December 21, 2024

Bhavana Tv

Its Your Channel

ಮೂಲಪೀಠ ಚಿತ್ತರಗಿ ನವೀಕೃತ ಮಠದ ಮೇಲೆ ಹೆಲಿಕಾಪ್ಟರನಿಂದ ಪುಷ್ಪವೃಷ್ಠಿ

ಬಾಗಲಕೋಟೆ :-ಹುನಗುಂದ ತಾಲೂಕಿನ ಚಿತ್ತರಗಿ ಗ್ರಾಮದ ಮೂಲಪೀಠ ಚಿತ್ತರಗಿ ನವೀಕೃತ ಮಠದ ಮೇಲೆ ಹೆಲಿಕಾಪ್ಟರನಿಂದ ಪುಷ್ಪವೃಷ್ಠಿ ಗೈಯುವ ಸಮಾರಂಭವು ಬೃಹನ್ಮಠ ಚಿತ್ರದುರ್ಗದ ಪೂಜ್ಯ ಜಗದ್ಗುರುಗಳಾದ ಶ್ರೀ ಶಿವಮೂರ್ತಿ ಮುರುಘರಾಜೇಂದ್ರ ಮಹಾಶರಣರು ಲಿಂಗ ಹಸ್ತದಿಂದ ನೆರವೇರಿತು.
ನಂತರ ನವಿಕೃ ಮೂಲ ಮಠಕ್ಕೆ ಆಗಮಿಸಿದ ಮಹಾಶರಣರೊಂದಿಗೆ ಆಗಮಿಸಿದ ಎಲ್ಲ ಸ್ವಾಮಿಗಳಿಗೆ ಮಠದಲ್ಲಿ ನೆರದಿದ್ದ ಸಮಸ್ತ ಸದ್ಭಕ್ತರಿಂದ ಪುಷ್ಪಾರ್ಚನೆಯ ಮೂಲಕ ಬರಮಾಡಿಕೊಂಡರು.
ಈ ನವೀಕೃತ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಕ್ಷೇತ್ರದ ಶಾಸಕ ದೊಡ್ಡನಗೌಡ ಜಿ.ಪಾಟೀಲ ಎಲ್ಲ ಶ್ರೀಗಳಿಗೆ ಸ್ವಾಗತಿಸಿ ತಮ್ಮ ಆಶಯ ಭಾಷಣ ನೆರವೇರಿಸಿದರು.

ಕಾರ್ಯಕ್ರಮದ ನೇತೃವನ್ನು ವಹಿಸಿಕೊಂಡ ಚಿತ್ತರಗಿ ಮತ್ತುಇಲಕಲ್ಲ ಅವಳಿ ಸಂಸ್ಥಾನ ಮಠದ ಮ.ನಿ.ಪ್ರ ಗುರುಮಹಾಂತ ಸ್ವಾಮಿಗಳು ಮಠವು ಬೆಳೆದ ಬಂದ ಹಾದಿ ಮತ್ತು ಈ ಹಿಂದಿನ ಶ್ರೀಗಳಾದ ಶ್ರೀ ವಿಜಯಮಹಾಂತ ಸ್ವಾಮಿ ಗಳ ಅಳಿಲು ಸೇವೆ,ಶ್ರಮದ ಬಗ್ಗೆ ಮಾಹಿತಿ ನೀಡಿದರು.ದಿವ್ಯ ಸಾನಿಧ್ಯ ವಹಿಸಿಕೊಂಡ ಚಿತ್ರದುರ್ಗದ ಶ್ರೀಗಳು ನೆರದಿದ್ದ ಸಮಸ್ಥ ಸದ್ಭಕ್ತರು ತೋರಿದ ಪ್ರೀತಿ,ವಾತ್ಸಲ್ಯದ ಗೌರವ ಆದ ರವನ್ನು ಸ್ಮರಿಸುತ್ತ ಆಶಿರ್ವಚನ ಮಾಡಿದರು.
ಕಾರ್ಯಕ್ರಮದಲ್ಲಿ ಹರಿಹರ ತಾಲೂಕಿನ ಯರೆಹೊಸಳ್ಳಿಯ ವೇಮನರಡ್ಡಿ ಗುರುಪೀಠದ ವೇಮಾನಂದ ಮಹಾಸ್ವಾಮಿಗಳು ತಿಪಟೂರಿನ ರುದ್ರಮುನಿ ಶಿವಚಾರ್ಯ ಸ್ವಾಮಿಗಳು ವಿಜಯಪುರ ಮತ್ತು ಯೋಗವನ ಚಿತ್ರದುರ್ಗ ಜಗದ್ಗುರು ಪೀಠದ ಬಸವಕುಮಾರಸ್ವಾಮಿಗಳು,ಶಿವಯೋಗ ಆಶ್ರಮಮಮ್ಮಿಗಟ್ಟಿ ಧಾರವಾಡದ ಬಸವಾನಂದಸ್ವಾಮಿಗಳು,ಶಿವಕುಮಾರ ಗಂಗಾಧರ ಶಾಸ್ತ್ರಿಗಳು ಹಿರೇಮಠ,ಕುಮಾರ ಮುಪ್ಪಯ್ಯ ಹಿರೇಮಠ,ಊರಿನ ಹಿರಿಯರಾದ ಎಸ್.ಎನ್.ನಿಂಗನU ಡ್ರ,ಬಿ.ಆರ್.ಬೇವೂರ,ಇತರೆ ಊರಿನ ಗುರು ಹಿರಿಯರು, ಸಮಸ್ತ ಸದ್ಭಕ್ತರು ಇದ್ದರು.

ವರದಿ: ಮಹಾಂತೇಶ ಕುರಿ

error: