December 21, 2024

Bhavana Tv

Its Your Channel

ಮನನೊಂದು ಮಲಪ್ರಭಾ ನದಿಗೆ ಹಾರಿದ ಮಹಿಳೆ ಜೀವಂತ ಪತ್ತೆ, ಮೂರು ವರ್ಷದ ಮಗು ಸಾವನ್ನಪ್ಪಿರುವ ಶಂಕೆ

ರೋಣ : ಮನನೊoದು ಮಲಪ್ರಭಾ ನದಿಗೆ ಹಾರಿದ ಮಹಿಳೆ ಜೀವಂತ ಪತ್ತೆ, ಮೂರು ವರ್ಷದ ಮಗು ಸಾವನ್ನಪ್ಪಿರುವ ಶಂಕೆ. ಮಹಿಳೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು

ಹೊಳೆಆಲೂರ(ರೋಣ): ಮನನೊಂದು ತನ್ನ ಮೂರು ವರ್ಷದ ಮಗುವಿನೊಂದಿಗೆ ಮಲಪ್ರಭಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ರೋಣ ತಾಲ್ಲೂಕಿನ ಹೊಳೆಆಲೂರ ಗ್ರಾಮದ ಮಹಿಳೆ ನದಿಯಲ್ಲಿರುವ ಮಳ್ಳಿನ ಕಂಟಿಯಲ್ಲಿ ಜೀವಂತ ಪತ್ತೆಯಾಗಿದ್ದಾಳೆ. ಆದರೆ ಮಗು ಸಾವನ್ನಪ್ಪಿರುವ ಶಂಕೆಯಿದ್ದು ತೀವ್ರ ಶೋಧ ಕಾರ್ಯಾಚರಣೆ ನಡೆದಿದೆ. ಆದರೆ ಇನ್ನೂ ಪತ್ತೆಯಾಗಿಲ್ಲ.
ಹೊಳೆಆಲೂರ ಗ್ರಾಮದ ಉಮಾದೇವಿ ಸಂಗಮೇಶ ಶೆಲ್ಲಿಕೇರಿ(೫೦) ಎಂಬ ಮಹಿಳೆಗೆ ನಾಲ್ಕು ಜನ ಹೆಣ್ಣುಮಕ್ಕಳು ಇದ್ದು ಒಬ್ಬಳು ಧಾರವಾಡದಲ್ಲಿ ಪಿಯುಸಿ ಕಲಿಯುತ್ತಿದ್ದಾಳೆ. ಊರಿಗೆ ಹೋಗೋಣ ಎಂದು ಬುಧವಾರ ನಸುಕಿನ ಜಾವ ಮನೆಯಲ್ಲಿದ್ದ ಮೂವರು ಹೆಣ್ಣು ಮಕ್ಕಳೊಂದಿಗೆ ಬಾದಮಿ ರಸ್ತೆ ಮಾರ್ಗದಲ್ಲಿ ಹರಿಯುವ ಮಲಪ್ರಭಾ ನದಿಯ ಸೇತುವೆಗೆ ಬಂದಿದ್ದಾಳೆ. ಆರಂಭದಲ್ಲಿ ೩ ವರ್ಷದ ಶ್ರೇಯಾ ಎನ್ನುವ ಮಗುವನ್ನು ನೀರಿಗೆ ಎಸದಿದ್ದಾಳೆ ಇದನ್ನು ಕಂಡು ಉಳಿದ ಇಬ್ಬರು ಹೆಣ್ಣು ಮಕ್ಕಳು ತಾಯಿಯ ಕೈ ಕಚ್ಚಿ, ಕೊಸರಿಕೊಂಡು ಅರಚುತ್ತಾ ಓಡಿ ಹೋಗಿದ್ದಾರೆ. ನಂತರ ಮಹಿಳೆ ಸೇತುವೆ ಬಳಿ ತನ್ನ ಸೀರೆ ಬಿಟ್ಟು ನದಿಗೆ ಹಾರಿದ್ದಾಳೆ ಎಂದು ತಾಯಿಯಿಂದ ತಪ್ಪಿಸಿಕೊಂಡು ಬಂದ ಮಕ್ಕಳು ಮಾಹಿತಿ ನೀಡಿದರು.
ಹರಿಯುವ ನೀರಿಗೆ ತೇಲುತ್ತಾ ಹೋದ ಮಹಿಳೆಯು ಸೇತುವೆಯಿಂದ ೨.೫ಕಿಮೀ ದೂರದಲ್ಲಿ ಮುಳ್ಳಿನ ಕಂಟಿಯ ಗಿಡದಲ್ಲಿ ಸಿಕ್ಕಿಕೊಂಡಿದ್ದಳು. ಮುಖ ಮಾತ್ರ ಕಾಣುತಿತ್ತು ಉಳಿದಂತೆ ದೇಹ ನೀರಿನಲ್ಲಿ ಮುಳಿಗಿತ್ತು ಆದರೆ ಗದಗ-ರೋಣ ಅಗ್ನಿಶಾಮಕ ದಳದ ಸಿಬ್ಬಂದಿಗಳು ಒಬಿಎಂ ಬೋಟಿನಲ್ಲಿ ಹೋದಾಗ ಮಹಿಳೆ ಜೀವಂತ ಇರುವುದು ಪತ್ತೆಯಾಗಿದೆ. ನಂತರ ಮಹಿಳೆಯನ್ನು ರಕ್ಷಣೆ ಮಾಡಿ ರೋಣ ತಾಲ್ಲೂಕಾ ಆಸ್ಪತ್ರೆಗೆ ಕಳುಹಿಸಲಾಗಿದೆ. ಮಹಿಳೆಯು ಆರೋಗ್ಯವಾಗಿದ್ದಾಳೆ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ನವೀನಕುಮಾರ ಎಸ್. ಕಗ್ಗಲಗೌಡ್ರ ಮಾಹಿತಿ ನೀಡಿದರು. ಮಧ್ಯಾಹ್ನದ ವರೆಗೂ ಮಗುವಿನ ಶೋಧಕಾರ್ಯ ನಡೆಸಿದರೂ ಯಾವುದೇ ಸುಳಿವು ಸಿಕ್ಕಿಲ್ಲ. ಮಗು ಸಾವನ್ನಪ್ಪಿರುವ ಶಂಕೆ ಇದೆ ಆದರೂ ಕತ್ತಲಾಗುವವರೆಗೆ ಶೋಧ ಕಾರ್ಯ ನಡೆಯುತ್ತದೆ ಎಂದು ನವೀನಕುಮಾರ ಎಸ್. ಕಗ್ಗಲಗೌಡ್ರ ಹೇಳಿದರು.
ಸ್ಥಳದಲ್ಲಿ ರೋಣ ತಾಲ್ಲೂಕಾ ಅಗ್ನಿಶಾಮಕ ಠಾಣಾಧಿಕಾರಿ ಮಂಜುನಾಥ ಮೇಲ್ಮನಿ , ರೋಣ ಪೊಲೀಸ್ ಠಾಣೆಯ ಪಿ.ಎಸ್.ಐ ವಿನೋದ ಪೂಜಾರಿ ಹಾಗೂ ತಂಡದವರು ಬೀಡು ಬಿಟ್ಟಿದ್ದಾರೆ.
ಮಹಿಳೆಯ ಗಂಡ ಅನುದಾನಿತ ಶಾಲೆಯೊಂದರಲ್ಲಿ ಶಿಕ್ಷಕನಾಗಿ ಸೇವೆ ಸಲ್ಲಿಸುತ್ತಿದ್ದ ಆದರೆ ೬ ತಿಂಗಳ ಹಿಂದೆ ಕೋವಿಡ್‌ಗೆ ಬಲಿಯಾಗಿದ್ದನು. ಈಚೆಗೆ ಮನೆ ಕಟ್ಟಿಸುವ ಕಾರ್ಯದಲ್ಲಿ ಮಹಿಳೆ ಮುಂದಾಗಿದ್ದಳು. ಆದರೆ ಅನುದಾನಿತ ಶಾಲೆಗೆ ಗಂಡನ ನೌಕರಿಗಾಗಿ ಸಾಲ ಮಾಡಿ ನೀಡಿದ ಹಣ, ಮನೆ ಕಟ್ಟಿಸುವ ಸಲುವಾಗಿ ಮಾಡಿದ ಸಾಲ, ಮಕ್ಕಳ ವಿದ್ಯಾಭ್ಯಾಸದ ಸಾಲ ಹಾಗೂ ಇತರೆ ಸಾಲಗಳಿಂದ ಮನನೊಂದು ಆತ್ಮಹತ್ಯೆ ನಿರ್ಧಾರವನ್ನು ಕೈಗೊಂಡಿರಬಹುದು ಎಂದು ಗ್ರಾಮಸ್ಥರು ಮಾತನಾಡುತ್ತಿದ್ದರು.

ವರದಿ ವೀರಣ್ಣ ಸಂಗಳದ ರೋಣ

error: