December 21, 2024

Bhavana Tv

Its Your Channel

ಸಂಗಮನಾಥನ ದೇವಸ್ಥಾನಕ್ಕೆ ಬಂದ ಮಹಿಳೆ ನೀರುಪಾಲು

ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ದೇವಸ್ಥಾನಕ್ಕೆ ಎಂದು ಬಂದು ನದಿಯಲ್ಲಿ ಸ್ನಾನ ಮಾಡುವಾಗ ಕಾಲುಜಾರಿ ನದಿಯಲ್ಲಿ ಮುಳುಗಿ ಮಹಿಳೆ ಸಾವನ್ನಪ್ಪಿದ ಘಟನೆ ಕೂಡಲಸಂಗಮದಲ್ಲಿ ನಡೆದಿದೆ ಕುಟುಂಬ ಸಮೇತರಾಗಿ ಗದಗ ನಗರದ ದಾಸರ ಓಣೆಯ ನಿವಾಸಿಗಳು ಸಂಗಮನಾಥನ ದೇವಸ್ಥಾನಕ್ಕೆ ಬಂದು ಸ್ನಾನ ಮಾಡುವಾಗ ಕಾಲು ಜಾರಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಮಹಿಳೆಯನ್ನು ಜ್ಯೋತಿ ಶರಣಪ್ಪ ಬುಡಕಹಳ್ಳಿ (23) ಎಂದು ಗುರುತಿಸಲಾಗಿದೆ ಮಹಿಳೆ 4 ತಿಂಗಳ ಗರ್ಭಿಣಿಯಾಗಿದ್ದಳು ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.

ಹುನಗುಂದದ ಪಿಎಸ್‌ಐ ರವರು ದೂರವಾಣಿ ಕರೆಮಾಡಿ ಅಗ್ನಿಶಾಮಕ ಠಾಣೆಗೆ ತಿಳಿಸಿದ ತಕ್ಷಣ ಜಗದೀಶ ಗಿರಡ್ಡಿ ನೇತೃತ್ವದ ಅಗ್ನಿಶಾಮಕ ತಂಡ ಬೋಟ್ ನೊಂದಿಗೆ ಕಾರ್ಯಾಚರಣೆ ಪ್ರಾರಂಭಿಸಿ ಕೇವಲ 30 ನಿಮಿಷದಲ್ಲಿ ಮೃತ ಮಹಿಳೆಯ ಶವವನ್ನು ಹುಡುಕುವಲ್ಲಿ ಅಗ್ನಿಶಾಮಕ ಸಿಬ್ಬಂದಿ ಯಶಸ್ವಿಯಾದರು. ಅಗ್ನಿಶಾಮಕ ಕಾರ್ಯಾಚರಣೆ ತಂಡದಲ್ಲಿ ಮಾನಸಿಂಗ ಲಮಾಣಿ, ಅಮೀನಸಾಬ ಕಂದಗಲ್, ಬಸವರಾಜ್ ರಾಥೋಡ್, ಸತೀಶ್ ರಾಥೋಡ್, ರವಿ ಲಮಾಣಿ, ಬೋಟ್ ನೊಂದಿಗೆ ಕಾರ್ಯಚರಣೆಗೆ ಪೊಲೀಸ್ ಸಿಬ್ಬಂದಿ ಕೂಡ ಅಗ್ನಿ ಶಾಮಕ ಸಿಬ್ಬಂದಿ ಸಾಥ ನೀಡಿ ಶವ ಹುಡುಕುವಲ್ಲಿ ಯಶಸ್ವಿಯಾದರು.

ವರದಿ:ವಿನೋದ ಬಾರಿಗಿಡದ ಇಳಕಲ್

error: