December 21, 2024

Bhavana Tv

Its Your Channel

ಬಾದಾಮಿ ತಾಲೂಕಿನ ಚೊಳಚಗುಡ್ಡ ಗ್ರಾಮದ ಪ್ಲಾಟ್ ನವನಗರ ಗಲ್ಲಿಯ ಗೆಳೆಯರ ಬಳಗದ ವತಿಯಿಂದ ಗಣೇಶ ವಿಸರ್ಜನೆ ಕಾರ್ಯಕ್ರಮ.

ಬಾಗಲಕೋಟೆ :ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಚೊಳಚಗುಡ್ಡ ಗ್ರಾಮದ ಪ್ಲಾಟ್ ನವನಗರ ದ ಗೆಳೆಯರ ಬಳಗದ ವತಿಯಿಂದ ಗಣೇಶನ ಪ್ರತಿಷ್ಠಾಪನೆ ಮಾಡಿದ್ದು. ಮೊದಲು ೫ ದಿನಗಳ ಪರವಾನಿಗೆ ಇತ್ತು ,ನಂತರ ೭ ದಿನಗಳ ಪ್ರತಿಷ್ಠಾಪನೆಗೆ ಪರವಾನಿಗೆ ಬಂದ ನಂತರ ಗೆಳೆಯರ ಬಳಗದವರಿಗೆ ಎಲ್ಲಿಲ್ಲದ ಸಂತೋಷವಾಯಿತು. ಗಣೇಶ ವಿಸರ್ಜನೆ ಪ್ರಯುಕ್ತ ಅನ್ನ ಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಇಲ್ಲಿನ ಸರ್ವ ಧರ್ಮೀಯರು ಜೊತೆಗೂಡಿ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಲ್ಲರಿಗೂ ಊಟ ಮಾಡಿಸಲು ಉತ್ಸಾಹದಿಂದ ಭಾಗವಹಿಸಿದ್ದು ಭಾರತ ವಿವಿಧತೆಯಲ್ಲಿ ಏಕತೆ ಅನ್ನೋದನ್ನ ಈ ಗ್ರಾಮದ ಯುವ ಗೆಳೆಯರ ಬಳಗದಲ್ಲಿ ಇರುವುದೇ ವಿಶೇಷವಾದುದು ಎನ್ನಬಹುದು.ಇಂದು ಸಂಜೆ ಗಣೇಶನ ಪೂಜಾ ಕಾರ್ಯಕ್ರಮ ಹಾಗೂ ಪೂಜಾ ಪರಿಕರಗಳನ್ನು ಸವಾಲು ಮಾಡುವುದರ ಮುಖಾಂತರ ಗಣೇಶನ ವಿಸರ್ಜನೆಯನ್ನು ಗೆಳೆಯರ ಬಳಗ ಮಾಡುತ್ತದೆ.

ವರದಿ:- ರಾಜೇಶ್.ಎಸ್.ದೇಸಾಯಿ ಬಾದಾಮಿ

error: