December 21, 2024

Bhavana Tv

Its Your Channel

ಸಾವಳಗಿ; 73ನೆ ಗಣರಾಜ್ಯೋತ್ಸವ ಆಚರಣೆ

ಸಾವಳಗಿ: ಸಾವಳಗಿ ಗ್ರಾಮದ ಪ್ರವಾಸಿ ಮಂದಿರದಲ್ಲಿ ಶ್ರೀಧರ ವಜ್ರವಾಡ,ಗ್ರಾಮ ಪಂಚಾಯತಿ ಆವರಣದಲ್ಲಿ ಅಭಿವೃದ್ಧಿ ಅಧಿಕಾರಿ ಗಿರೀಶ ಕಡಕೋಳ, ನಾಡ ಕಾರ್ಯಾಲಯದ ಆವರಣದಲ್ಲಿ ಉಪ ತಹಶಿಲ್ದಾರ ಎ ಕೆ ಇಂಡಿಕರ, ಸಾವಳಗಿ ಪೋಲಿಸ್ ಠಾಣೆಯ ಮುಂಭಾಗ ಸಚೀನ ಆಲಮೇಲಕರ, ಧ್ವಜಾರೋಹಣ ನೇರವೆರಿಸಿದರು ಸರಕಾರಿ ಕನ್ನಡ ಹೆಣ್ಣು ಮಕ್ಕಳ ಶಾಲೆಯ ಮಕ್ಕಳು ನಾಡಿಗಾಗಿ ಮತ್ತು ದೇಶಕ್ಕಾಗಿ ಹೋರಾಟ ಮಾಡಿದ ಮಹಾ ನಾಯಕರ ವೇಷಭೂಷಣ ಹಾಕಿ ಗಮನ ಸೆಳೆದರು. ಇದೆ ಸಂಧರ್ಭದಲ್ಲಿ ಸಾವಳಗಿ ಗ್ರಾಮದ ಯುವತಿ ಪ್ರಪ್ರಥಮ ಬಾರಿಗೆ ಪೊಲೀಸ್ ಇಲಾಖೆಯ ಪಿಎಸ್ ಐ ಹುದ್ದೆಗೆ ಆಯ್ಕೆಯಾದ ಕುಮಾರಿ ಆರತಿ ಶೇಖರ ತೇಲಿ ಇವರನ್ನು ಗ್ರಾಮ ಪಂಚಾಯತಿ ಹಾಗೂ ನಾಡ ಕಾರ್ಯಾಲಯದ ಆವರಣದಲ್ಲಿ ಎಲ್ಲಾ ಸಂಘಟನೆ ಮತ್ತು ಸಮಾಜದ ಮುಖಂಡರು ಸಾಧನೆ ಮಾಡಿದ ಯವತಿಯನ್ನು ಸನ್ಮಾನಿಸಿದರು. ಶಾಲಾ ಮಕ್ಕಳು ಪರೇಡ ಮಾಡಿ ಗೌರವ ವಂದನೆ ಸೂಚಿಸಿ ಸಾರ್ವಜನಿಕರ ಗಮನ ಸೆಳೆದರು. ಈ ಸಂಧರ್ಭದಲ್ಲಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತ ಉಪಾಧ್ಯಕ್ಷ ಸುಶೀಲಕುಮಾರ ಬೆಳಗಲಿ ಶಿಕ್ಷಣವನ್ನು ನಾವು ನಮ್ಮ ಮಕ್ಕಳಿಗೆ ಎಷ್ಟು ಕಲಿಸುತ್ತೆವೆ ಅಷ್ಟೇ ನಮ್ಮ ಜೀವನ ಮುಂದೆ ಸುಖಮಯವಾಗಿರುತ್ತದೆ ನಾವು ಕೋಟಿಗಟ್ಟಲೆ ಆಸ್ತಿ ಮಾಡಿ ಶಿಕ್ಷಣ ಇಲ್ಲದಿದ್ದರೆ ಎನು ಪ್ರಯೋಜನ ಇಲ್ಲ ನಮ್ಮ ಗ್ರಾಮದ ಯುವತಿ ಪಿಎಸ್ ಐ ಹುದ್ದೆಗೆ ಆಯ್ಕೆಯಾಗಿದ್ದು ಸಂತಸ ತಂದಿದೆ ಇನ್ನು ಹೆಚ್ಚು ಉನ್ನತ ಮಟ್ಟದ ಅಧಿಕಾರಿಯಾಗಿ ನೊಂದವರ ಬಾಳಿಗೆ ಬೆಳಕಾಗಿ ಸೇವೆ ಸಲ್ಲಿಸಲಿ. ಎಲ್ಲರಿಗೂ 73ನೇ ಗಣರಾಜ್ಯೋತ್ಸವದ ಶುಭಾಶಯಗಳು ಎಂದು ಹೇಳಿದರು. ಈ ಸಂಧರ್ಭದಲ್ಲಿ ಕಂದಾಯ ನೀರಿಕ್ಷಕ ಪ್ರಕಾಶ ಪವಾರ,ರಾಜು ಮೇಲಿನಕೇರಿ, ಅರವಿಂದ ಬೆಳಗಲಿ, ರಾಜುಗೌಡ ಪಾಟೀಲ,ಸುಭಾಷ ಪಾಟೂಳಿ ಸೇರಿದಂತೆ ಅನೇಕರು ಇದ್ದರು.

ವರದಿ: ಕಿರಣ ಸೂರಗೂಂಡ ಸಾವಳಗಿ

error: