December 21, 2024

Bhavana Tv

Its Your Channel

ನಂದವಾಡಗಿ ಗ್ರಾಮದಲ್ಲಿ ಗುರುವಂದನಾ ಕಾರ್ಯಕ್ರಮ ಹಾಗೂ ಪಟ್ಟಾಧಿಕಾರ ಮಹೋತ್ಸವದ ಪೂವ೯ಭಾವಿ ಸಭೆ.

ಬಾಗಲಕೋಟೆ: ಶ್ರೀ ಮಹಾಂತೇಶ್ವರ ಸಂಸ್ಥಾನ ಬೃಹನ್ಮಠ ನಂದವಾಡಗಿ-ಆಳAದ-ಜಾಲವಾದಿ ನಂದವಾಡಗಿ ಗ್ರಾಮದ ಮಠದಲ್ಲಿ ಪೂಜ್ಯ ಶ್ರೀ ತಪೋನಿಧಿ ಷ.ಬ್ರ.ಮಹಾಂತಲಿAಗ ಶಿವಾಚಾರ್ಯರರ ಗುರುಂವದನಾ ಕಾರ್ಯಕ್ರಮ ಹಾಗೂ ಡಾ.ಚನ್ನಬಸವದೇವರ ಗುರು ಪಟ್ಟಾಧಿಕಾರ ಮಹೋತ್ಸವದ ಪ್ರಥಮ ಪೂರ್ವಭಾವಿ ಸಭೆ ನಡೆಯಿತು.

ಈ ಪೂರ್ವಭಾವಿ ಸಭೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಹುನಗುಂದ ಮತಕ್ಷೇತ್ರದ ಶಾಸಕರಾದ ದೊಡ್ಡನಗೌಡ ಜಿ ಪಾಟೀಲ್ ಮಾತನಾಡಿ ನಂದವಾಡಗಿ ಶ್ರೀ ಮಠ ನಾಡಿನಲ್ಲಿಯೇ ಅನೇಕ ಭಕ್ತರನ್ನು ಹೊಂದಿದ ಮಠ.ಹಿಗಾಗಿ ನಾವೆಲ್ಲರೂ ಶ್ರೀ ಮಠದ ಭಕ್ತರು. ಮಠದಲ್ಲಿ ನಡೆಯುವ ಗುರವಂದಾನಾ ಕಾರ್ಯಕ್ರಮದ ಹಾಗೂ ಪಟ್ಟಾಧಿಕಾರ ಕಾರ್ಯಕ್ರಮದ ಪೂರ್ವಭಾವಿ ಸಭೆ ಯಶಸ್ವಿಯಾಗಲಿ ಎಂದು ಹೇಳಿದರು.

ವರದಿ: ಮಹಾಂತೇಶ ಕುರಿ

error: