ಬಾಗಲಕೋಟೆ ಜಿಲ್ಲೆಯ ಹುನಗುಂದ ನಗರದಲ್ಲಿ ಸೋಮವಾರ ಕರ್ನಾಟಕ ರಕ್ಷಣಾ ವೇದಿಕೆ ಹುನಗುಂದ ನಗರ ಘಟಕದ ವತಿಯಿಂದ ಹುನಗುಂದ ನಗರದ ಪುರಸಭೆ ವ್ಯಾಪ್ತಿಯಲ್ಲಿ ಬರುವ ಕೆಲಸ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿದೆ ಎಂದು, ತಾಲೂಕ ದಂಡಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಹುನಗುಂದ ನಗರ ಘಟಕದ ಅಧ್ಯಕ್ಷರಾದ ಶರಣಪ್ಪ ಗಾಣಿಗೇರ ಅವರು ಮಾತನಾಡಿ ನಾಗಲಿಂಗ ನಗರದಲ್ಲಿ ಮಹಿಳಾ ಶೌಚಾಲಯಗಳು ಹದಗೆಟ್ಟಿವೆ ಹಾಗೂ ನೀರಿನ ವ್ಯವಸ್ಥೆ ಇಲ್ಲ , ಮಹಾಂತೇಶ ವೃತ್ತದಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲ, ಸಾರ್ವಜನಿಕ ಶೌಚಾಲಯಗಳು ಇಲ್ಲ , ಇದ್ದರು ಕೂಡ ವ್ಯವಸ್ಥಿತವಾಗಿಲ್ಲ ಹಾಗೂ ಚರಂಡಿ ಸ್ವಚ್ಛತೆ ಇಲ್ಲ ಹಿರೇ ಹಳ್ಳ ಬ್ರಿಡ್ಜ್ ನಿಂದ ಕೋರ್ಟ್ ವರೆಗೆ ರಸ್ತೆಗಳು ಹಾಳಾಗಿದ್ದು, ಈ ಬಗ್ಗೆ ಸಂಬAಧಪಟ್ಟ ಪುರಸಭೆ ಅಧಿಕಾರಿಗಳಿಗೆ ಮನವಿ ಕೊಟ್ಟರು ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದು, ಆದ್ದರಿಂದ ಮಾನ್ಯ ತಹಶೀಲ್ದಾರ್ ಅವರು ಈ ಎಲ್ಲ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲು ಆದೇಶಿಸಬೇಕೆಂದು ಮನವಿ ನೀಡಿದರು,
ಈ ಸಂದರ್ಭದಲ್ಲಿ ಕರವೇ ಕಾರ್ಯಕರ್ತರಾದ ಶರಣು ಕುರಿ ಅಧ್ಯಕ್ಷರು ತಾಲೂಕ ಸಾಮಾಜಿಕ ಜಾಲತಾಣ ಹುನಗುಂದ, ಹುಸೇನ್ ಸಂದಿಮನಿ ಪ್ರದಾನ ಕಾರ್ಯದರ್ಶಿ ನಗರ ಘಟಕ , ಖತೀಬ್ ಮುಲ್ಲಾ ಸಂಚಾಲಕರು, ತಮ್ಮಣ್ಣ ಸೂಡಿ, ಜಾಹೀರ ಸಂಗಮಕರ್, ನಜೀರ್ ಪಟಾನ್ , ಹುಸೇನ್ ನದಾಫ್ , ಮಹಮದ್ ನದಾಫ್, ಮಹಾಂತೇಶ ಅಮರಾವತಿ ಇತರರು ಪಾಲ್ಗೊಂಡಿದ್ದರು.
ವರದಿ ; ಮಹಾಂತೇಶ ಕುರಿ, ಬಾಗಲಕೋಟೆ.
More Stories
ಹೆಜ್ಜೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ನಿವೃತ್ತ ಶಿಕ್ಷಕರಿಗೆ ಗುರುವಂದನಾ ಸಮಾರಂಭ
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಕೆಎಚ್ ಡಿ ಸಿ ಇಲಕಲ್ ಉಪಕೇಂದ್ರ ಕಮತಗಿ ಯಲ್ಲಿ ನೇಕಾರರಿಂದ ಪ್ರತಿಭಟನೆ
ಮೂರುದಿನಗಳ ಪೌರತ್ವ ತರಬೇತಿ ಶಿಬಿರಕ್ಕೆ ಚಾಲನೆ