಖಂಡಿ ತಾಲ್ಲೂಕಿನ ಸಾವಳಗಿ ಗ್ರಾಮದ ಯುವಕ ಗಣೇಶ ತಳವಾರ ಇವನ ಕಥೆ ಚಿಕ್ಕ ವಯಸ್ಸಿನಿಂದ ಇವನ ಎರಡು ಕಿಡ್ನಿಗಳು ಸಾಮಾನ್ಯ ಜನರಿಗಿಂತಾ ಚಿಕ್ಕದಾಗಿರುವುದು ಕಂಡು ಬಂದಿದೆ.
ಈ ವಿಷಯ ಅವನ ಹೆತ್ತ ತಂದೆ ತಾಯಿಗೂ ಗೊತ್ತಿಲ್ಲ, ಕಾಲಕ್ರಮೇಣ ಇವನು ಬೆಳೆಯುತ್ತಿದ್ದಂತೆ ಒಂದು ಕಿಡ್ನಿ ಸಂಪೂರ್ಣ ಹಾಳಾಗಿದೆ ಇದರ ಬಗ್ಗೆ ಅವನಿಗೂ ಅರಿವಿಲ್ಲ ಇನ್ನು ಒಂದು ಕಿಡ್ನಿಯಾದರು ಸರಿಪಡಿಸಬೇಕು ಎಂದರೆ ಗಾತ್ರದಲ್ಲಿ ಅದು ಚಿಕ್ಕದಾಗಿದ್ದು ಮುಂದಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಹೋಗಬೇಕು ಎಂದು ವಿಜಯಪುರದ ಖಾಸಗಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಮಾಡುವ ಸಲುವಾಗಿ ೨೫ ರಿಂದ೩೦ ಲಕ್ಷ ರೂಪಾಯಿಗಳು ವೆಚ್ಚವಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ ಇದನ್ನು ಕೇಳಿದ ಕುಟುಂಬಕ್ಕೆ ದಿಕ್ಕೆ ತೊಚದಂತಾಗಿದೆ.
ಇತ್ತ ಆತನ ಸ್ನೇಹಿತರು ಸ್ನೇಹಿತನ ಜೀವ ಉಳಿಸಲು ಸ್ಥಳೀಯ ಅಂಗಡಿ ವ್ಯಾಪಾರಸ್ಥರಿಂದ ಹಾಗೂ ರಾಜಕೀಯ ನಾಯಕರುಗಳಿಂದ ಹಣವನ್ನು ಸಂಗ್ರಹಿಸಿ ಸ್ನೇಹಿತನ ಜೀವ ಉಳಿಸಲು ಹರ ಸಾಹಸ ಪಡುತ್ತಿದ್ದಾರೆ.
ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಯುವಕನಿಗೆ ಸಹಾಯ ಹಸ್ತ ನೀಡುವ ದಾನಿಗಳು ಫೋನ್ ಫೇ ೬೩೬೨೭೪೬೩೬೩
ಬ್ಯಾಂಕ ಖಾತೆ ಸಂಖ್ಯೆ :-೦೮೨೧೨೬೧೦೦೦೭೫೯೦ ಸಾವಳಗಿ ಶಾಖೆ
ಐಎಫ್ಎಸ್ಸಿ ಕೋಡ್:ಸಿಎನಆರಬಿ೦೦೧೦೮೨೧
ತಮ್ಮ ಕೈಲಾದ ಸಹಾಯವನ್ನು ಮಾಡಿ ಯುವಕನ ಜೀವ ಉಳಿಸಿ ಎಂದು ನಮ್ಮ ವಿನಂತಿ.
ವರದಿ ಕಿರಣ ಸೂರಗೂಂಡ ಸಾವಳಗಿ
More Stories
ಹೆಜ್ಜೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ನಿವೃತ್ತ ಶಿಕ್ಷಕರಿಗೆ ಗುರುವಂದನಾ ಸಮಾರಂಭ
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಕೆಎಚ್ ಡಿ ಸಿ ಇಲಕಲ್ ಉಪಕೇಂದ್ರ ಕಮತಗಿ ಯಲ್ಲಿ ನೇಕಾರರಿಂದ ಪ್ರತಿಭಟನೆ
ಮೂರುದಿನಗಳ ಪೌರತ್ವ ತರಬೇತಿ ಶಿಬಿರಕ್ಕೆ ಚಾಲನೆ