ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಶ್ರೀಕ್ಷೇತ್ರ ಸಿದ್ಧನಕೊಳ್ಳದಲ್ಲಿ ಪಿ.ದಿಕ್ಷಿತ ಪೌಂಡೆಶನ್, ಶೂಲೆಭಾವಿ& ಎಸ್. ಎಸ್.ಕೆ.ಸಮಾಜ, ನವ ಕರ್ನಾಟಕ ಚಲನಚಿತ್ರ ಅಕಾಡೆಮಿ, ಧಾರವಾಡ ಶ್ರೀ ಸಿದ್ಧಶ್ರೀ ಗ್ರಾಮೀಣಾಭಿವೃ
ಧ್ಧಿ&ಸಮಾಜ ಸೇ ವಾಶ್ರಮ.ರಿ ಮಾರನಬಸರಿ ಶ್ರೀ ಕ್ಷೇತ್ರ ಸಿದ್ಧನಕೊಳ್ಳ ಇವರುಗಳ ಸಹ ಯೋಗದೊಂದಿಗೆ & ಶ್ರೀ ಡಾಕ್ಟರ್ ಶಿವಕುಮಾ ರ ಸ್ವಾಮಿಗಳು ಇವರ ಸಾನಿಧ್ಯದಲ್ಲಿ ಶ್ರೀ ಸಿದ್ದಶ್ರೀ ರಾಷ್ಟ್ರೀಯ ಉತ್ಸವ ಹಾಗೂ ಅಂತರ ರಾಷ್ಟ್ರೀಯ ಚಲನಚಿತ್ರೋತ್ಸವ -2022 ದ ಉದ್ಘಾಟನಾ ಹಾಗೂ ಸನ್ಮಾನ ಸಮಾರಂಭವು ಅ ದ್ಧೂರಿಯಾಗಿ ಜರುಗಿತು.
ಈ ಸಮಾರಂಭದ ಉದ್ಘಾಟನೆಯು ಚಲನಚಿತ್ರ, ನಿರ್ಮಾಪಕರಾದ ಸೂಚಿಂದ್ರ ಪ್ರಸಾದ, ಆರ್.ವಿ ಗುರಪಾಸಮ್. ನಟ ಪಿ.ದಿಕ್ಷಿತ್, ನವಕರ್ನಾಟಕ ಅಕಾಡೆಮಿ ಅಧ್ಯಕ್ಷ ಡಾಕ್ಟರ್ ಎಮ್.ಎ ಮಮ್ಮಿಗಟ್ಟಿ, ಮುಖಂಡರಾದ ಸುರೇಶ ಹಳಪೇಟಿ, ಮಲ್ಲು ವೀರಾಪೂರ,ಕರವೇ ಜಿಲ್ಲಾಧ್ಯಕ್ಷ ರಮೇಶ ಬದ್ನೂರ, ಪೋಲಿಸ್ ವೃತ್ತ ನೀರೀಕ್ಷಕರಾದ ಹೊಸಕೇರಪ್ಪ ಕೋಳೂರ, ಅಮೀನಗಡ ಠಾಣೆ ಪಿಎಸ್ ಐ ಎಮ್.ಜಿ.ಕುಲಕರ್ಣಿ,ಸೇರಿದಂತೆ ಅನೇಕ ನಟರು,ಕಲಾವಿದರು,ಉದ್ಘಾಟನಾ ಸಮಾರಂಭಕ್ಕೆ ಸಾಕ್ಷಿಯಾದರು. ಎಲ್ಲ ಅತಿಥಿಗಳಿಗೆ ಸತ್ಕಾರ ನಡೆಯಿತು ಕರವೇ ಅಧ್ಯಕ್ಷರಾದ ನಾರಯಣಗೌಡ ಅನುಪಸ್ಥಿತಿಯಲ್ಲಿ ರಮೇಶ ಬದ್ನೂರ ಸಿದ್ಧಶ್ರೀ ಪ್ರಶಸ್ತಿ ಸ್ವೀಕರಿಸಿದರು.
ನಂತರ ಶ್ರೀಗಳು ಹಿಂದೂ-ಮುಸ್ಲಿo ಸ್ವಾತಂತ್ರ‍್ಯ, ಸಮಾನತೆ, ಸೌಹಾರ್ದ ಭಾವೈಕ್ಯತೆ ಸಹನೆಯಂತಹ ಮಾನವಿಕ ಮೌಲ್ಯಗಳ ಪ್ರತೀಕದಂತೆ ಈ ಮಠಕ್ಕೆ 30 ವರ್ಷಗಳಿಂದ ಪ್ರತಿವರ್ಷದ ಉತ್ಸವದ ದಾಸೋಹಕ್ಕೆ ತರಕಾರಿಯನ್ನು ಮುಸ್ಲಿಂ ಸಮುದಾಯ ಉಚಿತವಾಗಿ ನೀಡಿದನ್ನು ಸ್ಮರಿಸುತ್ತ, ಪ್ರಸ್ತುತ ಕೋಮುದಳ್ಳುರಿಗೆ ರಾಜಕೀಯ ದುರ ದ್ದೇಶದ ದ್ರುವೀಕರಣದ ಷಡಯಂತ್ರ ಭಾಗವಾಗಿದೆ. ಈ ಕುತಂತ್ರ ಬಹಳ ದಿನ ನಡೆಯದು,ಜನ ತಕ್ಕಪಾಠ ಕಲಿಸಿ,ಹೊಡೆದೋಡಿಸುವ ದಿನಗಳು ದೂರಿವಿಲ್ಲವೆಂದು ಎಚ್ಚರಿಸಿದರು
ವರದಿ: ವಿನೋದ ಬಾರಿಗಿಡದ
More Stories
ಹೆಜ್ಜೆ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿ ಸಂಸ್ಥೆ ವತಿಯಿಂದ ನಿವೃತ್ತ ಶಿಕ್ಷಕರಿಗೆ ಗುರುವಂದನಾ ಸಮಾರಂಭ
ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ಕೆಎಚ್ ಡಿ ಸಿ ಇಲಕಲ್ ಉಪಕೇಂದ್ರ ಕಮತಗಿ ಯಲ್ಲಿ ನೇಕಾರರಿಂದ ಪ್ರತಿಭಟನೆ
ಮೂರುದಿನಗಳ ಪೌರತ್ವ ತರಬೇತಿ ಶಿಬಿರಕ್ಕೆ ಚಾಲನೆ