December 21, 2024

Bhavana Tv

Its Your Channel

ರಸ್ತೆ ಅಗಲಿಕರಣ ಮತ್ತು ಅಭಿವೃದ್ಧಿ ಕಾಮಗಾರಿಯನ್ನು ಉದ್ಘಾಟಿಸಿದ ಸಚಿವ ಗೋವಿಂದ ಕಾರಜೋಳ

ಬಾಗಲಕೋಟ: ಹುನಗುಂದ ತಾಲೂಕಿನ ಬಾಚಿ ರಾ. ಹೇ. ೨೦ರ ೧೪೫ ಕಿ. ಮಿ. ರಿಂದ ೧೫೬ ಕಿ. ಮಿ ವರೆಗೆ ರಸ್ತೆ ಅಗಲಿಕರಣ ಮತ್ತು ಅಭಿವೃದ್ಧಿ ಕಾಮಗಾರಿಯ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಸರ್ಕಾರದ ಬೃಹತ್ ಹಾಗೂ ಮಧ್ಯಮ ನೀರಾವರಿ ಸಚಿವರಾದ ಗೋವಿಂದ ಕಾರಜೋಳ ಅವರು ನೇರವೆರಿಸಿದರು.
ಈ ಕಾಮಗಾರಿ ಉದ್ಘಾಟನೆಯ ಅಧ್ಯಕ್ಷತೆಯನ್ನು ಹಾಗೂ ನಮ್ಮ ಹುನಗುಂದ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ದೊಡ್ಡನಗೌಡ ಜಿ ಪಾಟೀಲ ಅವರು ವಹಿಸಿದರು.
ಈ ಸಂದರ್ಭದಲ್ಲಿ ಬಾಗಲಕೋಟೆ ಲೋಕಸಭೆ ಕ್ಷೇತ್ರದ ಜನಪ್ರಿಯ ಸಂಸದರಾದ ಸನ್ಮಾನ್ಯ ಪಿ ಸಿ ಗದ್ದಿಗೌಡರ ರವರು ಹುನಗುಂದ ತಾಲೂಕಿನ ಹಿರಿಯ ಮುಖಂಡರು ಪುರಸಭೆ ಸದಸ್ಯರು ಪೌರಾಯುಕ್ತರು ತಾಲೂಕ ಆಡಳಿತ ಮಂಡಳಿ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಮತ್ತಿತರರು ಉಪಸ್ಥಿತರಿದರು…

ವರದಿ ಮಾಂತೇಶ ಕುರಿ

error: